ಕೆಸರಿನ ಭಯ ಬೇಡ: ಥಾರ್ ರೋಕ್ಸ್ ಗ್ರಾಹಕರ ಕಳವಳಕ್ಕೆ ಪರಿಹಾರ.. ಇನ್ನೂ ಕ್ಯೂ ನಿಲ್ಲುವುದು ಪಕ್ಕಾ!
ಮಹೀಂದ್ರಾ ಥಾರ್ ಯಾವಾಗಲೂ ಹಾರ್ಡ್‌ಕೋರ್ ಆಫ್-ರೋಡ್ ಡಿಎನ್‌ಎ, ಗೋ-ಎನಿವೇರ್ ಸಾಮರ್ಥ್ಯ ಮತ್ತು ಒರಟಾದ ಲೈಫ್ ಸ್ಟೈಲ್ ಎಸ್‍ಯುವಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಎಲ್ಲರ ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ (Mahindra Thar). ಭಾರತದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್ ರೋಡರ್ ಎಸ್‍ಯುವಿ. ಭಾರತದಲ್ಲಿ ಥಾರ್ ಎಸ್‍ಯುವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಎಂದಿಗೂ ಫ್ಯಾಮಿಲಿ ಎಸ್‌ಯುವಿಯಾಗಿರಲಿಲ್ಲ. ಇದಕ್ಕೆ ಹೊರತಾಗಿರಲಿಲ್ಲ 2020ರ ಬಿಡುಗಡೆಗೊಂಡ 3-ಡೋರ್ ಥಾರ್. ಇನ್ನು ಮಹೀಂದ್ರಾ ಕಂಪನಿಯು ಹೊಸ ಥಾರ್ 5-ಡೊರಿನ ಆವೃತ್ತಿ ಥಾರ್ ರೋಕ್ಸ್ ಹೊಸ ಬದಲಾವಣೆಗಳೊಂದಿಗೆ ಸ್ವಾತಂತ್ರ್ಯ ದಿನದಂದು ಮಾರುಕಟ್ಟೆಗೆ ಬಂದಿತು.
ಮಹೀಂದ್ರಾ ಮುಂದಿನ ದಿನದಲ್ಲಿ ಬುಕಿಂಗ್ ಪ್ರಾರಂಭವಾಗಲಿರುವ ಕಾರಣ ಮಹೀಂದ್ರಾ ಇದೀಗ ಮಹೀಂದ್ರಾ ಥಾರ್ ರೋಕ್ಸ್ (Mahindra Thar Roxx) ಬಗ್ಗೆ ಮಹತ್ವದ ಘೋಷಣೆಯನ್ನು ಮಾಡಿದೆ. ಕಂಪನಿಯು ಥಾರ್ ರಾಕ್ಸ್‌ಗೆ ಹೊಸ ಇಂಟೀರಿಯರ್ ಬಣ್ಣದ ಆಯ್ಕೆಯನ್ನು ನೀಡಿದೆ. ರಾಕ್ಸ್‌ನ 4x4 ರೂಪಾಂತರಗಳಿಗಾಗಿ ಹೊಸ ಮೋಚಾ ಬ್ರೌನ್ ಒಳಾಂಗಣವನ್ನು ಪರಿಚಯಿಸಲಾಗಿದೆ. ಈ ಹಿಂದೆ, 5-ಡೋರಿನ ಎಸ್‍ಯುವಿಯಲ್ಲಿ ಐವರಿ ಬಣ್ಣದ ಒಳಭಾಗದಲ್ಲಿ ಮಾತ್ರ ನೀಡಲಾಗುತ್ತಿತ್ತು.

ಇದಲ್ಲದೆ, ಆಫ್-ರೋಡ್ ವಾಹನವಾಗಿರುವುದರಿಂದ ಐವರಿ ಅಥವಾ ಬಿಳಿ ಬಣ್ಣದ ಇಂಟಿರಿಯರ್ ಟೇಕೆಗಳಿಗೆ ಗುರಿಯಾಗಿತ್ತು. ಈ ಬಣ್ಣದ ಬೇಗನೆ ಕೊಳಕು ಆಗುವ ಸಾಧ್ಯತೆಯಿದೆ ಇತ್ತು. ಮಹೀಂದ್ರಾ ಐವರಿ ಬಣ್ಣದ ಒಳಭಾಗವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು ಎಂದು ನಿರ್ದಿಷ್ಟಪಡಿಸಿದ್ದರೂ, ಅನೇಕರು ಅದರಿಂದ ಸಂತೋಷವಾಗಿರಲಿಲ್ಲ. ಏನೇ ಆಗಲಿ, ಗ್ರಾಹಕರ ಕಳವಳವನ್ನು ಅರಿತು ಮಹೀಂದ್ರಾ ಅವರ ಹೊಸ ನಿರ್ಧಾರವು ಮೆಚ್ಚುಗೆಗೆ ಅರ್ಹವಾಗಿದೆ.
ಥಾರ್ ರೋಕ್ಸ್ 4X4 ಎಸ್‍ಯುವಿಯಲ್ಲಿ ಐವರಿ ಬಣ್ಣದ ಜೊತೆ ಮೋಚಾ ಬ್ರೌನ್ ಬಣ್ಣದ ಇಂಟಿರಿಯರ್ ಮಾದರಿಯನ್ನ್ ಆಯ್ಕೆ ಮಾಡಿಕೊಳ್ಳಬಹುದು. ಥಾರ್ ರೋಕ್ಸ್ 4X4 ಎಸ್‍ಯುವಿ MX5, AX5L, AX7L ಮತ್ತು MX5 4X4 ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಮೊದಲಿಗೆ ಥಾರ್ ರೋಕ್ಸ್ 4X4 ಎಸ್‍ಯುವಿಯ ಲೋ-ಸ್ಪೆಕ್ MX5 ರೂಪಾಂತರದ ಬೆಲೆಯು 18.79 ಲಕ್ಷವಾಗಿದೆ. ಇನ್ನು AX5L 4X4 ಡೀಸೆಲ್ ಆಟೋಮ್ಯಾಟಿಕ್ ಬೆಲೆಯು ರೂ. 20.99 ಲಕ್ಷ ರೂ.ಗಳಾಗಿದೆ.

ಇನ್ನು AX7L 4X4 ಡೀಸೆಲ್ ಅನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳೊಂದಿಗೆ ನೀಡಲಾಗಿದ್ದು, ಕ್ರಮವಾಗಿ ರೂ.20.99 ಲಕ್ಷ ಮತ್ತು ರೂ.22.49 ಲಕ್ಷ ಬೆಲೆಗಳನ್ನು ಹೊಂದಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. 4X2 ವೇರಿಯಂಟ್‌ಗಳಿಗೆ ಹೋಲಿಸಿದರ , ಥಾರ್ ರೋಕ್ಸ್ 4X4 ಮಾದರಿಗಳು ಅಂದಾಜು 1.8 ಲಕ್ಷದಿಂದ 2 ಲಕ್ಷ ರೂಪಾಯಿಗಳಷ್ಟು ದುಬಾರಿಯಾಗಿದೆ.
ಮಹೀಂದ್ರಾ ಥಾರ್ ರೋಕ್ಸ್ 4X4 ಪ್ರತ್ಯೇಕವಾಗಿ 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 175 bhp ಪವರ್ ಮತ್ತು 370 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಅನ್ನು ಹೊಂದಿದೆ. ಇನ್ನು ಡೀಸೆಲ್ 4X2 ರೂಪಾಂತರಗಳು, 2.2-ಲೀಟರ್ TGDi ಪೆಟ್ರೋಲ್ ರೂಪಾಂತರವು 152hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಟೋಮ್ಯಾಟಿಕ್ ರೂಪಾಂತರವು 177 hp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದೆಡೆ, ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿರುವ ಬೇಸ್ 2.2-ಲೀಟರ್ ಡೀಸೆಲ್ ಎಂಜಿನ್ 162 hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 4X4 ಪವರ್‌ಟ್ರೇನ್‌ಗಳೊಂದಿಗೆ ಟಾಪ್ ಸ್ಪೆಕ್ ಮಾದರಿಗಳು 175hp ಮತ್ತು 370Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡೀಸೆಲ್ ಪವರ್‌ಟ್ರೇನ್‌ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಹೊಂದಿದೆ. ಮೈಲೇಜ್ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಎಂಜಿನ್ 12.40 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಡೀಸೆಲ್ ಎಂಜಿನ್ 15.20 ಕಿ.ಮೀ ನಷ್ಟು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಥಾರ್ ರೋಕ್ಸ್ ನಗರ ಮತ್ತು ಹೆದ್ದಾರಿಯಲ್ಲಿ ಕ್ರಮವಾಗಿ 10.82 ಕಿ.ಮೀ ಮತ್ತು 15.44 ಕಿ.ಮೀ ಮೈಲೇಜ್ ನೀಡುತ್ತದೆ.


Click it and Unblock the Notifications