ಮಹೀಂದ್ರಾ ಥಾರ್‌, ರೋಕ್ಸ್‌ ಡಿಮ್ಯಾಂಡ್‌: ತಿಂಗಳಿಗೆ 9500 ಕಾರನ್ನು ನಿರ್ಮಿಸಲಿದೆ ಕಂಪನಿ! ಎದುರಾಳಿಗಳಿಗೆ ಶಾಕ್‌

ಮಹೀಂದ್ರಾದ ಇತ್ತೀಚಿನ ಬಿಡುಗಡೆಯಾದ ಥಾರ್ ರಾಕ್ಸ್, ಬುಕಿಂಗ್ ಪ್ರಾರಂಭವಾದ ಮೊದಲ 60 ನಿಮಿಷಗಳಲ್ಲಿ 1.76 ಲಕ್ಷ ಬುಕಿಂಗ್‌ಗಳನ್ನು ಸಂಗ್ರಹಿಸುವ ಮೂಲಕ ಎಲ್ಲಾ ಬ್ರ್ಯಾಂಡ್‌ನ ಹಿಂದಿನ ಬ್ಲಾಕ್‌ಬಸ್ಟರ್ ಬಿಡುಗಡೆಗಳನ್ನು ಮೀರಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ಈ ಕಾರಿನ ವೇಟಿಂಗ್‌ ಅವಧಿಯು ವರ್ಷಕ್ಕಿಂತಲೂ ಹೆಚ್ಚಾದರೂ, ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಈ ಕಾರಿನ ಉತ್ಪಾದನೆ ಆರಂಭವಾಗಿದ್ದು, ಈ ಕುರಿತಾಗಿ ಕಂಪನಿ ಬಹುದೊಡ್ಡ ಅಪ್‌ಡೇಟ್ ಅನ್ನು ನೀಡಿದೆ.

ನವೆಂಬರ್ ವೇಳೆಗೆ ಮಾಸಿಕ ಉತ್ಪಾದನಾ ಸಾಮರ್ಥ್ಯವನ್ನು 7,500 ಯೂನಿಟ್‌ಗಳಿಗೆ ಹೆಚ್ಚಿಸಲಾಗುವುದು ಮತ್ತು ಜನವರಿಯಿಂದ, ಎರಡೂ ಮಾದರಿಗಳ ಉತ್ಪಾದನಾ ಸಾಮರ್ಥ್ಯವು 9,500 ಯುನಿಟ್‌ವರೆಗೆ ನಿರ್ಮಿಸುವತ್ತ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ಭಾರತೀಯ ಆಟೋಮೊಬೈಲ್‌ ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಲಿದೆ ಎಂದೇ ಹೇಳಬಹುದು.

Mahindra Thar Roxx production to reach 9 500 units by January

ಜೂನ್ ಅಂತ್ಯದಲ್ಲಿ, ನಾವು ಥಾರ್ (Mahindra Thar) ರಾಕ್ಸ್‌ನ ಉತ್ಪಾದನೆಯ ಪ್ರಾರಂಭದ ಬಗ್ಗೆ ಪ್ರತ್ಯೇಕವಾಗಿ ವರದಿ ಮಾಡಿದ್ದೆವು. ಆಗಲೂ ಸಹ, ವಿತರಕರು ತಿಳಿಸಿದಂತೆ ಮಹೀಂದ್ರಾ SUV ಗೆ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಲಾಗುತ್ತಿತ್ತು. ಆರಂಭದಲ್ಲಿ ಸುಮಾರು 2,500 ಯೂನಿಟ್‌ಗಳಿಂದ ತಿಂಗಳಿಗೆ ಸುಮಾರು 5,000 ರಿಂದ 6,000 ಯೂನಿಟ್‌ಗಳವರೆಗೆ ಉತ್ಪಾದನೆಯನ್ನು ಹೆಚ್ಚಿಸಲಾಗಿತ್ತು. ಥಾರ್ 3-ಡೋರ್ ಮತ್ತು 5-ಡೋರ್ Roxxನ ಒಟ್ಟು ವಾರ್ಷಿಕ ಉತ್ಪಾದನೆಯು ಈಗ 70,000 ಯುನಿಟ್‌ಗಳ ಸಮೀಪದಲ್ಲಿದೆ.

