ಮೊದಲ ಮಹೀಂದ್ರಾ ಥಾರ್ ರಾಕ್ಸ್ ಗಾಬರಿ ಹುಟ್ಟಿಸುವ ಬೆಲೆಗೆ ಹರಾಜು.. ನಿಖರವಾದ ಬೆಲೆ ಎಷ್ಟು, ವಿಶೇಷತೆಗಳೇನು?
ಮಹೀಂದ್ರಾ (Mahindra) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ 5-ಡೋರ್‌ನ ಮಾರುತಿ ಸುಜುಕಿ ಜಿಮ್ನಿ ಹಾಗೂ ಫೋರ್ಸ್ ಗೂರ್ಖಾಗೆ ಪ್ರಬಲವಾಗಿ ಪೈಪೋಟಿ ನೀಡಲು ಥಾರ್ ರಾಕ್ಸ್ (Thar Roxx) ಎಸ್‌ಯುವಿಯನ್ನು 5-ಡೋರ್ ಆಯ್ಕೆಯಲ್ಲಿ ಆಗಸ್ಟ್ 14ರಂದು ಬಿಡುಗಡೆ ಮಾಡಿತ್ತು. ಅಕ್ಟೋಬರ್ 3ರಿಂದ ಈ ಕಾರಿನ ಬುಕ್ಕಿಂಗ್ ಆರಂಭವಾಗಲಿದ್ದು, ದಸರಾ ವೇಳೆಗೆ ವಿತರಣೆಗಳು ಶುರುವಾಗುವ ನಿರೀಕ್ಷೆಯಿದೆ. ಸದ್ಯ, ಈ ಕಾರಿನ ಮೊದಲ ಯುನಿಟ್ ಭಾರಿ ಬೆಲೆಗೆ ಹರಾಜಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ನೂತನ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಎಸ್‌ಯುವಿಯ ಮೊದಲ ಯುನಿಟ್‌ನ್ನು ಮಾರಾಟ ಮಾಡಲು ಸೆಪ್ಟೆಂಬರ್ 15 ರಿಂದ 16ರವರೆಗೆ ಹರಾಜು ಪ್ರಕ್ರಿಯೆ ನಡೆದಿತ್ತು. 'ವಿಐಎನ್ 0001' ಸರಣಿ ಸಂಖ್ಯೆ (ಸೀರಿಯಲ್ ನಂಬರ್) ಒಳಗೊಂಡಿರುವ ಥಾರ್ ರಾಕ್ಸ್ ಬರೋಬ್ಬರಿ ರೂ.1.31 ಕೋಟಿ ಬೆಲೆಗೆ ಮಾರಾಟವಾಗಿದೆ. ಈ ಹರಾಜಿನಲ್ಲಿ ಬಂದ ಹಣವನ್ನು ವಿಜೇತ ವ್ಯಕ್ತಿಯು ಬಯಸಿದ 4 ದತ್ತಿ ಸಂಸ್ಥೆಗಳಿಗೆ (ಚಾರಿಟಿ ಟ್ರಸ್ಟ್) ದೇಣಿಗೆಯಾಗಿ ನೀಡಲಾಗುತ್ತದೆ.

ಈ ಹರಾಜಿನಲ್ಲಿ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿಯ ಗರಿಷ್ಠ ಶ್ರೇಣಿ ರೂಪಾಂತರವಾಗಿರುವ 'ಎಎಕ್ಸ್7 ಎಲ್' (ಡೀಸೆಲ್ - ಆಟೋಮೆಟಿಕ್ - 4ಡಬ್ಲ್ಯೂಡಿ) ಮಾರಾಟವಾಗಿದೆ. ಆದಾಗ್ಯೂ ಯಾವ ಬಣ್ಣದ (ಕಲರ್) ಎಸ್‌ಯುವಿಯನ್ನು ಹರಾಜು ಮಾಡಲಾಗಿದೆ ಎಂಬುದನ್ನು ಬಗ್ಗೆ ಮಹೀಂದ್ರಾ ಕಂಪನಿಯು ಇನ್ನೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
2020ರಲ್ಲಿಯೂ 3-ಡೋರ್‌ನ ಮಹೀಂದ್ರಾ ಥಾರ್ (3-Door Mahindra Thar) ಎಸ್‌ಯುವಿಯ ಮೊದಲ ಯುನಿಟ್‌ನ್ನು ಹರಾಜು ಹಾಕಲಾಗಿತ್ತು. ದೆಹಲಿಯ ನಿವಾಸಿ ಆಕಾಶ್ ಮಿಂಡಾ ಎಂಬುವವರೂ ರೂ.1.11 ಕೋಟಿ ಬೃಹತ್ ಮೊತ್ತ ನೀಡಿ, ಹೊಸ ಕಾರನ್ನು ಖರೀದಿಸಿದ್ದರು. ಆ ಹಣವನ್ನು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದ ಸಂಸ್ಥೆಗಳಿಗೆ ದೇಣಿಗೆ ರೂಪದಲ್ಲಿ ಕೊಡಲಾಗಿತ್ತು.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಥಾರ್ ರಾಕ್ಸ್ 5-ಡೋರ್ ಎಸ್‌ಯುವಿ ರೂ.12.99 ಲಕ್ಷದಿಂದ ರೂ.18.99 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಎಂಎಕ್ಸ್1, ಎಂಎಕ್ಸ್3, ಎಎಕ್ಸ್3ಎಲ್ ಮತ್ತು ಎಂಎಕ್ಸ್5 ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ. 57 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.
ಈ ಥಾರ್ ರಾಕ್ಸ್ 2.0-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಹಾಗೂ 2.0-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು.
ನೂತನ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 4 ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications