Mahindra: ಮಹೀಂದ್ರಾದಿಂದ ದೊಡ್ಡ ರಿಯಾಯಿತಿ.. 40,000 ದಿಂದ 3 ಲಕ್ಷ ರೂಪಾಯಿ, ಈಗಲೇ ಶೋರೂಂಗೆ ಹೋಗಿ!

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಖರೀದಿದಾರರು ಸಹ ಕೊಂಡುಕೊಳ್ಳುತ್ತಿದ್ದಾರೆ. ಈ ಸೆಪ್ಟೆಂಬರ್ (2024) ತಿಂಗಳು ಬೆಂಗಳೂರಿನ ಆಯ್ದ ಡೀಲರ್‌ಶಿಪ್‌ಗಳಲ್ಲಿ 3-ಡೋರ್ ಥಾರ್, ಎಕ್ಸ್‌ಯುವಿ400 ಇವಿ, ಸ್ಕಾರ್ಪಿಯೋ ಹಾಗೂ ಎಕ್ಸ್‌ಯುವಿ700 ಕಾರುಗಳು ಭಾರಿ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ನೀವು ಈ ಗೌರಿ - ಗಣೇಶ ಹಬ್ಬಕ್ಕೆ ಹೊಸ ಕಾರನ್ನು ತೆಗೆದುಕೊಳ್ಳಬೇಕು ಅಂದುಕೊಂಡಿದ್ದರೆ.. ಇದು ಉತ್ತಮ ಸಮಯವಾಗಿದೆ.

ಮೊದಲಿಗೆ ಮಹೀಂದ್ರಾ ಥಾರ್ 3-ಡೋರ್ (Mahindra Thar 3-Door) ಪಡೆದುಕೊಂಡಿರುವ ರಿಯಾಯಿತಿ ಬಗ್ಗೆ ಮಾತನಾಡೋಣ. ಈ ಆಫ್-ರೋಡ್ ಎಸ್‌ಯುವಿ ರೂ.1.5 ಲಕ್ಷವರೆಗೆ ಡಿಸ್ಕೌಂಟ್ ಆಫರ್ ಹೊಂದಿದ್ದು, ರೂ.11.35 ಲಕ್ಷದಿಂದ ರೂ.17.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

Mahindra Thar 3 Door Xuv400 Scorpio And Xuv700 Get Huge Discount Rs 40 000 To 3 Lakh

ಈ ಥಾರ್ 15 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಒಳಗೊಂಡಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.

ಮಹೀಂದ್ರಾ ಎಕ್ಸ್‌ಯುವಿ400 ಇವಿ (Mahindra XUV400 EV) ಕೂಡ ಭಾರಿ ಡಿಸ್ಕೌಂಟ್ ಆಫರ್ ಹೊಂದಿದ್ದು, ರೂ.3 ಲಕ್ಷದವರೆಗೆ ರಿಯಾಯಿತಿಯನ್ನು ಪಡೆದಿದೆ. ಈ ಎಲೆಕ್ಟ್ರಿಕ್ ಕಾರು ರೂ.15.49 ಲಕ್ಷದಿಂದ ರೂ.19.39 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 34.5 ಮತ್ತು 39.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 375 ರಿಂದ 456 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

Mahindra Thar 3 Door Xuv400 Scorpio And Xuv700 Get Huge Discount Rs 40 000 To 3 Lakh

ನೂತನ ಮಹೀಂದ್ರಾ ಎಕ್ಸ್‌ಯುವಿ400 ಇವಿ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡುಯಲ್-ಝೋನ್ ಎಸಿ, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6- ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ (Scorpio) ಹಾಗೂ ಎಕ್ಸ್‌ಯುವಿ700 (XUV700) ಎಸ್‌ಯುವಿಗಳು ಸಹ ಹೆಚ್ಚಿನ ರಿಯಾಯಿತಿ ಪಡೆದಿದ್ದು, ರೂ.40 ಸಾವಿರವರೆಗೆ ಡಿಸ್ಕೌಂಟ್ ಆಫರ್ ಇದೆ. ಸದ್ಯ ದೇಶೀಯವಾಗಿ ಸ್ಕಾರ್ಪಿಯೋ ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಸ್ಕಾರ್ಪಿಯೋ ಎನ್ ರೂ.13.85 ಲಕ್ಷದಿಂದ ರೂ.24.54 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ. ಸ್ಕಾರ್ಪಿಯೋ ಕ್ಲಾಸಿಕ್ ರೂ.13.62 ಲಕ್ಷದಿಂದ ರೂ.17.42 ಲಕ್ಷ ದರವನ್ನು ಹೊಂದಿದೆ.

Mahindra Thar 3 Door Xuv400 Scorpio And Xuv700 Get Huge Discount Rs 40 000 To 3 Lakh

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿ ರೂ.13.99 ಲಕ್ಷದಿಂದ ರೂ.26.04 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಇದು 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 17 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಈ ಕಾರು 5, 6 ಮತ್ತು 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.

ಹೊಸ ಎಕ್ಸ್‌ಯುವಿ700 ಕಾರು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12-ಸ್ಪೀಕರ್‌ ಆಡಿಯೊ ಸಿಸ್ಟಮ್, ಸನ್‌ರೂಫ್, ಕ್ಲೇಮೇಟ್ ಕಂಟ್ರೋಲ್, ಬಿಲ್ಟ್-ಇನ್ ಅಲೆಕ್ಸಾ ಕನೆಕ್ಟಿವಿಟಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Wednesday, September 4, 2024, 16:13 [IST]
English summary
Mahindra thar 3 door xuv400 scorpio and xuv700 get huge discount rs 40000 to 3 lakh
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+