ಮಹೀಂದ್ರಾ ಥಾರ್ ಮೇಲೆ ಭರ್ಜರಿ ಡಿಸ್ಕೌಂಟ್: ಜನ ಶೋರೂಂ ಮುಂದೆ ಕ್ಯೂ ನಿಲ್ಲುವುದು ಪಕ್ಕಾ!
ಮಹೀಂದ್ರಾ ಥಾರ್ ಯಾವಾಗಲೂ ಹಾರ್ಡ್‌ಕೋರ್ ಆಫ್-ರೋಡ್ ಡಿಎನ್‌ಎ, ಗೋ-ಎನಿವೇರ್ ಸಾಮರ್ಥ್ಯ ಮತ್ತು ಒರಟಾದ ಲೈಫ್ ಸ್ಟೈಲ್ ಎಸ್‍ಯುವಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಎಲ್ಲರ ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ (Mahindra Thar). ಭಾರತದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್ ರೋಡರ್ ಎಸ್‍ಯುವಿ ಮಾದರಿಯಾಗಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಇದು ಎಂದಿಗೂ ಫ್ಯಾಮಿಲಿ ಎಸ್‌ಯುವಿಯಾಗಿರಲಿಲ್ಲ. ಇದಕ್ಕೆ ಹೊರತಾಗಿರಲಿಲ್ಲ 2020ರ ಬಿಡುಗಡೆಗೊಂಡ 3-ಡೋರ್ ಥಾರ್. ಮಹೀಂದ್ರಾ ಕಂಪನಿಯು ಹೊಸ ಥಾರ್ 5-ಡೊರಿನ ಆವೃತ್ತಿ ಥಾರ್ ರೋಕ್ಸ್ ಅನ್ನು ಬಿಡುಗಡೆಗೊಳಿಸಲಾಗಿದೆ.
5-ಡೊರಿನ ಮಹೀಂದ್ರಾ ಥಾರ್ ರೋಕ್ಸ್ ಆಗಮನದಿಂದ ಹಳೆಯ ಮಾದರಿಗೆ ಸ್ವಲ್ಪ ಬೇಡಿಕೆ ಕಡಿಮೆಯಾಗಿದೆ. ಇದೀಗ ಮಹೀಂದ್ರಾ ಕಂಪನಿಯು ಥಾರ್ ಎಸ್‍ಯುವಿಯ ಮೇಲೆ ರೂ.1.5 ಲಕ್ಷ ರಿಯಾಯಿತಿಯನ್ನು ನೀಡುತ್ತಿದೆ. ಇದು ಡೀಲರ್ ಶಿಪ್ ನಿಂದ ಡೀಲರ್‌ಗೆ ಅಥವಾ ನಗರಗಳಿಗೆ ಈ ರಿಯಾಯಿತಿಯು ಬದಲಾಗುತ್ತದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್‍ಯುವಿಯಾಗಿದೆ.

ಮಹೀಂದ್ರಾ ಥಾರ್ ದೊಡ್ಡ ಪ್ಲಸ್ ಪಾಯಿಂಟ್ ಅದರ ರಗಡ್ ವಿನ್ಯಾಸವಾಗಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಥಾರ್ ಎಸ್‍ಯುವಿಯು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.

ಈ ಥಾರ್ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ. ಈ ಥಾರ್ ಎಸ್‍ಯುವಿಯ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ. ಇದರೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಥಾರ್ ಎಸ್‍ಯುವಿ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.
ಇನ್ನು ಈ ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ ಹೊಂದಿದೆ. ಇದರೊಂದಿಗೆ ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ.
ಇನ್ನು ಈ ಎಸ್‍ಯುವಿಯು ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಥಾರ್ ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತಕ್ಕೆ ಹೋಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications