Mahindra: ಫುಲ್ ಡಿಮ್ಯಾಂಡ್: ಈ ಕಾರಿಗಾಗಿ ಮುಗಿಬಿದ್ದ ಜನ... 12,700 ಎಸ್‌ಯುವಿಗಳು ಸೋಲ್ಡ್ ಔಟ್!
ಮಹೀಂದ್ರಾ ಕಂಪನಿಗೆ ಭಾರೀ ಹೆಸರು ತಂದುಕೊಟ್ಟಿರುವ ಸ್ಕಾರ್ಪಿಯೋ ಎಸ್‌ಯುವಿಗೆ ಉತ್ತರಾಧಿಕಾರಿಯಾಗಿ ಎಂಟ್ರಿ ಕೊಟ್ಟಿರುವ ಸ್ಕಾರ್ಪಿಯೋ-ಎನ್ ಎಸ್‌ಯುವಿ ಮಾರಾಟದಲ್ಲಿ ಧೂಳೆಬ್ಬಿಸಿದೆ. ನವೆಂಬರ್ 2024 ರಲ್ಲಿ 12,704 ಯುನಿಟ್ ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 12,185 ಯುನಿಟ್ ಎಸ್‌ಯುವಿಗಳು ಮಾರಾಟವಾಗಿದ್ದವು. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡಾ 4 ರಷ್ಟು ಬೆಳವಣಿಗೆ ಸಾಧಿಸಿದೆ. ಹಾಗೆಯೇ ಕಂಪನಿಯ ಒಟ್ಟಾರೆ ವಾಹನ ಮಾರಾಟ ಕೂಡ ಉತ್ತಮ ಬೆಳವಣಿಗೆ ಸಾಧಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಮಹೀಂದ್ರಾದ ಎಲ್ಲಾ ಎಸ್‌ಯುವಿಗಳು ಸೇರಿಂದತೆ 39,981 ಯುನಿಟ್ ಎಸ್‌ಯುವಿಗಳು ಮಾರಾಟವಾಗಿದ್ದವು. ಈ ವರ್ಷ ಒಟ್ಟು 46,222 ಯುನಿಟ್ ಎಸ್‌ಯುವಿಗಳು ಮಾರಾಟವಾಗುವ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡಾ 15.6 ರಷ್ಟು ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಒಟ್ಟಾರೆ ದೇಶದ ವಾಹನ ಮಾರಾಟ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿಶೇಷತೆಗಳು: ಭಾರತದಲ್ಲಿ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ಬೇಸ್ ವೇರಿಯೆಂಟ್ ರೂ.13.85 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರ ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ.24.54 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಈ ಎಸ್‌ಯುವಿ ಎರಡು ಸೀಟಿಂಗ್ ಕಾನ್ಫಿಗರೇಶನ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ಫೀಚರ್ಸ್: ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾಫಿ-ಬ್ಲ್ಯಾಕ್ ಲೆದರ್ ಇಂಟೀರಿಯರ್, ಎಲೆಕ್ಟ್ರಿಕ್ ಸನ್ ರೂಫ್, 20.32 ಸೆಂ.ಮೀ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 17.78 ಸೆಂ.ಮೀ ಕಲರ್ ಟಿಎಫ್‌ಟಿ ಡ್ರೈವರ್ ಡಿಸ್ಪ್ಲೆ ಒಳಗೊಂಡಿದೆ. ಇದು 60ಕ್ಕೂ ಹೆಚ್ಚು ಇನ್-ಕಾರ್ ಕನೆಕ್ಟೆಡ್ ಫೀಚರ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇಯೊಂದಿಗೆ ಅಡ್ರೆನಾಕ್ಸ್ ಕನೆಕ್ಟ್ ಹೊಂದಿದೆ.

ಇದು ವರ್ಧಿತ ಸವಾರಿ ಆರಾಮ ಮತ್ತು ನಿರ್ವಹಣೆಗಾಗಿ ಫ್ರೀಕ್ವೆನ್ಸಿ ಡಿಪೆಂಡೆಂಟ್ ಡ್ಯಾಂಪಿಂಗ್ ಮತ್ತು ಮಲ್ಟಿ-ಟ್ಯೂನ್ಡ್ ವಾಲ್ವ್ ಸೆಂಟ್ರಲ್ ಲ್ಯಾಂಡ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಆರು ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಮತ್ತು ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ.
ಎಂಜಿನ್: ಮಹೀಂದ್ರಾ ಸ್ಕಾರ್ಪಿಯೋ-ಎನ್ 2.2 ಲೀಟರ್ ಎಂಹಾಕ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಮತ್ತು 2.0 ಲೀಟರ್ ಎಂಹಾಕ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ ಡೀಸೆಲ್ ಎಂಜಿನ್ 175 ಬಿಹೆಚ್ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಾಗೆಯೇ ಪೆಟ್ರೋಲ್ ಎಂಜಿನ್ 200 ಬಿಹೆಚ್ ಪವರ್ ಹಾಗೂ 380 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಪವರ್ ಟ್ರೇನ್ ಗಳನ್ನು 6 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಹಾಗೂ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನೊಂದಿಗೆ ಜೋಡಿಸಲಾಗಿದೆ. ಈ ದೈತ್ಯ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








