ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ ಮಾರಾಟಕ್ಕೆ.. ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು!
ಉದ್ಯಮಿ ಆನಂದ್ ಮಹೀಂದ್ರಾ ಒಡೆತನದ ಮಹೀಂದ್ರಾ & ಮಹೀಂದ್ರಾ (Mahindra & Mahindra) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ವರ್ಷಗಳಿಂದ ಕಂಪನಿಯು ಮಾರಾಟಗೊಳಿಸುವ 'ಸ್ಕಾರ್ಪಿಯೋ' ಪ್ರಖ್ಯಾತ ಎಸ್‌ಯುವಿಯಾಗಿದೆ. ಇತ್ತೀಚೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಹೊಚ್ಚ ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ (Scorpio Classic Boss Edition) ಕಾರನ್ನು ಮಾರಾಟಕ್ಕೆ ತರಲಾಗಿದೆ. ಬನ್ನಿ.. ಈ ಎಸ್‌ಯುವಿಯ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಸೇರಿದಂತೆ ಪ್ರಮುಖಾಂಶಗಳ ಕುರಿತಂತೆ ಸಂಪೂರ್ಣವಾದ ವಿವರ ತಿಳಿಯೋಣ.
ವಿನ್ಯಾಸ (Design): ನೂತನ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ ಕಾರು, ಹೊರ ಭಾಗದಲ್ಲಿ (ಔಟ್-ಸೈಡ್) ನೋಡುಗರ ಕಣ್ಣು ಕುಕ್ಕುವಂತಹ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಈ ಎಸ್‌ಯುವಿಯೂ ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಕೂಡಿದೆ. ಅಲ್ಲದೇ ಬಂಪರ್‌ಗಳು, ಹೈಡ್‌ಲೈಟ್‌ಗಳು, ಫಾಗ್ ಲೈಟ್ ಮತ್ತು ಡೋರ್ ಹ್ಯಾಂಡಲ್‌ಗಳಲ್ಲಿಯೂ ಕಪ್ಪು (ಬ್ಲ್ಯಾಕ್) ಬಣ್ಣವೇ ಆವರಿಸಿಕೊಂಡಿದೆ.

ಒಳಭಾಗದ ವಿನ್ಯಾಸ: ಈ ಕಾರಿನ ಒಳಾಂಗಣ (ಇನ್-ಸೈಡ್) ವಿನ್ಯಾಸವು ಅತ್ಯುತ್ತಮವಾಗಿದ್ದು, ಡುಯಲ್ ಟೋನ್ ಡ್ಯಾಶ್‌ಬೋರ್ಡ್‌ನ್ನು ಹೊಂದಿದೆ. ಆಸನಗಳು (ಸೀಟ್‌ಗಳು) ಕೂಡ ಕಪ್ಪು ಬಣ್ಣವನ್ನೇ ಪಡೆದಿವೆ. ಇದರಲ್ಲಿ 7 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ಜೊತೆಗೆ 5-ಡೋರ್‌ಗಳ (ಬಾಗಿಲುಗಳು) ಆಯ್ಕೆಯನ್ನು ಒಳಗೊಂಡಿದೆ.
ಕಾರ್ಯಕ್ಷಮತೆ (Performance): ಹೊಸ ಎಸ್‌ಯುವಿ ಗರಿಷ್ಠ ಶಕ್ತಿ ಹೊರಹಾಕಬಲ್ಲ ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 2.2-ಲೀಟರ್ ಡೀಸೆಲ್ ಎಂಜಿನ್, 132 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 300 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 14.44 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ವೈಶಿಷ್ಟ್ಯಗಳು (Features): ನೂತನ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ ಕಾರು ಹಲವು ನವೀನ ಬಗೆಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (9-ಇಂಚು), ಆಟೋ ಎಸಿ, ಕ್ರೂಸ್ ಕಂಟ್ರೋಲ್, ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರೇರ್ ಪಾರ್ಕಿಂಗ್ ಸೆನ್ಸಾರ್‌ಗಳು ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಬೆಲೆ (Price): ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ ಎಸ್‌ಯುವಿ ಬೆಲೆಯನ್ನು ಈವೆರೆಗೆ ಘೋಷಣೆ ಮಾಡಿಲ್ಲ. ಸದ್ಯ ಗ್ರಾಹಕರ ಖರೀದಿಗೆ ದೊರೆಯುವ ಈ ಕಾರಿನ ಇತರೆ ಮಾದರಿಗಳು (ಮಾಡೆಲ್), ಕನಿಷ್ಠ ರೂ.13.62 ಲಕ್ಷ ಹಾಗೂ ಗರಿಷ್ಠ ರೂ.7.42 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿವೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿಯೂ ಖರೀದಿಗೆ ಲಭ್ಯ: ಈ ಕಾರು ರೂ.13.85 ಲಕ್ಷದಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್-ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸ್ಕಾರ್ಪಿಯೋ ಮಾರಾಟ ಹೇಗಿದೆ: ಮಹೀಂದ್ರಾ ಸ್ಕಾರ್ಪಿಯೋ ಎನ್ ಹಾಗೂ ಕ್ಲಾಸಿಕ್ ಮಾದರಿಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿವೆ. ಅದನ್ನು ಪುಷ್ಠಿಕರಿಸುವಂತೆ ಕಳೆದ ತಿಂಗಳು (ಸೆಪ್ಟೆಂಬರ್ - 2024) 14,438 ಯುನಿಟ್ ಸ್ಕಾರ್ಪಿಯೋ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ 11,846 ಯುನಿಟ್‌ಗಳನ್ನು ಮಾರಲಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








