ಹೊಸ 'ಮಹೀಂದ್ರಾ ಥಾರ್ ರಾಕ್ಸ್'ಗಾಗಿ ಶಬರಿಯಂತೆ ತಪಸ್ಸು ಮಾಡಬೇಕು.. ಇದೇ ಕಾರಣಕ್ಕೆ ಎದುರಾಳಿಗಳಿಗೆ ನಡುಕ!
ಮಹೀಂದ್ರಾ (Mahindra) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಆ.14 ರಂದು ಕೇರಳದ ಕೊಚ್ಚಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ 5-ಡೋರ್‌ನ ಹೊಚ್ಚ ಹೊಸ ಥಾರ್ ರಾಕ್ಸ್ (Thar Roxx) ಎಸ್‌ಯುವಿಯನ್ನು ಆದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದೇ ಅ.3 ರಿಂದ ಈ ಕಾರಿಗಾಗಿ ಗ್ರಾಹಕರಿಂದ ಆರ್ಡರ್ ಪಡೆಯುವುದನ್ನು ಕಂಪನಿಯು ಶುರು ಮಾಡಿತ್ತು. 1 ಗಂಟೆಯೊಳಗೆ 1.76 ಲಕ್ಷ ಥಾರ್ ರಾಕ್ಸ್ ಎಸ್‌ಯುವಿಗಳನ್ನು ಖರೀದಿದಾರರು ಬುಕ್ಕಿಂಗ್ ಮಾಡಿದ್ದರು. ಕೆಲವೇ ದಿನಗಳ ಹಿಂದೆ, ನೂತನ ಥಾರ್ ರಾಕ್ಸ್ ವಿತರಣೆಯನ್ನು ಆರಂಭಿಸಲಾಗಿದೆ.
ಸದ್ಯ, ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಕಾಯುವಿಕೆ ಅವಧಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಭಾರಿ ವೈರಲ್ ಆಗುತ್ತದೆ. ಗ್ರಾಹಕರೊಬ್ಬರು, ಮಹೀಂದ್ರಾ ಕಂಪನಿ ಕಳುಹಿಸಿದೆ ಎನ್ನಲಾಗಿರುವ ಮೆಸೇಜ್‌ನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹೊಸ ಎಸ್‌ಯುವಿಯನ್ನು ಏಪ್ರಿಲ್ 19, 2026 ರಿಂದ ಮೇ 18, 2026 ಅವಧಿಯಲ್ಲಿ ವಿತರಿಸಲಾಗುತ್ತದೆ ಎಂದು ಬರೆಯಲಾಗಿದೆ.

ಈ ಮೆಸೇಜ್‌ನ್ನು ಗಮನಿಸಿದಾಗ ನೂತನ ಥಾರ್ ರಾಕ್ಸ್ ಗ್ರಾಹಕರಿಗೆ ವಿತರಣೆಯಾಗಲು ಸರಿ ಸುಮಾರು 1.5 ವರ್ಷಗಳು ಬೇಕಾಗುತ್ತದೆ. ಆದರೆ, ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ಕಾಯುವಿಕೆ ಅವಧಿಯೂ ಒಂದಷ್ಟು ಬೇರೆಯಾಗಬಹುದು. ಮಹೀಂದ್ರಾ ಕಂಪನಿ ಹೆಚ್ಚಿನ ಸಂಖ್ಯೆಯಲ್ಲಿ ಥಾರ್ ರಾಕ್ಸ್ ಎಸ್‌ಯುವಿಗಳನ್ನು ಗ್ರಾಹಕರಿಗೆ ತಲುಪಿಸಲು ಕೂಡ ಮುಂದಾಗಿದೆ. ಈ ಹಿನ್ನೆಲೆ ಭಾರಿ ಪ್ರಯಾಣದಲ್ಲಿ ಉತ್ಪಾದನೆ ಮಾಡುತ್ತಿದೆ.
ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಮಹೀಂದ್ರಾ ಕಂಪನಿಯು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ಬರೋಬ್ಬರಿ 9,500 ಥಾರ್ ಎಸ್‌ಯುವಿಗಳನ್ನು ಉತ್ಪಾದಿಸುತ್ತಿದೆ. ಅದರಲ್ಲಿ 3-ಡೋರ್ ಥಾರ್‌ನ 3000 ಯುನಿಟ್ ಮತ್ತು ಥಾರ್ ರಾಕ್ಸ್ ಎಸ್‌ಯುವಿಯ 6500 ಯುನಿಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ದೇಶೀಯವಾಗಿ ಖರೀದಿಗೆ ಲಭ್ಯವಿರುವ ಮಹೀಂದ್ರಾ ಥಾರ್ ರಾಕ್ಸ್ ಕನಿಷ್ಠ ರೂ.12.99 ಲಕ್ಷದಿಂದ ಗರಿಷ್ಠ ರೂ.22.49 ಲಕ್ಷವರೆಗೆ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. ಎಂಎಕ್ಸ್3, ಎಎಕ್ಸ್3ಎಲ್ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದ್ದು, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ.
ಈ ಎಸ್‌ಯುವಿ 2-ಲೀಟರ್ ಟರ್ಬೊ ಪೆಟ್ರೋಲ್ & 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಎವರೆಸ್ಟ್ ವೈಟ್ ಹಾಗೂ ಫಾರೆಸ್ಟ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, 5 ಜನರು ಸುಲಭ ಪ್ರಯಾಣಿಸಬಹುದು. 447 ಲೀಟರ್‌ನ ಬೂಟ್ ಸ್ಪೇನ್‌ನ್ನು ಒಳಗೊಂಡಿದೆ.
ನೂತನ ಥಾರ್ ರಾಕ್ಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್-ಸನ್‌ರೂಫ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 4-ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಒಟ್ಟಾರೆಯಾಗಿ, 5-ಡೋರ್‌ನ ಮಾರುತಿ ಸುಜುಕಿ ಜಿಮ್ನಿ & ಫೋರ್ಸ್ ಗೂರ್ಖಾಗೆ ಪ್ರಬಲವಾಗಿ ಸ್ಪರ್ಧೆಯೊಡ್ಡಲು ಬಂದಿರುವ ಈ ಮಹೀಂದ್ರಾ ಥಾರ್ ರಾಕ್ಸ್ ಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಇನ್ನೇನು ಒಂದರೆಡು ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಆಗ ಬುಕ್ಕಿಂಗ್ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಳಗೊಂಡರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








