ಮಹೀಂದ್ರಾ ಥಾರ್ ರೋಕ್ಸ್ ಮೊದಲ ಡೆಲಿವರಿ ಮುನ್ನವೇ ಶಾಕ್ ಕೊಟ್ಟ ಕಂಪನಿ! ಹೀಗೆ ಮಾಡಿದ್ರೆ ಮಾತ್ರ ಸಿಗೋದು...

ಬಹುನಿರೀಕ್ಷಿತ ಮಹೀಂದ್ರಾ ಥಾರ್ ರೋಕ್ಸ್ (5-ಡೋರ್) ಕಳೆದ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ಅಕ್ಟೋಬರ್ 3ರಿಂದ ಕಾರಿನ ಬುಕ್ಕಿಂಗ್ ಕೂಡ ಆರಂಭವಾಗಲಿದೆ. ಮೊದಲ ಡೆಲಿವರಿ ಯಾರು ಪಡೆದುಕೊಳ್ಳುತ್ತಾರೆ ಎಂಬ ಚರ್ಚೆಗಳು ಕೂಡ ಶುರುವಾಗಿವೆ. ಈ ನಡುವೆ ಕಂಪನಿ ಅಚ್ಚರಿಗೊಳ್ಳುವ ಘೋಷಣೆಯೊಂದನ್ನು ಮಾಡಿದೆ. ಬುಕಿಂಗ್ ಶುರುವಾಗುತ್ತಿದ್ದಂತೆ ಮುಗಿಬಿದ್ದು ಮೊದಲು ಆರ್ಡರ್ ಕನ್ಫರ್ಮ್ ಮಾಡಿಕೊಂಡವರಿಗೆ ಮೊದಲ ಡೆಲಿವರಿ ಸಿಗುವುದಿಲ್ಲ. ಹೌದು ಮಹೀಂದ್ರಾ ಕಂಪನಿಯು ಮೊದಲ ಥಾರ್ ರೊಕ್ಸ್ ಅನ್ನು ಹರಾಜು ಮಾಡಲಾಗುವುದು ಎಂದು ಘೋಷಿಸಿದೆ. ಇದರಿಂದ ಬರುವ ಆದಾಯವನ್ನು ಚಾರಿಟಿಗೆ ದಾನ ಮಾಡಲಾಗುವುದು.

ಕಂಪನಿಯು ಈ ಹಿಂದೆ ಥಾರ್ 3-ಡೋರ್ ಆವೃತ್ತಿಯನ್ನು ಕೂಡ ಹೀಗೆಯೇ ಹರಾಜು ಮಾಡಿ ಬಂದ ಹಣವನ್ನು ಚಾರಿಟಿಗೆ ನೀಡಲಾಗಿತ್ತು. ಇದೀಗ ಹೊಸ ಥಾರ್ ರೋಕ್ಸ್ ಬಹುನಿರೀಕ್ಷಿತ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಲಿದೆ. ಹರಾಜಿಗೆ ಇಡಲಾಗುವ ಕಾರು ಟಾಪ್-ಸ್ಪೆಕ್ ವೇರಿಯೆಂಟ್ ಆಗರಲಿದ್ದು, ಸಾಮಾನ್ಯ ಥಾರ್‌ ರೋಕ್ಸ್‌ನಂತಲ್ಲದೆ ವಿಶೇಷ ಬ್ಯಾಡ್ಜ್‌ಗಳನ್ನು ಹೊಂದಿರುತ್ತದೆ.

mahindra-thar-roxx-1st-car-going-for-auction-details

ಇದು '#1' ಬ್ಯಾಡ್ಜ್ ಸೇರಿದಂತೆ ಬೆಸ್ಪೋಕ್ ಕಾಸ್ಮೆಟಿಕ್ ವರ್ಧನೆಗಳನ್ನು ಪಡೆಯಬಹುದು. ಕ್ಯಾಬಿನ್ ಒಳಗೆ ವಿನ್ ಸಂಖ್ಯೆ ಮತ್ತು ಮೇಡ್ ಇನ್ ಇಂಡಿಯಾ ವಿತ್ ಪ್ರೈಡ್ ಎಂಬ ಪ್ಲೇಟ್‌ಗಳನ್ನು ಅಳವಡಿಸಬಹದು. ಈ ಹಿಂದೆ ಹರಾಜು ಮಾಡಿದ ಕಾರುಗಳಲ್ಲಿಯೂ ಇದೇ ರೀತಿಯ ವರ್ಧನೆಗಳೊಂದಿಗೆ ನೀಡಲಾಗಿತ್ತು. ಹಾಗೆಯೇ ಹರಾಜು ಗೆಲ್ಲುವ ಬಿಡ್ಡರ್ ಸೂಚಿಸಿದಂತೆ ಬಣ್ಣ ಮತ್ತು ಪವರ್‌ಟ್ರೇನ್‌ಗಳೊಂದಿಗೆ ಕಾರನ್ನು ನೀಡುವುದಾಗಿ ಕೆಲ ವರದಿಗಳು ತಿಳಿಸಿವೆ.

ಥಾರ್ ರೋಕ್ಸ್ ವಿಶೇಷತೆಗಳು: ಮಹೀಂದ್ರಾ ಥಾರ್ ರಾಕ್ಸ್ 5-ಡೋರ್ ರೂ.12.99 ಲಕ್ಷದಿಂದ ರೂ.18.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅಕ್ಟೋಬರ್ 3ರಿಂದ ಈ ಕಾರಿನ ಬುಕ್ಕಿಂಗ್ ಶುರುವಾಗಲಿದ್ದು, ದಸರಾ ವೇಳೆಗೆ ವಿತರಣೆಗಳು ಆರಂಭವಾಗುವ ಸಾಧ್ಯತೆಯಿದೆ. ಈ ಕಾರು ಎಂಎಕ್ಸ್1, ಎಂಎಕ್ಸ್3, ಎಎಕ್ಸ್3ಎಲ್ ಹಾಗೂ ಎಂಎಕ್ಸ್5 ಸೇರಿದಂತೆ ವಿವಿಧ ವೇರಿಯೆಂಟ್‌ಗಳ ಆಯ್ಕೆ ಹೊಂದಿದೆ. ಜೊತೆಗೆ 7 ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ.

mahindra-thar-roxx-1st-car-going-for-auction-details

ಈ ಥಾರ್ ರಾಕ್ಸ್‌ 2.0-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಮತ್ತು 2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್‌ನ್ನು ಆಯ್ಕೆಯನ್ನು ನೀಡುತ್ತದೆ. ಇದರ ಟರ್ಬೊ ಪೆಟ್ರೋಲ್ ಎಂಜಿನ್‌ 158 ಬಿಹೆಚ್‌ಪಿ ಪವರ್ ಮತ್ತು 330 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಡೀಸೆಲ್ ಎಂಜಿನ್ 148 ಬಿಹೆಚ್‌ಪಿ ಪವರ್ ಹಾಗೂ 330 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 447 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ ಒಳಗೊಂಡಿದೆ. ಥಾರ್ 3-ಡೋರ್ ಆವೃತ್ತಿಗೆ ಹೋಲಿಸಿದರೆ ಎತ್ತರ, ಅಗಲ ಮತ್ತು ಉದ್ದವಾಗಿದೆ, ಗಣನೀಯವಾಗಿ ಉದ್ದವಾದ ವ್ಹೀಲ್ ಬೇಸ್ ಕೂಡ ಹೊಂದಿದೆ.

mahindra-thar-roxx-1st-car-going-for-auction-details

ಕ್ಯಾಬಿನ್ ಒಳಗೆ ಸಾಕಷ್ಟು ಸೌಕರ್ಯ ಮತ್ತು ಐಷಾರಾಮಿ ಫೀಚರ್‌ಗಳನ್ನು ನೀಡಲಾಗಿದೆ. ಅತಿದೊಡ್ಡ ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, 10.25-ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಸೀಟ್‌, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಆಪಲ್ ಕಾರ್ಪ್ಲೇ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 12, 2024, 12:44 [IST]
English summary
Mahindra thar roxx 1st car going for auction details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+