ಹೊಸ ಮಹೀಂದ್ರಾ XEV 9e ಎಸ್‌ಯುವಿ ಕೂಪೆ ವಿಡಿಯೋ: ಕನ್ನಡದಲ್ಲಿ ನಮ್ಮದೆ ಮೊದಲು...
ಮಹೀಂದ್ರಾ ಇತ್ತೀಚೆಗಷ್ಟೆ ಬಿಡುಗಡೆ ಮಾಡಿರುವ ಹೊಸ XEV 9e ಎಸ್‌ಯುವಿ ಕೂಪೆಯನ್ನು ಓಡಿಸುವ ಅವಕಾಶ ನಮಗೆ ಸಿಕ್ಕಿದೆ. ಮಹೀಂದ್ರಾ XEV 9e ನ ಮೊದಲ ಡ್ರೈವ್ ಬಗ್ಗೆ ನಮ್ಮ ಅನಿಸಿಕೆಗಳನ್ನು ವಿಮರ್ಶೆಯ ರೂಪದಲ್ಲಿ ಈ ವಿಡಿಯೋದಲ್ಲಿ ತಿಳಿಸಿದ್ದೇವೆ. XEV 9e ನ ಮುಂಭಾಗದಲ್ಲಿ ಬ್ಲಾಕ್-ಆಫ್ ಗ್ರಿಲ್, ತಲೆಕೆಳಗಾದ L-ಆಕಾರದ DRL ಗಳನ್ನು ಸಂಪರ್ಕಿಸುವ ಲೈಟ್‌ಬಾರ್, ಡೇಟೈಮ್ ರನ್ನಿಂಗ್ ಲೈಟ್‌ಗಳು ಇಂಡಿಕೇಟರ್‌ಗಳಾಗಿ ಕೂಡ ಕಾರ್ಯನಿರ್ವಹಿಸುತ್ತವೆ. ಮುಂಭಾಗದ ಬಂಪರ್‌ನ ಕೆಳಗಿನ ವಿಭಾಗವು ಪಿಯಾನೋ ಬ್ಲ್ಯಾಕ್‌ನಲ್ಲಿದ್ದು, ಈ ಹೊಳೆಯುವ ಬ್ಲಾಕ್ ಬಣ್ಣವು ವೀಲ್ ಆರ್ಚ್‌ಗಳ ಉದ್ದಕ್ಕೂ ವಿಸ್ತರಿಸಿದೆ.
ಹೊಸ ಮಹೀಂದ್ರಾ XUV 9e EV ನಲ್ಲಿ ಡ್ಯಾಶ್‌ಬೋರ್ಡ್‌ನಾದ್ಯಂತ ಚಾಚಿಕೊಂಡಿರುವ ಟ್ರಿಪಲ್-ಸ್ಕ್ರೀನ್ ಸೆಟಪ್ ಇದೆ. ಈ ಮೂರು 12.3-ಇಂಚಿನ ಸ್ಕ್ರೀನ್‌ಗಳು (ಪ್ರಯಾಣಿಕರ ಮತ್ತು ಇನ್ಫೋಟೈನ್‌ಮೆಂಟ್ ಘಟಕಗಳಿಗೆ ಟಚ್‌ಸ್ಕ್ರೀನ್‌ಗಳು) ಆಯ್ಕೆಮಾಡಿದ ಡ್ರೈವಿಂಗ್ ಮೋಡ್‌ಗಾಗಿ ರೇಂಜ್ (ಹಸಿರು), ದೈನಂದಿನ (ನೇರಳೆ) ಮತ್ತು ರೇಸ್ (ಕೆಂಪು) ವಿಭಿನ್ನ ಬಣ್ಣಗಳೊಂದಿಗೆ ಬರುತ್ತವೆ.
ದೊಡ್ಡ ಟ್ರಿಪಲ್ ಡಿಸ್ಪ್ಲೇ ಸೆಟಪ್ ಅನ್ನು ಮಹೀಂದ್ರಾದ ಅಡ್ರಿನೊಎಕ್ಸ್ ಆಪರೇಟಿಂಗ್ ಸಿಸ್ಟಮ್‌ನಿಂದ ನಡೆಸಲಾಗುತ್ತಿದೆ. ಇವುಗಳನ್ನು MAIA ಸಹಾಯದಿಂದ ನಡೆಸಲಾಗುತ್ತದೆ, ಸಂಸ್ಥೆಯ ಆಂತರಿಕ ಆಟೋಮೋಟಿವ್ AI ಇದು ಬಹಳಷ್ಟು ಸಂಪರ್ಕಿತ ಕಾರ್ ಟೆಕ್‌ಗೆ ಸಹಾಯ ಮಾಡುತ್ತದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 5ಜಿ ಸಂಪರ್ಕವಿದೆ.
XEV 9e 59kWh ಮತ್ತು 79kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಎರಡೂ ಪ್ಯಾಕ್‌ಗಳು BYD ಯ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿವೆ. ದೊಡ್ಡ 79kWh ಬ್ಯಾಟರಿಯು 656 ಕಿ.ಮೀ ರೇಂಜ್ ಹೊಂದಿದ್ದರೇ, ಚಿಕ್ಕ 59kWh ಪ್ಯಾಕ್ 542 ಕಿ.ಮೀ ರೇಂಜ್ ನೀಡುತ್ತದೆ (MIDC) ಎಂದು ಕಂಪನಿ ಹೇಳಿದೆ.

ವೇಗದ DC ಚಾರ್ಜರ್ ಮೂಲಕ ಎರಡೂ ಬ್ಯಾಟರಿ ಪ್ಯಾಕ್‌ಗಳು ಕೇವಲ 20 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು. 79kWh ಪ್ಯಾಕ್ 175kW ನ DC ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ, ಹಾಗೆಯೇ 59kWh ಪ್ಯಾಕ್ 140kW ವೇಗದ DC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಎರಡೂ ಪ್ಯಾಕ್‌ಗಳು 8.7kW ಮತ್ತು 11kW ಹೋಮ್ AC ಚಾರ್ಜರ್‌ಗಳೊಂದಿಗೆ ಹೊಂದಿಕೊಳ್ಳುತ್ತವೆ.


Click it and Unblock the Notifications