ಮಹೀಂದ್ರಾ ಥಾರ್‌ ರಾಕ್ಸ್ ಬಗ್ಗೆ ನೋಡುವುದಾದರೆ, ನೂತನ ಮಹೀಂದ್ರಾ ಥಾರ್ ರಾಕ್ಸ್‌ ಪೆಟ್ರೋಲ್ ರೂಪಾಂತರ (ವೇರಿಯೆಂಟ್) ರೂ.12.99 ಲಕ್ಷ ಮತ್ತು ಡೀಸೆಲ್ ರೂಪಾಂತರ ರೂ.13.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಹೊಂದಿದೆ. ನಮಗೆ ಕೇರಳದ ಕೊಚ್ಚಿಯಲ್ಲಿ ಈ ಹೊಚ್ಚ ಹೊಸ ಎಸ್‌ಯುವಿಯನ್ನು ಟೆಸ್ಟ್ ಡ್ರೈವ್ (ಪರೀಕ್ಷಾರ್ಥ ಸಂಚಾರ) ಮಾಡಲು ಅವಕಾಶ ದೊರೆಯಿತು. ಬನ್ನಿ.. ಥಾರ್ ರಾಕ್ಸ್‌ ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ.

Mahindra Thar Roxx production to reach 9 500 units by January

ಹೊಸ ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ ಆಕರ್ಷಕವಾದ ವಿನ್ಯಾಸ ಹೊಂದಿದ್ದು, 3-ಡೋರ್ ಥಾರ್‌ನಂತೆ ಬಾಕ್ಸಿ (boxy) ಆಕಾರವನ್ನು ಉಳಿಸಿಕೊಂಡಿದೆ. ಆದರೂ ಈ ಕಾರಿನ ಮುಂಭಾಗ (ಫ್ರಂಟ್) ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅತ್ಯಾಧುನಿಕ ಎಲ್ಇಡಿ ಹೆಡ್‌ಲೈಟ್‌ಗಳು, ಸಿ-ಮಾದರಿಯ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲೈಟ್‌ಗಳು ಮತ್ತು ಬಾಡಿ ಕಲರ್ ಪೇಂಟ್‌ನಲ್ಲಿರುವ ನವೀನವಾದ ಗ್ರಿಲ್‌ನ್ನು ಹೊಂದಿದೆ. ಜೊತೆಗೆ ಫ್ರಂಟ್ ಪಾರ್ಕಿಂಗ್ ಕ್ಯಾಮೆರಾ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಹೊಸದಾದ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಒಳಗೊಂಡಿದೆ. ಎಲೆಕ್ಟ್ರಿಕ್ ಸ್ಟೀರಿಂಗ್ ವೀಲ್ ಹೊಂದಿದ್ದು, ಕಾರಿನ ಚಾಲನೆಯನ್ನು ಸರಳಗೊಳಿಸುತ್ತದೆ. ಲೀಲಾಜಾಲವಾಗಿ ಯು-ಟರ್ನ್ ತೆಗೆದುಕೊಳ್ಳಬಹುದು. ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಒಳಗೊಂಡಿದ್ದು, ಸ್ಟೀರಿಂಗ್ ವೀಲ್‌ನ್ನು ಟಿಲ್ಟ್‌ ಮಾಡಲು ಮಾತ್ರ ಸಾಧ್ಯವಾಗುತ್ತದೆ.

ಈ ಕಾರು ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೀಟ್ ಬೆಲ್ಟ್ ರಿಮೈಂಡರ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು 4 ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 160 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 330 ಎನ್ಎಂ ಪೀಕ್ ಟಾರ್ಕ್ ಅಥವಾ 177 ಹೆಚ್‌ಪಿ ಶಕ್ತಿ ಹಾಗೂ 380 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮತ್ತೊಂದು 2.2-ಲೀಟರ್ ಡೀಸೆಲ್ ಎಂಜಿನ್ ರೂಪಾಂತರಗಳಿಗೆ ತಕ್ಕಂತೆ 150 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 330 ಎನ್ಎಂ ಪೀಕ್ ಟಾರ್ಕ್ ಅಥವಾ 175 ಹೆಚ್‌ಪಿ ಶಕ್ತಿ ಹಾಗೂ 370 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಕಾರು 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ಗಳೊಂದಿಗೂ ದೊರೆಯುತ್ತದೆ.

Article Published On: Wednesday, October 9, 2024, 11:06 [IST]
English summary
Mahindra thar roxx production to reach 9 500 units by january
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+