ಮಹೀಂದ್ರಾ ಹೊರ ತರಲಿದೆ ಹೈಬ್ರಿಡ್‌ ಕಾರುಗಳು: ಸ್ಕಾರ್ಪಿಯೋದಲ್ಲೂ ಸಿಗಲಿದೆ ಭರ್ಜರಿ ಮೈಲೇಜ್‌!

ಮಹೀಂದ್ರಾ ಕಂಪನಿಯ ಕಾರುಗಳೆಂದರೆ ಭಾರತೀಯರಿಗೆ ಒಂದು ರೀತಿಯ ಪ್ರೀತಿ. ಇದೇ ಕಾರಣದಿಂದಲೇ ಭಾರತೀಯ ಆಫ್‌ರೋಡ್‌ ಮತ್ತು ಆನ್‌ರೋಡ್‌ ಮಾರುಕಟ್ಟೆಯಲ್ಲಿ ಥಾರ್‌ ಇಷ್ಟ ಮಟ್ಟಿಗೆ ಪ್ರಸಿದ್ದಿ ಗಳಿಸಿರುವುದು. ಅದರಲ್ಲಂತೂ ಮಹೀಂದ್ರಾ ಥಾರ್‌ ರಾಕ್ಸ್‌ ಕಾರಿನ ಬೇಡಿಕೆಯಂತೂ ಗಗನದೆತ್ತರಕ್ಕೆ ಬೆಳೆಯುತ್ತಿರುವುದನ್ನು ನೀವು ನೋಡುತ್ತಲೇ ಇದ್ದೀರಿ. ಇದೀಗ ಭಾರತೀಯ ಆಟೋಮೊಬೈಲ್‌ ಕ್ಷೇತ್ರದಲ್ಲಿ ತನ್ನ ಛಾಪನ್ನು ಮತ್ತಷ್ಟು ಆಳವಾಗಿ ಊರಲು ಮತ್ತೊಂದು ಭರ್ಜರಿ ಪ್ಲಾನ್‌ ಅನ್ನು ಮಹೀಂದ್ರಾ ಸಿದ್ದಪಡಿಸುತ್ತಿದೆ.

ಮಹೀಂದ್ರಾ (Mahindra) ತನ್ನ ಭವಿಷ್ಯದ ಪೋರ್ಟ್‌ಫೋಲಿಯೊಗಾಗಿ ಬಲವಾದ ಹೈಬ್ರಿಡ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದಂತೆ ತೋರುತ್ತಿದೆ. ಈ೦ ಭಾರತೀಯ ಕಂಪನಿಯಿಂದ ಮೊದಲ ಪೆಟ್ರೋಲ್ ಹೈಬ್ರಿಡ್ ವಾಹನವು 2026 ರಲ್ಲಿ ಹೊರಬರಲಿದೆ. ಈ ವಿಭಾಗದಲ್ಲಿ ಪ್ರಸ್ತುತ ಟೊಯೋಟಾ ಮತ್ತು ಮಾರುತಿ ಸುಜುಕಿ ಪ್ರಾಬಲ್ಯ ಹೊಂದಿದ್ದು ಮಹೀಂದ್ರಾ ಸಹ ತನ್ನ ಸಾಮ್ರಾಜ್ಯವನ್ನು ಅತ್ತ ವಿಸ್ತರಿಸುತ್ತಿದೆ.

Mahindra XUV700

ಮೂಲಗಳ ಪ್ರಕಾರ, ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್‌ ಪೆಟ್ರೋಲ್- ಹೈಬ್ರಿಡ್ ಮಾರ್ಗವನ್ನು ತೆಗೆದುಕೊಳ್ಳುವ ಮೊದಲ ಮಹೀಂದ್ರಾಗಳಾಗಿವೆ. ಈ ಎರಡೂ ಎಸ್‌ಯುವಿಗಳು 2026 ರಲ್ಲಿ ಫೇಸ್‌ಲಿಫ್ಟ್‌ ಮಾದರಿಯಲ್ಲೂ ಬರಲಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ವಾಹನಗಳ ಬೇಡಿಕೆಯು ಇತ್ತೀಚೆಗೆ ಹೆಚ್ಚುತ್ತಿದ್ದು ಮಹೀಂದ್ರಾ ಈ ಕಡೆ ಹೆಚ್ಚಿನ ಗಮನವನ್ನು ಹರಿಸುತ್ತಿದೆ ಎಂದು ತೋರುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಈಗಾಗಲೇ ಮಾರುಕಟ್ಟೆಯಲ್ಲಿ ಮಹೀಂದ್ರಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಹೈಬ್ರಿಡ್ ಕ್ಷೇತ್ರದಲ್ಲಿ ಬೇರೂರಿದ್ದು, ಈಗಾಗಲೇ ಹಲವು ಹೈಬ್ರಿಡ್ ಮಾದರಿಗಳನ್ನು ಮಾರುಕಟ್ಟೆಗೆ ತಂದಿದೆ.

Mahindra XUV700

ಇನ್ನು ಹೈಬ್ರಿಡ್‌ ಟೆಕ್ನಾಲಜಿಯನ್ನು ತರಲು ಯೋಜನೆ ರೂಪಿಸಿರುವ ಮಹೀಂದ್ರಾ ಎಕ್ಸ್‌ಯುವಿ ೭೦೦ ಕಾರಿನ ಬಗ್ಗೆ ನೋಡುವುದಾದರೆ, ಇತ್ತೀಚೆಗಷ್ಟೇ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಬಹುಬೇಡಿಕೆಯ XUV700 ಎಸ್‍ಯುವಿಯ ಹೊಸ ಸ್ಪೆಷಲ್ ಬಿಡುಗಡೆ ಮಾಡಿತ್ತು. ಇದಕ್ಕೆ ಬ್ಲೇಜ್ ಎಡಿಷನ್ ಎಂಬ ಹೆಸರನ್ನು ನೀಡಿತ್ತು. ಈ ಹೊಸ ಮಹೀಂದ್ರಾ XUV700 ಬ್ಲೇಜ್ ಎಡಿಷನ್ (Mahindra XUV700 Blaze Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.24.24 ಲಕ್ಷವಾಗಿದೆ.

ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Mahindra XUV700

ಹೊಚ್ಚ ಹೊಸ ಎಕ್ಸ್‌ಯುವಿ700 ಎಸ್‍ಯುವಿ ರೂಪಾಂತರಗಳಿಗೆ ತಕ್ಕಂತೆ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. AWD (ಆಲ್ ವೀಲ್ ಡ್ರೈವ್) ಹಾಗೂ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 17 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 5, 6 ಮತ್ತು 7 ಆಸನ ವ್ಯವಸ್ಥೆಯಲ್ಲಿಯೂ ದೊರೆಯುತ್ತದೆ.

ಈ ಕಾರು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12-ಸ್ಪೀಕರ್‌ ಆಡಿಯೊ ಸಿಸ್ಟಮ್, 6-ವೇ ಪವರ್ ಡ್ರೈವರ್ ಸೀಟ್, ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಹಾಗೂ ಅಲೆಕ್ಸಾ ಕನೆಕ್ಟಿವಿಟಿಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ

More from DriveSpark

Article Published On: Tuesday, October 8, 2024, 19:00 [IST]
English summary
Mahindra will be launching xuv700 hybrid petrol engine very soon
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+