ಆನಂದ್ ಮಹೀಂದ್ರಾ ಕಂಪನಿ ಮೇಲೆ ನಂಬಿಕೆ ಗಟ್ಟಿಯಾಯ್ತು.. ಈ ಕಾರುಗಳಿಗೆ ಮನಸೋತ ಗ್ರಾಹಕರು!

ಸ್ವದೇಶಿ ವಾಹನ ತಯಾರಕ ಕಂಪನಿ ಮಹೀಂದ್ರಾ (Mahindra), ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ವಿಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ. 2025ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 124,000 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ (YoY) ಶೇಕಡ 24% ಬೆಳವಣಿಗೆ ಸಾಧಿಸಿದೆ. ಜುಲೈ 1ರ ಅನ್ವಯ ಕಂಪನಿಯು ಸರಿ ಸುಮಾರು 178,000 ಯುನಿಟ್ ಓಪನ್ ಬುಕ್ಕಿಂಗ್‌ಗಳನ್ನು ಹೊಂದಿದೆ. ಅಂದರೆ ಈ ಸಂಖ್ಯೆಯಷ್ಟು ಕಾರುಗಳನ್ನು ಗ್ರಾಹಕರಿಗೆ ಪೂರೈಸಬೇಕಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 3ಎಕ್ಸ್ಒ, ಬೊಲೆರೊ, ಥಾರ್, ಸ್ಕಾರ್ಪಿಯೊ (ಎನ್ ಮತ್ತು ಕ್ಲಾಸಿಕ್) ಮತ್ತು ಎಕ್ಸ್‌ಯುವಿ700 ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಸ್ಕಾರ್ಪಿಯೊಗೆ ಭಾರೀ ಬೇಡಿಕೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಓಪನ್ ಬುಕ್ಕಿಂಗ್‌ನ್ನು ಪಡೆದಿದೆ. ಬರೋಬ್ಬರಿ 58,000 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಬೇಕಾಗಿದೆ. ನಂತರದ ಸ್ಥಾನದಲ್ಲಿರುವ ಎಕ್ಸ್‌ಯುವಿ 3ಎಕ್ಸ್ಒ 55,000 ಯುನಿಟ್‌, ಥಾರ್ 42,000 ಯುನಿಟ್‌, ಎಕ್ಸ್‌ಯುವಿ700 13,000 ಯುನಿಟ್‌ ಹಾಗೂ ಬೊಲೆರೊ 8,000 ಯುನಿಟ್ ಓಪನ್ ಬುಕ್ಕಿಂಗ್‌ನ್ನು ಹೊಂದಿದೆ.

Mahindra Suv Gets Huge Demand Scorpio XUV 3XO Become Game Changer

ಜೂನ್‌ನಲ್ಲಿ ಮಹೀಂದ್ರಾದ ಎಕ್ಸ್‌ಯುವಿ 3ಎಕ್ಸ್ಒ 20,000 ಹೊಸ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಸ್ಕಾರ್ಪಿಯೊಗೆ 12,000, ಎಕ್ಸ್‌ಯುವಿ700 ಕಾರಿಗೆ 8,000, ಬೊಲೆರೊಗೆ 6,000 ಮತ್ತು ಥಾರ್‌ಗೆ 5,000 ಬುಕ್ಕಿಂಗ್‌ಗಳು ಆಗಿವೆ. ಕಂಪನಿಯು ಆಗಸ್ಟ್ 15ರಂದು ಥಾರ್ ರಾಕ್ಸ್‌ 5-ಡೋರ್ (Thar Roxx 5-Door) ಆಫ್-ರೋಡ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ.

ದೇಶೀಯವಾಗಿ ಖರೀದಿಗೆ ಲಭ್ಯವಿರುವ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಎಸ್‌ಯುವಿ ರೂ.7.49 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, ರೂಪಾಂತರ (ವೇರಿಯೆಂಟ್)ಗಳಿಗೆ ಅನುಗುಣವಾಗಿ 17.96 ರಿಂದ 21.2 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Mahindra Suv Gets Huge Demand Scorpio XUV 3XO Become Game Changer

ಮಹೀಂದ್ರಾ ಸ್ಕಾರ್ಪಿಯೊ (Mahindra Scorpio), ಎನ್ ಹಾಗೂ ಕ್ಲಾಸಿಕ್ ಎಂಬ ಎರಡು ವಿಧದಲ್ಲಿ ದೊರೆಯುತ್ತದೆ. ಸ್ಕಾರ್ಪಿಯೊ ಎನ್ ರೂ.13.85 ಲಕ್ಷದಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2.0-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಡೀಸೆಲ್ ಎಂಜಿನ್‌ನ್ನು‌‌ ಒಳಗೊಂಡಿದೆ. ಸ್ಕಾರ್ಪಿಯೋ ಕ್ಲಾಸಿಕ್ ರೂ.13.62 ಲಕ್ಷದಿಂದ ರೂ.17.42 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‍ಯುವಿ ರೂ.13.99 ಲಕ್ಷದಿಂದ ರೂ.26.04 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. 2-ಲೀಟರ್ ಟರ್ಬೊ ಪೆಟ್ರೋಲ್, 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ನ್ನು ಹೊಂದಿದೆ.

Mahindra Suv Gets Huge Demand Scorpio XUV 3XO Become Game Changer

ಮಹೀಂದ್ರಾ ಥಾರ್‌ (Mahindra Thar) ಆಫ್- ರೋಡ್ ಎಸ್‍ಯುವಿಯಾಗಿದ್ದು, 3-ಡೋರ್ ಆಯ್ಕೆಯಲ್ಲಿ ದೊರೆಯುತ್ತದೆ. ರೂ.11.35 ದಿಂದ ರೂ.17.60 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ. ಮಹೀಂದ್ರಾ ಬೊಲೆರೊ (Mahindra Bolero) ಬೊಲೆರೊ ಹಾಗೂ ಬೊಲೆರೊ ನಿಯೋ ಎಂಬ ಎರಡು ರೂಪದಲ್ಲಿ ಸಿಗುತ್ತದೆ. ಬೊಲೆರೊ ನಿಯೋ ರೂ.9.95 ಲಕ್ಷದಿಂದ ರೂ.12.15 ಲಕ್ಷ ಮತ್ತು ಬೊಲೆರೊ ರೂ.9.79 ಲಕ್ಷದಿಂದ ರೂ.10.91 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, August 1, 2024, 10:52 [IST]
English summary
Mahindra suv gets huge demand scorpio xuv 3xo become game changer
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+