ಮಹೀಂದ್ರಾದ 3 ಪ್ರಮುಖ ಕಾರುಗಳಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್: ಧೂಳೆಬ್ಬಿಸದ ಥಾರ್ ರೋಕ್ಸ್!
ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ ಕಂಪನಿಯು, ಸುರಕ್ಷಿತ ಎಸ್‌ಯುವಿಗಳನ್ನು ನಿರ್ಮಿಸುವಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಥಾರ್ ರೋಕ್ಸ್ (Thar ROXX), ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಮತ್ತು ಎಕ್ಸ್‌ಯುವಿ 400 (XUV400) ಕಾರುಗಳು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್-ಎನ್‌ಸಿಎಪಿ) ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿವೆ. ಮುಖ್ಯವಾಗಿ ಥಾರ್ ರೋಕ್ಸ್ 5-ಸ್ಟಾರ್ ಭಾರತ್-ಎನ್‌ಸಿಎಪಿ ರೇಟಿಂಗ್ ಅನ್ನು ಪಡೆದುಕೊಂಡ ಮೊದಲ ಬಾಡಿ-ಆನ್-ಫ್ರೇಮ್ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಹೀಂದ್ರಾ ಥಾರ್ ರೋಕ್ಸ್: ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (adult occupant protection)32 ಅಂಕಗಳಿಗೆ 31.09 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ (child occupant protection)49 ಅಂಕಗಳಿಗೆ 45 ಅಂಕಗಳನ್ನು ಗಳಿಸಿದೆ. ಥಾರ್ ರೋಕ್ಸ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಸೀಟ್‌ಬೆಲ್ಟ್ ರಿಮೈಂಡರ್ (SBR) ಅನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ಪ್ರಮಾಣಿತವಾಗಿ ನೀಡಲಾಗಿದೆ.

ಇವಿಷ್ಟೇ ಅಲ್ಲದೇ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಲೇನ್ ಎಕ್ಸಿಟ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್‌ನಂತಹ ಹೆಚ್ಚುವರಿ ಲೆವಲ್ 2 ADAS ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಬ್ರೇಕ್ ಲಾಕಿಂಗ್ ಡಿಫರೆನ್ಷಿಯಲ್ (BLD)ನಂತಹ ಫೀಚರ್‌ಗಳು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಮಹೀಂದ್ರಾ XUV 3XO: ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.36 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಗಳಿಸಿದೆ. ಈ ಎಸ್‌ಯುವಿನಲ್ಲಿ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳಾಗಿ ಆರು ಏರ್‌ಬ್ಯಾಗ್‌ಗಳು, ಎಲ್ಲಾ ಸೀಟ್‌ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್ ಸೇರಿವೆ.

XUV 3XO ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿದಂತೆ ಲೆವೆಲ್ 2 ADAS ಅನ್ನು ಸಹ ಒಳಗೊಂಡಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಆಲ್-ರೌಂಡ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದರ 5-ಸ್ಟಾರ್ ಚೈಲ್ಡ್ ಸೇಫ್ಟಿ ರೇಟಿಂಗ್‌ನೊಂದಿಗೆ, ಇದು ಕುಟುಂಬ-ಸುರಕ್ಷಿತ ವಾಹನಗಳನ್ನು ನಿರ್ಮಿಸಲು ಮಹೀಂದ್ರಾದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಮಹೀಂದ್ರಾ XUV400: ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 30.377 ಅಂಕಗಳು ಹಾಗೂ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಸಾಧಿಸಿದೆ. ಇದು ಭಾರತದಲ್ಲಿ ಸುರಕ್ಷಿತ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದೆನಿಸಿಕೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿನಲ್ಲಿ ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಎಲ್ಲಾ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಂತೆ ಅಗತ್ಯ ಸುರಕ್ಷತಾ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿದೆ.

ಅಡಾಪ್ಟಿವ್ ಮಾರ್ಗಸೂಚಿಗಳೊಂದಿಗೆ ಅದರ ರಿವರ್ಸ್ ಕ್ಯಾಮೆರಾ ಡ್ರೈವರ್ ಅಲರ್ಟ್ ಅನ್ನು ಸಹ ಹೊಂದಿದೆ. ಪ್ರಸ್ತುತ ಮಹೀಂದ್ರಾ ಕಂಪನಿಯು ತನ್ನ ಕುಟುಂಬದಲ್ಲಿ XUV700 ಮತ್ತು Scorpio-N ಕಾರುಗಳೊಂದಿಗೆ 5-ಸ್ಟಾರ್ ರೇಟಿಂಗ್ ಪಡೆದು ಇದೀಗ ಈ ಸುರಕ್ಷತಾ ಸಾಂಪ್ರದಾಯವನ್ನು ಇತರ ಕಾರುಗಳಿಗೂ ವಿಸ್ತರಿಸುತ್ತಿದೆ, ಇವೆಲ್ಲವೂ SUV ವಿನ್ಯಾಸದ ಪ್ರಮುಖ ಆಧಾರವಾಗಿ ಸುರಕ್ಷತೆಗೆ ಮಹೀಂದ್ರಾದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








