ಇತಿಹಾಸದಲ್ಲಿ ಬಹುದೊಡ್ಡ ದಾಖಲೆ: 31,730 ಕೋಟಿಗೂ ಅಧಿಕ ಮೌಲ್ಯದ ಬುಕಿಂಗ್ ಪಡೆದ ಥಾರ್ ರಾಕ್ಸ್!
ಭಾರತದಲ್ಲಿ ಮಹೀಂದ್ರಾ ಕಂಪನಿಯ ಕಾರುಗಳಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇದಕ್ಕೆ ಪ್ರಮುಖ ಕಾರಣ ಕಾಲಕ್ಕೆ ತಕ್ಕಂತೆ, ತಮ್ಮ ಕಾರುಗಳಿಗೆ ಅಪ್‌ಡೇಟ್‌ಗಳನ್ನು ಕೊಡುತ್ತಾ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತಾ ಬರುತ್ತಿದೆ. ಇದೇ ಕಾರಣದಿಂದಲೇ ಮಹೀಂದ್ರಾ ಕಂಪನಿಯ ಕಾರುಗಳು ಜನರ ಫೇವರೀಟ್ ಆಗಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಅದರಲ್ಲಿ ಪ್ರಮುಖವಾದುದು ಥಾರ್. ಇದೀಗ ಥಾರ್ ಸರಣಿಗೆ ರಾಕ್ಸ್ ಸಹ ಸೇರಿಕೊಂಡಿರುವುದು ಎಲ್ಲರಿಗೂ ತಿಳಿದಿದೆ.
ಕೆಲ ದಿನಗಳ ಹಿಂದೆಯಷ್ಟೇ ಮಹೀಂದ್ರಾ ಥಾರ್ ರಾಕ್ಸ್ ಬುಕಿಂಗ್ ಆರಂಭಿಸಿತ್ತು. ಇದಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಗ್ರಾಹಕರಿಂದ ಲಭ್ಯವಾಗಿತ್ತು. ಕೇವಲ 60 ನಿಮಿಷಗಳಲ್ಲಿ 1,76,218 ಥಾರ್ ರಾಕ್ಸ್ ಎಸ್‌ಯುವಿಗಳನ್ನು ಆರ್ಡರ್ ಮಾಡಿದ್ದಾರೆ. ಈ ಮೂಲಕ ಆಟೋಮೊಬೈಲ್ ಮಾರುಕಟ್ಟೆ ಇತಿಹಾಸದಲ್ಲಿ ಮಹೀಂದ್ರಾ ಹೊಸದೊಂದು ದಾಖಲೆ ಬರೆದಿದೆ.

ಇತ್ತೀಚೆಗೆ, ಮಹೀಂದ್ರಾ ಥಾರ್ ರೋಕ್ಸ್‌ನ 4WD (Mahindra Thar Roxx) ರೂಪಾಂತರಗಳ ಬೆಲೆಯನ್ನು ಬಹಿರಂಗಪಡಿಸಿತು, ಇದು ಪ್ರತ್ಯೇಕವಾಗಿ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಮೂಲ ಮಾದರಿಯು ರೂ.ನಿಂದ ಪ್ರಾರಂಭವಾಗುತ್ತದೆ. 12.99 ಲಕ್ಷ ಟಾಪ್ ಎಂಡ್ 4WD ಸ್ವಯಂಚಾಲಿತ ಆವೃತ್ತಿಯ ಬೆಲೆ ರೂ. 22.49 ಲಕ್ಷ (ಎಕ್ಸ್ ಶೋ ರೂಂ). ಮೂರು-ಬಾಗಿಲಿನ ಥಾರ್‌ಗೆ ಹೋಲಿಸಿದರೆ ರಾಕ್ಸ್ ದೊಡ್ಡ ಆಯಾಮಗಳನ್ನು ನೀಡುತ್ತದೆ, ಇದು ಹೆಚ್ಚು ವಿಶಾಲವಾದ ಒಳಾಂಗಣ ಮತ್ತು ಹೆಚ್ಚಿನ ಪ್ರಾಕ್ಟಿಕಾಲಿಟಿಯನ್ನು ಒದಗಿಸುತ್ತದೆ.
ಈ ಬುಕಿಂಗ್‌ನಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಕೇವಲ ಒಂದು ಗಂಟೆಯಲ್ಲಿ 1.76 ಲಕ್ಷ ಬುಕ್ಕಿಂಗ್‌ಗಳು ನಡೆದಿದ್ದು, ವಾಹನೋದ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬುಕಿಂಗ್ ಮೂಲಕವೇ ಕೇವಲ 31,730 ಕೋಟಿ ರೂಗಳ ಮೌಲ್ಯವನ್ನು ಸಂಗ್ರಹಿಸಿದೆ ಎಂದರೆ ನೀವು ನಂಬಲೇ ಬೇಕು. ಈ ಮೂಲಕ ಬುಕಿಂಗ್‌ನಲ್ಲಿ ಮಹೀಂದ್ರಾ ಕಂಪನಿಯು ಹೊಸ ಇತಿಹಾಸವನ್ನೇ ನಿರ್ಮಿಸಿದೆ ಎಂದರೆ ತಪ್ಪಾಗಲಾರದು.

ಮಹೀಂದ್ರಾ ಥಾರ್ ರಾಕ್ಸ್ ಬಗ್ಗೆ ನೋಡುವುದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ. ರೂ.12.99 ಲಕ್ಷದಿಂದ ರೂ.22.49 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ವಿವಿಧ ರೂಪಾಂತರಗಳು (ವೇರಿಯೆಂಟ್) ಹಾಗೂ ಹಲವು ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಎಸ್‌ಯುವಿ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 2-ಲೀಟರ್ ಟರ್ಬೊ ಪೆಟ್ರೋಲ್ & 2.2-ಲೀಟರ್ ಡಿಸೇಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಹಾಗೂ 4ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಸರಿ ಸುಮಾರು 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡಬಹುದು ಎಂದು ತಿಳಿದುಬಂದಿದೆ.
ಮಹೀಂದ್ರಾ ಥಾರ್ ರಾಕ್ಸ್‌ನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 447 ಲೀಟರ್‌ನ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25 - ಇಂಚು), ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು (ಫೀಚರ್) ಹೊಂದಿದೆ.
ನೂತನ ಥಾರ್ ರಾಕ್ಸ್ ಪ್ರಯಾಣಿಕರಿಗೂ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್ ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಎಸ್‌ಯುವಿಗೆ 5-ಡೋರ್‌ನ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಹಾಗೂ ಫೋರ್ಸ್ ಗೂರ್ಖಾ (Force Gurkha) ಮಾದರಿಗಳು (ಮಾಡೆಲ್) ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications