ಈ 7-ಸೀಟರ್ ಕಾರುಗಳಿಗೆ ಮುಗಿಬಿದ್ದ ಜನ: ಕಿಚ್ಚೆಬ್ಬಿಸಿವೆ ಮಹೀಂದ್ರಾ ಎಸ್‌ಯುವಿಗಳು!
ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಎಸ್‌ಯುವಿಗಳ ಮಾರಾಟವು ದುಪ್ಪಟ್ಟು ಆಗಿದೆ. ಸೆಡಾನ್‌ಗಳು ಹಾಗೂ ಇತರ ಸೆಗ್ಮೆಂಟಿನ ಕಾರುಗಳಿಗೆ ಹೋಲಿಸಿದರೆ ಸದ್ಯ ದೇಶದಲ್ಲಿ ಮಾರಾಟವಾಗುವ ಒಟ್ಟು ಕಾರುಗಳಲ್ಲಿ ಶೇ54 ರಷ್ಟು ಪಾಲನ್ನು ಎಸ್‌ಯುವಿಗಳೆ ಹೊಂದಿವೆ. ಹ್ಯುಂಡೈ ಕ್ರೆಟಾ, ಕಿಯಾ ಸೊನೆಟ್, ಟಾಟಾ ಪಂಚ್, ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ ಮತ್ತು ಮಾರುತಿ ಸುಜುಕಿ ಫ್ರಾಂಕ್ಸ್ ಅತ್ಯಂತ ಜನಪ್ರಿಯ ಎಸ್‌ಯುವಿಗಳಾಗಿವೆ. ಈ ವರ್ಷ ಹೆಚ್ಚು ಮಾರಾಟವಾದ ಎಲ್ಲಾ ಎಸ್‌ಯುವಿಗಳಲ್ಲಿ, ಕೇವಲ ಒಂದು ಮೂರು ಸಾಲಿನ ಮಾದರಿ ಮಾತ್ರ 1 ಲಕ್ಷ ಮಾರಾಟದ ಗಡಿಯನ್ನು ದಾಟಿದೆ.
ಹೌದು, ಮಹೀಂದ್ರಾ ಕಂಪನಿಯ ಪ್ರಮುಖ ಎಸ್‌ಯುವಿಯಾಗಿರುವ ಸ್ಕಾರ್ಪಿಯೋ ಈ ದಾಖಲೆಯನ್ನು ನಿರ್ಮಿಸಿದೆ. ಎಲ್ಲರಿಗೂ ತಿಳಿದಿರುವಂತೆ ಸ್ಕಾರ್ಪಿಯೋ ಕ್ಲಾಸಿಕ್ ಕಂಪನಿಯ ಪ್ರಮುಖ ಮಾದರಿಯಾಗಿತ್ತು. ಇದರ ಉತ್ತರಾಧಿಕಾರಿಯಾಗಿ ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯನ್ನು ಮಹೀಂದ್ರಾ ಹೊಸದಾಗಿ ಬಿಡುಗಡೆ ಮಾಡಿತ್ತು. ಇಂದಿಗೂ ಉತ್ತಮ ಬೇಡಿಕೆ ಉಳಿಸಿಕೊಂಡಿರುವ ಹಳೆಯ ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಸದ್ಯ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡಲಾಗುತ್ತಿದೆ.

