ಸೆಗ್ಮೆಂಟ್‌ನಲ್ಲೇ ಮೊದಲ ಟಾಪ್ 5 ಫೀಚರ್ಸ್ ಪಡೆದ ಮಹೀಂದ್ರಾ ಥಾರ್ ರೋಕ್ಸ್
ಭಾರತೀಯ ಆಫ್‌ರೋಡರ್ ಸೆಗ್‌ಮೆಂಟ್‌ನಲ್ಲಿ 3-ಡೋರ್ ಥಾರ್ ಭಾರೀ ಜನಪ್ರಿಯತೆ ಪಡೆದಿತ್ತು. ಇದಕ್ಕೆ ಪ್ರತಿಸ್ಪರ್ಧಿಗಳಾಗಿ ಮಾರುತಿ ಸುಜುಕಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾ 5-ಡೋರ್ ಆವೃತ್ತಿಯಲ್ಲಿ ಬಿಡುಗಡೆಯಾಗಿದ್ದವು, ಆದ್ರೂ ಥಾರ್‌ನಷ್ಟು ಜನಪ್ರಿಯತೆ ಪಡೆಯಲಿಲ್ಲ. ಅಂತಿಮವಾಗಿ ಮಹೀಂದ್ರಾ ಥಾರ್ ರೋಕ್ಸ್ 5-ಡೋರ್ ಎಸ್‌ಯುವಿ ಆಧುನಿಕ ಅನುಕೂಲತೆ ಮತ್ತು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಮಹೀಂದ್ರಾ ಥಾರ್ ರೋಕ್ಸ್‌ನ ವೈಶಿಷ್ಟ್ಯಗಳನ್ನು ಇಲ್ಲಿ ಪರಿಶೀಲಿಸೋಣ, ಈ ಎಸ್‌ಯುವಿ ಖರೀದಿಯ ಬಗ್ಗೆ ಕುತೂಹಲವಿದ್ದವರಿಗೆ ಈ ಲೇಖನ ತುಂಬಾ ಉಪಯುಕ್ತವಾಗಬಹುದು.
ಮಹೀಂದ್ರ ಥಾರ್ ರಾಕ್ಸ್ ವೈಶಿಷ್ಟ್ಯಗಳು: ಈ ಆಧುನಿಕ SUV ಉನ್ನತ ದರ್ಜೆಯ ತಂತ್ರಜ್ಞಾನವನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಟ್ವಿನ್ 10.25-ಇಂಚಿನ ಡಿಜಿಟಲ್ ಡಿಸ್ಪ್ಲೇ ನೀಡಲಾಗಿದೆ. ಜೊತೆಗೆ ಪನಾರಮಿಕ್ ಸನ್‌ರೂಫ್, ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು, 9-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಮತ್ತು ಮಲ್ಟಿ ಡ್ರೈವ್ ಮೋಡ್‌ಗಳು ಇವೆ.

ಬಹು ಎಂಜಿನ್ ಆಯ್ಕೆ: ಥಾರ್ ರೋಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡುವ ಏಕೈಕ ಆಫ್‌ರೋಡ್ ಎಸ್‌ಯುವಿಯಾಗಿದೆ. ಇದು 2-ಲೀಟರ್ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 159.5 ಬಿಹೆಚ್‌ಪಿ ಪವರ್ ಮತ್ತು 330 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡನೆಯದು 174 ಬಿಹೆಚ್‌ಪಿ ಪವರ್ ಮತ್ತು 380 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಲೆವೆಲ್ 2 ADAS: ಥಾರ್ ರೋಕ್ಸ್ ಸುರಕ್ಷತಾ ಫೀಚರ್‌ಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಏಕೆಂದರೆ ಇದರಲ್ಲಿ ಲೆವೆಲ್ 2 ADAS ನೀಡಲಾಗಿದೆ. ಜೊತೆಗೆ ಫಾರ್ವರ್ಡ್ ಕೊಲಿಷನ್ ಅಲರ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಎಕ್ಸಿಟ್ ಅಲರ್ಟ್, ಲೇನ್ ಕೀಪ್ ಅಸಿಸ್ಟ್ ಮುಂತಾದ ಹತ್ತು ವೈಶಿಷ್ಟ್ಯಗಳೊಂದಿಗೆ ಮಹೀಂದ್ರಾ ಥಾರ್ ರೋಕ್ಸ್ ಅನ್ನು ನಿರ್ಮಿಸಲಾಗಿದೆ.

ಡ್ರೈವ್ ಟ್ರೇನ್‌ಗಳು: ಮಹೀಂದ್ರಾ ಥಾರ್ ರೋಕ್ಸ್ ನಗರ ಪರಿಸ್ಥಿತಿಗಳು ಮತ್ತು ಆಫ್ - ರೋಡಿಂಗ್ ಹಾದಿಗಳಿಗೆ ಆಯ್ಕೆಗಳನ್ನು ನೀಡುವ ಏಕೈಕ ಲ್ಯಾಡರ್ - ಆನ್ ಫ್ರೇಮ್ ಆಧಾರಿತ ಎಸ್‌ಯುವಿಯಾಗಿದೆ. ಹೊಸ 5-ಡೋರ್ ಎಸ್‌ಯುವಿ ರಿಯರ್ ವೀಲ್ ಡ್ರೈವ್ ಮತ್ತು 4-ವ್ಹೀಲ್ ಡ್ರೈವ್ ಆವೃತ್ತಿಗಳಲ್ಲಿ ಲಭ್ಯವಿದೆ.
ಗಮನಿಸಬೇಕಾದ ಆಸಕ್ತಿದಾಯಕ ಸಂಗತಿಯೆಂದರೆ, 3 - ಡೋರ್ ಥಾರ್ ಗಿಂತ ಭಿನ್ನವಾಗಿ, ರೋಕ್ಸ್ 4 - ವೀಲ್ - ಡ್ರೈವ್ ಆಯ್ಕೆಯು ಡೀಸೆಲ್ ನಲ್ಲಿ ಮಾತ್ರ ಬರುತ್ತದೆ. ಮತ್ತೊಂದೆಡೆ ಪ್ರತಿಸ್ಪರ್ಧಿಗಳಾದ ಜಿಮ್ನಿ ಮತ್ತು ಗೂರ್ಖಾ 2 - ವೀಲ್ - ಡ್ರೈವ್ ಟ್ರಿಮ್ ಅನ್ನು ನೀಡುತ್ತಿಲ್ಲ.

ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್: ಥಾರ್ ರೋಕ್ಸ್ ಅತ್ಯಾಧುನಿಕ ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಹೊಂದಿರುವ ಭಾರತೀಯ ಮೊದಲ ವಾಹನವಾಗಿದೆ. ಈ ವೈಶಿಷ್ಟ್ಯವು ಥಾರ್ ರೋಕ್ಸ್ ಎಲ್ಲಾ ನಾಲ್ಕು ಚಕ್ರಗಳಿಗೆ ಅಗತ್ಯವಿರುವ ನಿಖರವಾದ ಎಳೆತವನ್ನು ನೀಡುತ್ತದೆ. ಇದು ವೀಲ್ ಸ್ಪಿನ್ ಅನ್ನು ಕನಿಷ್ಠಕ್ಕೆ ತಗ್ಗಿಸುತ್ತದೆ. ಇದು ವಿವಿಧ ಸವಾಲಿನ ಪರಿಸ್ಥಿತಿಗಳಿಂದ ಹೊರಬರಲು ಹೆಚ್ಚು ಸಾಮರ್ಥ್ಯವನ್ನು ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications