Mahindra Thar: ಮಹೀಂದ್ರಾ ಥಾರ್‌ಗಾಗಿ ಮುಗಿಬಿದ್ದ ಗ್ರಾಹಕರು.. ದೊಡ್ಡ ಸಂಖ್ಯೆಯಲ್ಲಿ ಆರ್ಡರ್, ಎಷ್ಟು ಗೊತ್ತಾ?
ಭಾರತದಲ್ಲಿ ಟಾಟಾದಂತೆ 'ಮಹೀಂದ್ರಾ' ಕೂಡ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಆಫ್-ರೋಡ್ ಎಸ್‌ಯುವಿ 'ಥಾರ್'ಗೆ ಭಾರೀ ಬೇಡಿಕೆಯಿದ್ದು, ದಿನದಿಂದ ದಿನಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್‌ನ್ನು ಪಡೆದುಕೊಳ್ಳುತ್ತಿದೆ. ಈ ಕಾರಿನ ವಿತರಣೆ ತೆಗೆದುಕೊಳ್ಳಲು ಸಾವಿರಾರು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ಪ್ರಸ್ತುತ ಮೇ ತಿಂಗಳು ಮಹೀಂದ್ರಾ ಕಂಪನಿಯು ಸರಿ ಸುಮಾರು 2.2 ಲಕ್ಷ ಕಾರುಗಳ ಆರ್ಡರ್‌ನ್ನು ಗ್ರಾಹಕರಿಗೆ ಪೂರೈಸಬೇಕಾಗಿದೆ. ಅದರಲ್ಲಿ ಥಾರ್ ಎಸ್‌ಯುವಿಯ ಪಾಲು ದೊಡ್ಡದಿದ್ದು, ಬರೋಬ್ಬರಿ 59,000 ಯುನಿಟ್‌ಗಳನ್ನು ಖರೀದಿದಾರರಿಗೆ ಹಸ್ತಾಂತರಿಸಬೇಕಾಗಿದೆ. ಈಗಲೂ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತೆ ಥಾರ್‌ಗೆ ಸಖತ್ ಡಿಮ್ಯಾಂಡ್ ಇದ್ದು, ಪ್ರತಿ ತಿಂಗಳು 7,000ದಷ್ಟು ಹೊಸ ಬುಕ್ಕಿಂಗ್‌ಗಳನ್ನು ತನ್ನದಾಗಿಸಿಕೊಳ್ಳುತ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ನೂತನ ಮಹೀಂದ್ರಾ ಥಾರ್ (Mahindra Thar), ರೂ.11.35 ಲಕ್ಷದಿಂದ ರೂ.17.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 3 - ಡೋರ್ (ಬಾಗಿಲು) ಆಯ್ಕೆಯಲ್ಲಿ ಸಿಗುವ ಈ ಎಸ್‌ಯುವಿಯು ಅತ್ಯಾಧುನಿಕ ವಿನ್ಯಾಸ (ಡಿಸೈನ್)ವನ್ನು ಸಹ ಒಳಗೊಂಡಿದೆ. ಎವರೆಸ್ಟ್ ವೈಟ್, ಡೆಸರ್ಟ್ ಫ್ಯೂರಿ, ರೆಡ್ ರೇಜ್ ಸೇರಿದಂತೆ ಹಲವು ಬಣ್ಣಗಳನ್ನು ಪಡೆದಿದ್ದು, ಗ್ರಾಹಕರು ತಮ್ಮಿಷ್ಟದ ಆವೃತ್ತಿಯನ್ನು ಕೊಂಡುಕೊಳ್ಳಬಹುದು.
ಈ ಮಹೀಂದ್ರಾ ಥಾರ್ ಎಸ್‌ಯುವಿಯು ಮೂರು ಪವರ್‌ಟ್ರೇನ್‌ನೊಂದಿಗೆ ದೊರೆಯುತ್ತದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 152 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 300 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2.2-ಲೀಟರ್ ಡಿಸೇಲ್ ಎಂಜಿನ್ 132 ಪಿಎಸ್ ಪವರ್ ಹಾಗೂ 300 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 118 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 300 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6 - ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್‌ನ್ನು ಒಳಗೊಂಡಿದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, 13 ರಿಂದ 15.2 ಕೆಎಂಪಿಎಲ್ ಇಂಧನ ದಕ್ಷತೆ (Fuel efficiency) ಯನ್ನು ಹೊಂದಿದೆ.
ಹೊಸ ಥಾರ್ ಎಸ್‌ಯುವಿಯು 4WD (ಫೋರ್ ವೀಲ್ ಡ್ರೈವ್) ಹಾಗೂ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 4 ಮಂದಿ ಆರಾಮದಾಯಕವಾಗಿ ದೂರದ ಊರುಗಳಿಗೆ ಪ್ರಯಾಣಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಮ್ಯಾನುವಲ್ ಎಸಿ, ಡಿಟ್ಯಾಚೇಬಲ್ ರೂಫ್ ಪ್ಯಾನೆಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಮಹೀಂದ್ರಾ ಥಾರ್ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಪಡೆದಿದೆ. ಥಾರ್ ಎಸ್‌ಯುವಿಗೆ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿ ಕಾರುಗಳು ಪ್ರಬಲ ಎದುರಾಳಿಯಾಗಿವೆ. ಮುಂಬರುವ ತಿಂಗಳಲ್ಲಿ 5 - ಡೋರ್ ಥಾರ್ ಸಹ ಬಿಡುಗಡೆಯಾಗುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








