Mahindra Thar ಪ್ರೀಯರ ಗಮನಕ್ಕೆ: ಬುಕ್ ಮಾಡುವಾಗ ಈ ಹೊಸ ಆಯ್ಕೆಯನ್ನು ಬಿಟ್ಟರೆ, ಲಾಸ್‌ ನಿಮ್ಮದೇ!

ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿರುವ ಕಡಿಮೆ ಬೆಲೆಯ 4X4 ಆಫ್‌ರೋಡ್‌ ವಾಹನವೆಂದರೆ ಅದು ಥಾರ್. ಬುಕ್‌ ಮಾಡಿ ಡೆಲಿವರಿ ಪಡೆಯಲು ಹಲವು ಸಮಯಗಳ ಕಾಲ ಕಾಯಬೇಕಿದ್ದರೂ ಈ ವಾಹನದ ಬೇಡಿಕೆ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ. ಇದೀಗ ಮಹೀದ್ರಾ, ತನ್ನ ಥಾರ್‌ಗೆ ದೊಡ್ಡ ಅಪ್‌ಡೇಟ್‌ ಒಂದನ್ನು ತಂದಿದೆ.

ಮಹೀಂದ್ರಾ ಕಂಪನಿಯು ಥಾರ್‌ಗೆ ಈಗಾಗಲೇ ಸಾಕಷ್ಟು ಅಪ್‌ಡೇಟ್‌ಗಳನ್ನು ಕಾಲಕ್ಕೆ ತಕ್ಕಂತೆ ಕೊಡುತ್ತಲೇ ಬಂದಿದೆ. ಇದೀಗ ಮಹೀಂದ್ರಾ ಥಾರ್ ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಬಂದಿದೆ. ಹೌದು, ಡೀಪ್‌ ಫಾರೆಸ್ಟ್‌ ಎಂಬ ಹೆಸರಿನ ಕಡು ಹಸಿರು ಬಣ್ಣವನ್ನು ಥಾರ್‌ಗೆ ಸೇರಿಸಲಾಗಿದ್ದು ಈ ಮೂಲಕ ಇನ್ನು ಮುಂದೆ ಹೊಸ ಬಣ್ಣದಲ್ಲೂ ರಸ್ತೆಗಳಲ್ಲಿ ಥಾರ್‌ ಕಂಗೊಳಿಸಲಿದೆ.

Mahindra Thar Gets New Deep Forest Color Option Now

ಮಹೀಂದ್ರಾ ಕಂಪನಿಯು ಈ ಹಸಿರು ಬಣ್ಣವನ್ನು ಈಗಾಗಲೇ ಸ್ಕಾರ್ಪಿಯೋ ಸೇರಿದಂತೆ ತನ್ನ ಇತರ ಕಾರು ಮಾದರಿಗಳಿಗೆ ಪರಿಚಯಿಸಿದ್ದರೂ ಥಾರ್‌ನಲ್ಲಿ ಇದೇ ಮೊದಲಾಗಿದೆ. ಇದೀಗ ಥಾರ್‌ ಹಸಿರು ಸೇರಿದಂತೆ ಕೆಂಪು, ಗ್ರೇ, ಕಪ್ಪು, ಬಿಳಿ ಮತ್ತು ಡಸರ್ಟ್‌ ಫ್ಯೂರಿ ಎಂಬ ಒಟ್ಟು ಆರು ಬಣ್ಣಗಳಲ್ಲಿ ಕಂಗೊಳಿಸಲಿದೆ. ಕಾರಿನ ಬಣ್ಣದ ಆಯ್ಕೆಗಳ ಆಧಾರದ ಮೇಲೆ ಕಾರಿನ ಕಾಯುವಿಕೆಯ ಅವಧಿಯೂ ಹೆಚ್ಚಾಗಲಿದೆ.

ಈ ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Mahindra Thar Gets New Deep Forest Color Option Now

ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಈ ಥಾರ್ ಎಸ್‍ಯುವಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ.

ನಿಮಗೆಲ್ಲಾ ತಿಳಿದಿರುವಂತೆ ಹೊಸ 5 ಡೋರ್‌ ಮಹೀಂದ್ರಾ ಥಾರ್‌ ಇದೇ ವರ್ಷದಲ್ಲಿ ಮಾರಾಟಕ್ಕೆ ಸಿಗಲಿದ್ದು, ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ. ಹೊಸ ಥಾರ್‌ ಕುರಿತಾಗಿ ಇದೀಗ ಬಂದಿರುವ ಸುದ್ದಿಯೆಂದರೆ ಈ ಕಾರಿನಲ್ಲಿ ಕಡಿಮೆಯೆಂದರೂ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಎಂಜಿನ್‌ ಆಯ್ಕೆಗಳು ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.

Mahindra Thar Gets New Deep Forest Color Option Now

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಕಾರಿನ ಪೋಟೋಗಳು ಸೋರಿಕೆಯಾಗಿದ್ದು, ಡಿಸೈನ್‌ ಮತ್ತು ಇನ್ನಿತರ ವಿಷಯಗಳು ಬಹುತೇಕ ಬಹಿರಂಗವಾಗಿದೆ. ಆದರೆ ಈ ಪವರ್‌ ಟ್ರೇನ್‌ ಆಯ್ಕೆಯ ಸುದ್ದಿ ಹೊಸದಾಗಿದ್ದು, ಥಾರ್‌ ಯಾವೆಲ್ಲಾ ರೀತಿಯ ಎಂಜಿನ್‌ ಆಯ್ಕೆಗಳು ಇರಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸ್ಕಾರ್ಪಿಯೋ ಎನ್ ಕಾರಿನಲ್ಲಿರುವ‌ 2.2-ಲೀಟರ್‌ ಡೀಸೆಲ್‌ ಮತ್ತು 2.0-ಲೀಟರ್‌ ಟರ್ಬೋ ಪೆಟ್ರೋಲ್‌ ಎಂಜಿನ್‌ ಆಯ್ಕೆಗಳು ಸಿಗಲಿದೆ ಎಂದು ತಿಳಿದು ಬಂದಿದೆ.

ಹೊಸ ಥಾರ್‌ 4WD ಮತ್ತು 2WD ಆಪ್ಷನ್‌ಗಳಲ್ಲಿ ಲಭ್ಯವಾಗಲಿದೆ. ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್ ಬಳಿ ಈ ಹೊಸ ಥಾರ್ ರೋಡ್ ಟೆಸ್ಟ್ ನಡೆಸಿದೆ. ನಮ್ಮ ಓದುಗರೊಬ್ಬರು ಈ ಚಿತ್ರವನ್ನು ಕಳಿಸಿದ್ದಾರೆ. ಈ ಮಹೀಂದ್ರಾ ಥಾರ್ ಎಸ್‍ಯುವಿ ಸ್ಟೈಲಿಂಗ್, ಇಂಟೀರಿಯರ್ ಮತ್ತು ಮೆಕ್ಯಾನಿಕ್ಸ್‌ನಲ್ಲಿ ಲೈಫ್‌ಸ್ಟೈಲ್ ಎಸ್‌ಯುವಿ ಗಮನಾರ್ಹ ಬದಲಾವಣೆಗಳೊಂದಿಗೆ ಬರಲಿದೆ. ಮಹೀಂದ್ರಾ ಥಾರ್ 5-ಡೋರ್ (Mahindra Thar 5-door) ಲೈಫ್‌ಸ್ಟೈಲ್ ಎಸ್‌ಯುವಿಯು 3-ಡೋರ್ ಮಾದರಿಯಂತೆಯೇ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 21, 2024, 18:11 [IST]
English summary
Mahindra thar gets new deep forest color option now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+