Mahindra Scorpio: ಪೆಟ್ರೋಲ್‌ಗಿಂತ ಡೀಸೆಲ್ ಮಾದರಿಗೆ ಮುಗಿಬಿದ್ದ ಜನ... ಕಾರಣವೇನು?

ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ (Mahindra) ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೊವನ್ನು ಎರಡೂ ರೂಪದಲ್ಲಿ ಮಾರಾಟ ಮಾಡುತ್ತಿದೆ. ಇದು ಮಹೀಂದ್ರಾ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಆಗಿದೆ. ಮಹೀಂದ್ರಾ ಕಂಪನಿಯು ತನ್ನ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಮಾದರಿಯ ಮಾರಾಟದ ಸಂಖ್ಯೆಯನ್ನು ಬಹಿರಂಗಪಡಿಸಿದೆ.

2024ರ ಜನವರಿ ತಿಂಗಳಿನಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಸರಣಿಯ ಡೀಸೆಲ್ ರೂಪಾಂತರಗಳ ಒಟ್ಟು 13,528 ಯುನಿಟ್ ಗಳು ಮಾರಾಟ ಮಾಡಿದೆ. ಇದರ ಪೆಟ್ರೋಲ್ ರೂಪಾಂತರಗಳು 765 ಯುನಿಟ್‌ಗಳ ಮಾರಾಟ ಮಾಡಿದೆ. ಡೀಸೆಲ್ ರೂಪಾಂತರಗಳು ಕಳೆದ ತಿಂಗಳವರೆಗೆ ಮಾರಾಟದಲ್ಲಿ 94 ಪ್ರತಿಶತವನ್ನು ಹೊಂದಿವೆ. ಕಾರು ತಯಾರಕರು ಕಳೆದ ತಿಂಗಳು ಇದೇ ಅವಧಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ರೂಪಾಂತರಗಳಿಗಾಗಿ ಕ್ರಮವಾಗಿ 8,061 ಯುನಿಟ್‌ಗಳು ಮತ್ತು 654 ಯುನಿಟ್‌ಗಳ ಮಾರಾಟ ಮಾಡಿದ್ದರು.

Mahindra Scorpio

ಉತ್ಪಾದನಾ ಸಂಖ್ಯೆಗೆ ಸಂಬಂಧಿಸಿದಂತೆ, ಮಹೀಂದ್ರಾ ಕಂಪನಿಯು ಕ್ರಮವಾಗಿ ಡೀಸೆಲ್ ಮತ್ತು ಪೆಟ್ರೋಲ್ ಮಹೀಂದ್ರಾ ಸ್ಕಾರ್ಪಿಯೊ ಸರಣಿಯ 15,745 ಯುನಿಟ್ ಗಳು ಮತ್ತು 1,171 ಯುನಿಟ್ ಗಳನ್ನು ತಯಾರಿಸಿದೆ. ಇನ್ನು ಮಹೀಂದ್ರಾ ಕಂಪನಿಯು ಸ್ಕಾರ್ಪಿಯೊ ಎಸ್‍ಯುವಿಯ ರಫ್ತು ಬಗ್ಗೆ ಹೇಳುವುದಾದರೆ, 587 ಯುನಿಟ್‌ಗಳಿಂದ ಕಳೆದ ತಿಂಗಳು 170 ಯುನಿಟ್‌ಗಳಿಗೆ ಇಳಿದಿದೆ. ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ (Scorpio) ಎರಡು ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ 2 ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 bhp ಪವರ್ ಹಾಗೂ 380 Nm ಪೀಕ್ ಟಾರ್ಕ್, ಮತ್ತೊಂದು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 172 bhp ಗರಿಷ್ಠ ಪವರ್ ಮತ್ತು 370 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Mahindra Scorpio

ಈ ಮಹೀಂದ್ರಾ ಸ್ಕಾರ್ಪಿಯೋ ಎನ್ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಿಲ್ - ಅಸಿಸ್ಟ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಒಳಗೊಂಡಿದೆ. ಈ ಕಾರಿಗೆ ಟಾಟಾ ಹ್ಯಾರಿಯರ್, ಸಫಾರಿ ಮತ್ತು ಹ್ಯುಂಡೈ ಕ್ರೆಟಾ/ಅಲ್ಕಾಜರ್ ಪ್ರತಿಸ್ಪರ್ಧಿಯಾಗಿವೆ.

ಹೀಂದ್ರಾ ಕಂಪನಿಯು ಹಳೆಯ ತಲೆಮಾರಿನ ನವೀಕೃತ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic) ಎಸ್‌ಯುವಿ ಮಾದರಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ನವೀಕರಿಸಿದ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯು ಗಟ್ಟಿಮುಟ್ಟಾದ ನಿರ್ಮಾಣ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸಿಗ್ನೇಚರ್ ಬೋಲ್ಡ್ ಲುಕ್‌ನೊಂದಿಗೆ ಎಸ್‍ಯುವಿ ದೇಶದಾದ್ಯಂತ ಗ್ರಾಹಕರನ್ನು ಆಕರ್ಷಿಸುತ್ತಿದೆ.

Mahindra Scorpio

ಇದರ ಜನಪ್ರಿಯತೆಯಿಂದಾಗಿ, ಮೂರನೇ ತಲೆಮಾರಿನ ಮಾದರಿಯ ಆಗಮನದ ಹೊರತಾಗಿಯೂ, ಸ್ಕಾರ್ಪಿಯೊ ಎನ್, ಮಹೀಂದ್ರಾ ಎರಡನೇ ತಲೆಮಾರಿನ ಮಾದರಿಯನ್ನು ಮಾರಾಟದಲ್ಲಿ ಇರಿಸಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಈ ಮಾದರಿಗೆ ಸ್ಕಾರ್ಪಿಯೊ ಕ್ಲಾಸಿಕ್ ಎಂದು ಮರುನಾಮಕರಣ ಮಾಡಿದರು. ಸ್ಕಾರ್ಪಿಯೋ ಕ್ಲಾಸಿಕ್ ರಿಫ್ರೆಶ್ ಲುಕ್ ಮತ್ತು ಪವರ್‌ಟ್ರೇನ್ ಅಪ್‌ಗ್ರೇಡ್‌ಗಳು ಎಸ್‌ಯುವಿಯ ಮಾರಾಟಕ್ಕೆ ಒಲವು ತೋರುತ್ತಿವೆ.

ಹಳೆಯ ಸ್ಕಾರ್ಪಿಯೋ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ವಿನ್ಯಾಸದಲ್ಲಿ ತುಸು ಹೊಸ ಬದಲಾವಣೆ ತರಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್ ಸಹ ಹೊಂದಿದೆ. ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದರೆ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯು ಈ ಹಿಂದಿನ ತಲೆಮಾರಿನ ಫೀಚರ್ಸ್ ಗಳೊಂದಿಗೆ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿತು.

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಇದರಲ್ಲಿ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿಲ್ಲ. ಈ ಎಸ್‍ಯುವಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಇದು 132 ಬಿಎಚ್‌ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Article Published On: Wednesday, February 14, 2024, 13:31 [IST]
English summary
Mahindra scorpio diesel variants sales in january 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+