Mahindra: ಸ್ಕಾರ್ಪಿಯೊ ಎನ್ ಕಾರಿಗೆ ಹೊಸ ಫೀಚರ್‌ಗಳು ಸೇರ್ಪಡೆ.. 1 ರೂಪಾಯಿ ಬೆಲೆ ಏರಿಕೆಯಿಲ್ಲ!

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಮಹೀಂದ್ರಾ (Mahindra) ಗುರುತಿಸಿಕೊಂಡಿದೆ. ಸದ್ಯ ಸ್ಕಾರ್ಪಿಯೊ ಎನ್ (Scorpio N) ಕಾರಿನ ಆಯ್ದ ರೂಪಾಂತರಗಳಿಗೆ ಕೆಲವೊಂದು ಹೊಸ ವೈಶಿಷ್ಟ್ಯ (ಫೀಚರ್‌)ವನ್ನು ಪರಿಚಯಿಸುವ ಮೂಲಕ ನವೀಕರಿಸಿದೆ. ಆದಾಗ್ಯೂ ಈ ಎಸ್‌ಯುವಿಯ ದರವನ್ನು ಹೆಚ್ಚಿಸದೇ ಖರೀದಿದಾರರಿಗೂ ಸಿಹಿಸುದ್ದಿ ನೀಡಿದೆ. ಇಲ್ಲಿ 'ಸ್ಕಾರ್ಪಿಯೊ ಎನ್' ಕಾರು ಯಾವೆಲ್ಲ ನೂತನ ವೈಶಿಷ್ಟ್ಯದೊಂದಿಗೆ ದೇಶೀಯ ಮಾರುಕಟ್ಟೆಗೆ ಬಂದಿದೆ ಎಂಬುದರ ಕುರಿತಂತೆ ಸಂಪೂರ್ಣ ವಿವರವನ್ನು ತಿಳಿಯೋಣ.

ಮಹೀಂದ್ರಾ ಸ್ಕಾರ್ಪಿಯೊ ಎನ್ (Mahindra Scorpio N) ಎಸ್‌ಯುವಿಯ ಝಡ್8 ಸೆಲೆಕ್ಟ್ (Z8 Select) ಹಾಗೂ ಝಡ್8 (Z8) ರೂಪಾಂತರ (ವೇರಿಯೆಂಟ್)ಗಳು ವೈರ್‌ಲೆಸ್ ಚಾರ್ಜರ್ ಹಾಗೂ ಸೆಂಟರ್ ಕನ್ಸೋಲ್‌ನಲ್ಲಿ ಹೈ ಗ್ಲಾಸ್ ಫಿನಿಶ್ ಅನ್ನು ಹೊಂದಿವೆ. ಝಡ್8 ಎಲ್ (Z8 L) ರೂಪಾಂತರವು ಇದೇ ವೈಶಿಷ್ಟ್ಯಗಳನ್ನು ಪಡೆದಿದ್ದು, ಹೆಚ್ಚುವರಿಯಾಗಿ ಆಟೋ-ಡಿಮ್ಮಿಂಗ್ ಇನ್‌ಸೈಡ್ ರೇರ್-ವ್ಯೂ ಮಿರರ್ (IRVM) ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ.

Mahindra Scorpio N Suv Gets New Features No Price Hike

ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದರೂ ಸ್ಕಾರ್ಪಿಯೊ ಎನ್ ಕಾರಿನ ಬೆಲೆ ಕೊಂಚವು ಏರಿಕೆಯಾಗಿಲ್ಲ. ಝಡ್8 ಸೆಲೆಕ್ಟ್ ಮಾದರಿ (ಮಾಡೆಲ್) ರೂ.17.10 ಲಕ್ಷ, ಝಡ್8 ರೂ.18.74 ಲಕ್ಷ, ಝಡ್8 ಎಲ್ ರೂ.20.37 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಇತ್ತೀಚೆಗೆ ಸ್ಕಾರ್ಪಿಯೊ ಎನ್ ಎಲ್ಲ ರೂಪಾಂತರಗಳ ಬೆಲೆಯನ್ನು ಕಂಪನಿಯು ರೂ.10,000 ಹೆಚ್ಚಳ ಮಾಡಿತ್ತು.

ನೂತನ ಮಹೀಂದ್ರಾ ಸ್ಕಾರ್ಪಿಯೊ ಎನ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಸನ್‌ರೂಫ್, 12-ಸ್ಪೀಕರ್ ಸೌಂಡ್ ಸಿಸ್ಟಮ್ ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರು 6 ಅಥವಾ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಗ್ರಾಹಕರಿಗೆ ದೊರೆಯುತ್ತದೆ.

Mahindra Scorpio N Suv Gets New Features No Price Hike

ಈ ಸ್ಕಾರ್ಪಿಯೊ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಗೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ರೇಟಿಂಗ್ ಕೂಡ ಪಡೆದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು 6 ಏರ್‌ಬ್ಯಾಗ್‌, ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಕ್ಯಾಮೆರಾಗಳು, ಹಿಲ್-ಅಸಿಸ್ಟ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಮತ್ತು ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೊ ಎನ್ ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಸಿಗುತ್ತದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 203 ಪಿಎಸ್ ಶಕ್ತಿ (ಪವರ್) ಹಾಗೂ 380 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ ರೂಪಾಂತರಗಳನ್ನು ಅವಲಂಭಿಸಿ 132 ಪಿಎಸ್ ಪವರ್ ಮತ್ತು 300 ಎನ್ಎಂ ಪೀಕ್ ಟಾರ್ಕ್ ಅಥವಾ 175 ಪಿಎಸ್ ಪವರ್ ಹಾಗೂ 400 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

ಸ್ಕಾರ್ಪಿಯೊ ಎಸ್‌ಯುವಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಸಿಗುತ್ತದೆ. 2WD (ಟೂ ವೀಲ್ ಡ್ರೈವ್) ಹಾಗೂ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಇಂಧನ ದಕ್ಷತೆ (Fuel efficiency) ವಿಚಾರವಾಗಿ ಹೇಳುವುದಾದರೆ, 14 ರಿಂದ 15 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 2, 2024, 17:52 [IST]
English summary
Mahindra scorpio n suv gets new features no price hike details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+