ಗ್ರಾಹಕರಿಗೆ ಸಡನ್ ಶಾಕ್ ಕೊಟ್ಟ ಮಹೀಂದ್ರಾ... SUV ಖರೀದಿಗೂ ಮುನ್ನ ಈ ಮಾಹಿತಿ ತಿಳಿದಿರಲಿ!
ಮಹೀಂದ್ರಾ ಈ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಮಾದರಿಗಳಾದ ಥಾರ್, ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೊ ಎನ್ ಬೆಲೆಗಳನ್ನು ಹೆಚ್ಚಿಸಿದೆ. ಎಲ್ಲಾ ಇತರ ಕಾರು ತಯಾರಕರು ತಮ್ಮ ಕಾರುಗಳ ಬೆಲೆಗಳನ್ನು ಹೆಚ್ಚಿಸುವ ಕ್ರಮವನ್ನು ಅನುಸರಿಸಿ, ಮಹೀಂದ್ರಾ ಥಾರ್, XUV700 ಮತ್ತು ಸ್ಕಾರ್ಪಿಯೊಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.
1. ಮಹೀಂದ್ರಾ ಥಾರ್: ಮಹೀಂದ್ರಾ ಥಾರ್‌ನ ಬೇಸ್ ವೇರಿಯೆಂಟ್ ಬೆಲೆಗಳು ಈ ಹಿಂದೆ ರೂ. 10.98 ಲಕ್ಷವಿತ್ತು, ಈಗ 11.25 ಲಕ್ಷಕ್ಕೆ ಏರಿಕೆಯಾಗಿದೆ. ಹಾಗೆಯೇ ಟಾಪ್-ಎಂಡ್ ವೇರಿಯೆಂಟ್‌ಗೆ 16.93 ಲಕ್ಷದಿಂದ 17.20 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದಂತೆ ಎಲ್ಲಾ ಇತರ ವೇರಿಯೆಂಟ್‌ಗಳ ಬೆಲೆಗಳು ರೂ. 23 ಸಾವಿರದಿಂದ 35 ಸಾವಿರ ರೂ. ವ್ಯಾಪ್ತಿಯಲ್ಲಿ ಹೆಚ್ಚಾಗಿದೆ.

2. ಮಹೀಂದ್ರಾ XUV700: ಕುತೂಹಲಕಾರಿಯಾಗಿ XUV700 ವೇರಿಯೆಂಟ್ ಆಧರಿಸಿ ಕೆಲವಕ್ಕೆ ಬೆಲೆಗಳನ್ನು ಹೆಚ್ಚಿಸಿದರೆ, ಕೆಲ ವೇರಿಯೆಂಟ್‌ಗಳ ಬೆಲೆ ಇಳಿಕೆ ಮಾಡಲಾಗಿದೆ. ಉದಾಹರಣೆಗೆ, ಬೇಸ್ MX (ಪೆಟ್ರೋಲ್ ಮ್ಯಾನುಯಲ್) ವೇರಿಯೆಂಟ್ ಈಗ ರೂ. 13.99 ಲಕ್ಷದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಅಂದರೆ ರೂ. 14.03 ಲಕ್ಷವಿದ್ದ ಕಾರು ಈಗ ರೂ. 4,000 ಕಡಿತವಾಗಿದೆ.
ಅದೇ ರೀತಿ, AX3 ಮತ್ತು AX5 ರೂಪಾಂತರಗಳ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಗಳು ಕ್ರಮವಾಗಿ ರೂ.8 ಸಾವಿರ ಮತ್ತು ರೂ.16 ಸಾವಿರ ಬೆಲೆ ಕಡಿತವಾಗಿದೆ. ಟಾಪ್-ಸ್ಪೆಕ್ AX7L 7-ಸೀಟರ್ AWD ಡೀಸೆಲ್ ಆಟೋಮ್ಯಾಟಿಕ್ ರೂಪಾಂತರವು ರೂ. 42,000 ರಷ್ಟು ದುಬಾರಿಯಾಗಿ ಈಗ ರೂ. 26.99 ಲಕ್ಷದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. AX7L 7-ಸೀಟರ್ ಪೆಟ್ರೋಲ್ ಆಟೋಮ್ಯಾಟಿಕ್ 57,000 ರೂ.ಗಳ ಬೆಲೆ ಏರಿಕೆಯಾಗಿದೆ.