ಒಟ್ಟಾರೆ ಎರಡೂ ಸ್ಕಾರ್ಪಿಯೋ ಕಾರುಗಳ ಮಾರಾಟವನ್ನು ಗಣನೆಗೆ ತೆಗೆದುಕೊಂಡರೆ, 2024 ರ ಜನವರಿಯಿಂದ ನವೆಂಬರ್ ಅವಧಿಯಲ್ಲಿ 1,54,169 ಯುನಿಟ್ ಕಾರುಗಳ ಮಾರಾಟದೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ ಈ ವರ್ಷ ಹೆಚ್ಚು ಮಾರಾಟವಾದ ಮೂರು ಸಾಲಿನ ಎಸ್‌ಯುವಿಯಾಗಿದೆ. ಈ ಮಾರಾಟ ಅಂಕಿಅಂಶಗಳು ಮಹೀಂದ್ರಾ ಸ್ಕಾರ್ಪಿಯೋ-ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಎರಡನ್ನು ಒಟ್ಟುಗೂಡಿಸಿದ್ದಾಗಿದೆ.
ಸ್ಕಾರ್ಪಿಯೋ-ಎನ್ ವಿಶೇಷತೆಗಳು: ಸ್ಕಾರ್ಪಿಯೋ - ಎನ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 13.85 ಲಕ್ಷದಿಂದ ರೂ. 24.54 ಲಕ್ಷಗಳಾಗಿದೆ. ಇದು ಝಡ್ 2, ಝಡ್ 4, ಝಡ್ 6 ಮತ್ತು ಝಡ್ 8 ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದು 6- ಮತ್ತು 7-ಆಸನಗಳ ಸಂರಚನೆಗಳನ್ನು ಹೊಂದಿದೆ.

ಸ್ಕಾರ್ಪಿಯೋ-ಎನ್ ಕಾರಿನಲ್ಲಿ 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ವೈರ್ ಲೆಸ್ ಫೋನ್ ಚಾರ್ಜಿಂಗ್, 6-ವೇ ಪವರ್ಡ್ ಡ್ರೈವರ್ ಸೀಟ್, ಸನ್‌ರೂಫ್ ಮತ್ತು 12-ಸ್ಪೀಕರ್ ಸೌಂಡ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಆಟೋ-ಡಿಮ್ಮಿಂಗ್ ಐಆರ್‌ವಿಎಂ (ಇನ್ಸೈಡ್ ರಿಯರ್ ವ್ಯೂ ಮಿರರ್) ಹೊಂದಿದೆ.
ಸ್ಕಾರ್ಪಿಯೋ - ಎನ್ ಎಸ್‌ಯುವಿಯ ಸುರಕ್ಷತೆಯ ವಿಷಯಕ್ಕೆ ಬಂದರೆ ಆರು ಏರ್ ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳು, ಹಿಲ್ ಅಸಿಸ್ಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಅನ್ನು ಒಳಗೊಂಡಿದೆ.

ಸ್ಕಾರ್ಪಿಯೋ ಕ್ಲಾಸಿಕ್ ವಿಶೆಷತೆಗಳು: ಕಾರಿನ ಬೆಲೆಯು ರೂ.13.62 ಲಕ್ಷದಿಂದ ರೂ.17.42 ಲಕ್ಷಗಳಾಗಿದೆ. ಸ್ಕಾರ್ಪಿಯೋ ಕ್ಲಾಸಿಕ್ ಅನ್ನು S, S11 ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದು 7 ಮತ್ತು 9-ಸೀಟರ್ ವಿನ್ಯಾಸದಲ್ಲಿ ಖರೀದಿಗೆ ಲಭ್ಯವಿದೆ. ಇದು 9-ಇಂಚಿನ ಟಚ್ ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಎತ್ತರ-ಸರಿಹೊಂದಿಸಬಹುದಾದ ಡ್ರೈವರ್ ಸೀಟ್ ಮತ್ತು 2 ಮತ್ತು 3 ನೇ ಸಾಲಿನ ವೆಂಟಿಲೇಟೆಡ್ ಸೀಟ್‌ಗಳೊಂದಿಗೆ ಆಟೋ ಎಸಿಯನ್ನು ಹೊಂದಿದೆ.
ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಹೊಂದಿದೆ. ಈ ಎರಡೂ ಎಸ್‌ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಅಲ್ಕಾಜಾರ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಮಹೀಂದ್ರಾ ಎಕ್ಸ್ ಯುವಿ 700 ಗೆ ಪೈಪೋಟಿ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








