ಸುನಾಮಿ ಎಬ್ಬಿಸಲು ಬರಲಿದೆ ಥಾರ್ 5 ಡೋರ್ ಮಾರುಕಟ್ಟೆಗೆ: ಸ್ವಲ್ಪ ಕಾಯಿರಿ, ಈ ಫೀಚರ್‌ಗಳು ಪಕ್ಕಾ!
ಮಹೀಂದ್ರಾ ಥಾರ್ ಗೆ (Mahindra Thar) ಭಾರತೀಯ ಆಫ್‌ರೋಡ್ ವಾಹನ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನಮಾನ ಇದೆ. ಈ ವಾಹನದ ಡಿಸೈನ್, ಆಫ್‌ರೋಡ್ ಪರ್ಫಾಮೆನ್ಸ್ ಇದಕ್ಕೆ ಕಾರಣ. ಮಹೀಂದ್ರಾ ಥಾರ್ ಸದ್ಯಕ್ಕೆ ಮೂರು ಡೋರ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಐದು ಡೋರ್‌ಗಳ ಥಾರ್ ಮಾರುಕಟ್ಟೆಗೆ ಇನ್ನೇನು ಕೆಲವೇ ಸಮಯದಲ್ಲಿ ಕಾಲಿಡಲಿದೆ.
ಇಂದಿನ ಈ ಲೇಖನದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ 5 ಡೋರ್ ಬಗೆಗಿನ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನು ನಿಮ್ಮ ಮುಂದೆ ಇಡಲಿದ್ದು, ಇದರಲ್ಲಿ ಈ ವಾಹನದ ಡಿಸೈನ್, ಫೀಚರ್ ಮತ್ತು ಇನ್ನಿತರ ವಿಷಯಗಳು ಒಳಗೊಂಡಿವೆ. ಮಹೀಂದ್ರಾ ಥಾರ್ 5 ಡೋರ್ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯ ವರೆಗೆ ಓದಿ.

5ಡೋರ್: ಹೆಸರೇ ತಿಳಿಸುವಂತೆ ಈ ಕಾರಿನಲ್ಲಿ ಐದು ಡೋರ್‌ಗಳು ಇರಲಿದ್ದು ಈಗಿರುವ ಥಾರ್‌ಗಿಂತ ಗಾತ್ರದಲ್ಲಿ ದೊಡ್ಡದಾಗಿರಲಿದೆ. ಸಾಮಾನ್ಯವಾಗಿ ೩ ಡೋರ್ ಥಾರ್ ಅನ್ನು ಅಡ್ವೆಂಚರ್ ಪ್ರೀಯರು ಇಷ್ಟಪಟ್ಟರೆ ಈ ಐದು ಡೋರ್ ಉಳ್ಳ ಥಾರ್, ದಿನಂಪ್ರತಿ ಬಳಕೆ ಮಾಡುವವರಿಗೆ ಮತ್ತು ಹೆಚ್ಚು ಸ್ಥಳಾವಕಾಶ ಬೇಕು ಎಂಬವರಿಗೆ ಬಹಳ ಉಪಯುಕ್ತ ಆಗುತ್ತದೆ.
ಹೊಸ ಇಂಟೀರಿಯರ್: ಈ ಹೊಸ ಐದು ಡೋರ್‌ನ ಥಾರ್‌ನಲ್ಲಿ ಹೊಸ ಇಂಟೀರಿಯರ್ ಲಭ್ಯವಿರಲಿದೆ ಎಂದು ತಿಳದು ಬಂದಿದೆ. ಈ ಕಾರಿನಲ್ಲಿ ೧೦.೨೫ ಇಂಚ್‌ನ ಇನ್‌ಪೋಟೈನ್‌ಮೆಂಟ್ ಸಿಸ್ಟಂ ಇರಲಿದ್ದು ಇದರಲ್ಲಿ ವಯರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಇರಲಿದೆ. ಇದರಿಂದ ಪ್ರಯಾಣದ ಅನುಭವ ಮತ್ತಷ್ಟು ಆಹ್ಲಾದಕರವಾಗಿರಲಿದೆ.

ಹೊಸ ಹೆಸರು: ನಿಮಗೆಲ್ಲಾ ತಿಳಿದಿರುವಂತೆ ಈಗಾಗಲೇ ಈ ಐದು ಡೋರ್‌ನ ಕಾರಿಗೆ ಅರ್ಮಡಾ ಎಂಬ ಹೆಸರನ್ನು ಇಡಲಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಹಿಂದೆ ಬಹಳ ವರ್ಷಗಳ ಕಾಲ ಮಹೀಂದ್ರಾ ಅರ್ಮಡಾ ಭಾರತೀಯ ಮಾರುಕಟ್ಟೆಯಲ್ಲಿತ್ತು. ಆದರೆ ಕಾರಣಾಂತರಗಳಿದ ಈ ಕಾರನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಐದು ಡೋರ್ ಥಾರ್‌ಗೆ ಈ ಹೆಸರನ್ನು ಇಡಲಾಗಿದ್ದು ಇದು ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಎಂಜಿನ್: ಹೊಸ 5-ಡೋರ್ ಮಹೀಂದ್ರಾ ಥಾರ್ ಎಂಜಿನ್ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಆದರೆ, ಮೂಲಗಳ ಪ್ರಕಾರ, ಇದು 2.0 ಲೀಟರ್ ಪೆಟ್ರೋಲ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್, 6-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ. ಬೆಲೆ ವಿಚಾರವಾಗಿ ಹೇಳುವುದಾದರೆ, ರೂ.15.00 ರಿಂದ 16.00 ಲಕ್ಷ ಬೆಲೆಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.
ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್, ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. 1.5 ಲೀಟರ್ ಡೀಸೆಲ್, 2.2 - ಲೀಟರ್ ಡೀಸೆಲ್ ಹಾಗೂ 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 6 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