3. ಮಹೀಂದ್ರಾ ಸ್ಕಾರ್ಪಿಯೋ ಎನ್ & ಸ್ಕಾರ್ಪಿಯೋ ಕ್ಲಾಸಿಕ್: ಮೊದಲನೆಯದಾಗಿ, ಒಳ್ಳೆಯ ಸುದ್ದಿ ಎಂದರೆ Z8L 4WD (ಡೀಸೆಲ್ ಮ್ಯಾನುಯಲ್) ಮತ್ತು Z8 4WD ಮತ್ತು Z8L 4WD (ಡೀಸೆಲ್ ಆಟೋಮ್ಯಾಟಿಕ್) ನಂತಹ ಮಾದರಿಗಳಿಗೆ ಕೆಲವು ವಿನಾಯಿತಿಗಳಿವೆ, ಆದ್ರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ.
ಇದರ ಹೊರತಾಗಿ ಎಲ್ಲಾ ಇತರ ಮಾದರಿಗಳು ಮತ್ತು ರೂಪಾಂತರಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ. ಸ್ಕಾರ್ಪಿಯೋ N ಪೆಟ್ರೋಲ್ ಮ್ಯಾನುವಲ್ ರೂಪಾಂತರಗಳು ರೂ. 34 ಸಾವಿರದಿಂದ ರೂ. 39 ಸಾವಿರ ವ್ಯಾಪ್ತಿಯಲ್ಲಿ ಬೆಲೆ ಏರಿಕೆಯಾಗಿವೆ. ಪೆಟ್ರೋಲ್ ಆಟೋಮ್ಯಾಟಿಕ್ ವೇರಿಯೆಂಟ್‌ಗಳು ರೂ. 17 ಸಾವಿರದಿಂದ ರೂ. 20 ಸಾವಿರ ಏರಿಕೆಯಾಗಿದೆ.

ಡೀಸೆಲ್ ಆವೃತ್ತಿಗಳಿಗೆ ಸಂಬಂಧಿಸಿದಂತೆ, ಮ್ಯಾನುವಲ್ ರೂಪಾಂತರಗಳ ಬೆಲೆಗಳು ರೂ. 1,000 ರಿಂದ ರೂ. 39,000 ರ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್‌ಗಳು ರೂ.11 ಸಾವಿರದಿಂದ ರೂ.26 ಸಾವಿರಕ್ಕೆ ಬೆಲೆ ಏರಿಕೆ ಕಂಡಿವೆ. ಮಹೀಂದ್ರಾ ಸ್ಕಾರ್ಪಿಯೊ N ಈಗ Z2 7-ಸೀಟರ್ ಪೆಟ್ರೋಲ್ ಮ್ಯಾನುವಲ್ ರೂ.13.60 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಟಾಪ್-ಸ್ಪೆಕ್ Z8L 4WD ಡೀಸೆಲ್ ಆಟೋಮ್ಯಾಟಿಕ್ ರೂ.24.54 ಲಕ್ಷವಿದೆ.
ಬೆಲೆ ಏರಿಕೆಯೊಂದಿಗೆ, ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಈಗ 13.59 ಲಕ್ಷದಿಂದ 17.35 ಲಕ್ಷದ ಬೆಲೆಯಲ್ಲಿ ಲಭ್ಯವಿದೆ. ಒರಟಾದ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಕೇವಲ 4 ಟ್ರಿಮ್‌ಗಳಲ್ಲಿ ಮಾತ್ರ ಲಭ್ಯವಿದೆ. ಅವುಗಳೆಂದರೆ- S, S 9-ಸೀಟರ್, S11 CC ಮತ್ತು S11. ಮೊದಲ ಎರಡು ವೇರಿಯಂಟ್‌ಗಳು ರೂ. 34 ಸಾವಿರ ದುಬಾರಿಯಾಗಿದ್ದರೆ, ಎರಡನೆಯದು ರೂ. 29 ಸಾವಿರ ಬೆಲೆ ಏರಿಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications