ಕಡಿಮೆ ಬೆಲೆಗೆ ಮಹೀಂದ್ರಾ ಕಾರಿನಲ್ಲಿ ಅತ್ಯಾಧುನಿಕ ಫೀಚರ್‌ಗಳು: ಬಿಡುಗಡೆಗೂ ಮುನ್ನವೇ ಫಿಧಾ!

ಮಹೀಂದ್ರಾ ಕಂಪನಿಯು ಮಾರ್ಚ್‌ 29, 2024 ರಂದು ತನ್ನ ಹೊಸ ಕಾರೊಂದನ್ನು ಬಿಡುಗಡೆ ಮಾಡಲಿದೆ. ಮಹೀಂದ್ರಾ XUV 3XO ಕಾರನ್ನು ಕಂಪನಿ ಬಿಡುಗಡೆ ಮಾಡಿದ್ದು ಈಗಾಗಲೇ ಈ ಕುರಿತಾದ ಹಲವಾರು ಟೀಸರ್‌ಗಳನ್ನು ಸ್ವತಃ ಕಂಪನಿಯೇ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಯಾವೆಲ್ಲಾ ಫೀಚರ್‌ಗಳು ಇರಲಿದೆ ಎಂದು ನೋಡೋಣ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ XUV 300 ಕಾರಿನ ಅಪ್‌ಡೇಟೆಡ್‌ ವರ್ಷನ್‌ ಆಗಿರುವ ಈ ಕಾರು ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಕಾರಿನ ಕುರಿತಾದ ಹಲವಾರು ಮಾಹಿತಿಗಳು ಈಗಾಗಲೇ ಹೊರಬಿದ್ದಿವೆ. ಈ ಕಾರಿನಲ್ಲಿ ಲಕ್ಷುರಿ ಫೀಚರ್‌ಗಳು ಇರಲಿದೆ ಎಂಬ ಮಾತುಗಳು ಓಡಾಡುತ್ತಿದ್ದು, ಕಾರು ಕೊಳ್ಳುವವರು ಇದರ ಲಾಂಚ್‌ಗಾಗಿ ಎದುರು ನೋಡುತ್ತಿದ್ದಾರೆ.

Mahindra XUV 3X0 Expected Top Features Leaked Ahead Of Launch

ಹೊಸ ಇನ್ಫೋಟೈನ್‌ಮೆಂಟ್‌ ಸಿಸ್ಟಂ: 2024, XUV300 ದೊಡ್ಡದಾದ ಮತ್ತು ಹೊಸ 10.2-ಇಂಚಿನ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸಿಗಲಿದೆ. ಮಹೀಂದ್ರಾದಿಂದ ಹೆಚ್ಚು ಸುಧಾರಿತ AdrenoX UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಇನ್ಫೋಟೈನ್‌ಮೆಂಟ್ ಸಿಸ್ಟಂ ಸಂಪೂರ್ಣ ಹೆಚ್ಚಿನ ಮಾಹಿತಿ ಮತ್ತು ವೈಶಿಷ್ಟ್ಯಗಳನ್ನು ಹೊಂದುವ ಸಾಧ್ಯತೆ ಇದ್ದು, ವಾಯ್ಸ್‌ ಕಮಾಂಡ್‌ ಮೂಲಕ ಹೆಚ್ಚು ಸುಧಾರಿತ ಸಂಪರ್ಕಿತ ತಂತ್ರಜ್ಞಾನಕ್ಕೆ ಸಿಗಲಿದೆ.

ಡಿಜಿಟಲ್‌ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌: ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಘಟಕದ ಹೊರತಾಗಿ, ಹೊಸ XUV 3XO ಹಳೆಯ ಮಾದರಿಯಲ್ಲಿ ಇದ್ದ ಭಾಗ ಡಿಜಿಟಲ್ ಮತ್ತು ಅನಲಾಗ್ ಕನ್ಸೋಲ್ ಬದಾಲಾಗಿ, ಹೊಸ 10.2-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್‌ ಕ್ಲಸ್ಟರ್ ಸಿಗಲಿದೆ ಎಂದು ತಿಳಿದು ಬಂದಿದೆ.

Mahindra XUV 3X0 Expected Top Features Leaked Ahead Of Launch

ಸಂಪೂರ್ಣ ಎಲ್‌ಇಡಿ ಲೈಟಿಂಗ್‌: ಕಾರಿನ ಅಂದವನ್ನು ಹೆಚ್ಚಿಸುವಲ್ಲಿ ಲೈಟಿಂಗ್‌ನ ಪಾತ್ರ ಅಪಾರ. ಮಹೀಂದ್ರಾ ನವೀಕರಿಸಿದ XUV300 ನಲ್ಲಿ ಹೊಸ ಡ್ಯುಯಲ್-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಇಂಟಿಗ್ರೇಟೆಡ್ ಸಿ-ಆಕಾರದ DRL ಗಳು ಸಿಗಲಿದೆ. ರಿಪ್ರೊಫೈಲ್ಡ್ ಫ್ರಂಟ್ ಬಂಪರ್ ಹೊಸ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ. ಹಿಂಭಾಗದಲ್ಲಿ, ಹೊಸ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ರಿಪ್ರೊಫೈಲ್ಡ್ ಟೈಲ್‌ಗೇಟ್‌ನಾದ್ಯಂತ ಪಡೆಯುತ್ತದೆ, ಇದು ಎರಡು C-ಆಕಾರದ ಎಲ್‌ಇಡಿ ಡಿಆರ್‌ಎಲ್‌ ಗಳನ್ನು ಸೇರುತ್ತದೆ.

ಈ ಕಾರಿನ ಇಂಟೀರಿಯರ್‌ಗಳನ್ನು ನೊಡುವುದಾದರೆ, ಈ ಕಾರು ಪಕ್ಕಾ ಪ್ರೀಮಿಯಂ ಫೀಲ್‌ ಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಗಮನಿಸಿದರೆ ಇದೇ ವರ್ಷ ಲಾಂಚ್‌ ಆದ XUV400 ಎಲೆಕ್ಟ್ರಿಕ್‌ ಕಾರಿನ ರೀತಿಯಲ್ಲಿಯೇ ಹೋಲುತ್ತಿದೆ. ಕಾರಿನ ಡ್ಯಾಶ್‌ ಬೋರ್ಡ್‌ನ ಮಧ್ಯದಲ್ಲಿ ದೊಡ್ಡದಾದ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌ ಅನ್ನು ಕಾಣಬಹುದು. ಈ ಕಾರಿನಲ್ಲಿ ಡ್ಯುಯಲ್‌ ಝೋನ್‌ ಕ್ಲೈಮೇಟ್ ಕಂಟ್ರೋಲ್‌ ಅನ್ನು ಸಹ ಪಡೆಯುತ್ತಿದೆ.

Mahindra XUV 3X0 Expected Top Features Leaked Ahead Of Launch

ಪಾನರಾಮಿಕ್‌ ಸನ್‌ರೂಫ್‌: ಈ ಕಾರಿನಲ್ಲಿ ಸೆಗ್ಮೆಂಟ್‌ನಲ್ಲೇ ಅತೀ ದೊಡ್ಡದಾದ ಸನ್‌ರೂಫ್‌ ಸಿಗಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕಂಪನಿ ಈ ಕುರಿತಾದ ಟೀಸರ್‌ ಸಹ ಹೊರಬಿಟ್ಟಿದ್ದು, ದೊಡ್ಡದಾದ ಪಾನರೋಮಿಕ್‌ ಸನ್‌ರೂಫ್‌ ಇದಾಗಿದೆ. ಇದರಿಂದಾಗಿ ಕಾರಿನ ಒಳಭಾಗದಿಂದ ಪ್ರಯಾಣ ಮಾಡುವ ಸಂಧರ್ಭದಲ್ಲಿ ಒಳ್ಳೆಯ ವ್ಯೂವ್‌ ಸಿಗಲಿದ್ದು, ಪ್ರಯಾಣ ಮತ್ತಷ್ಟು ಆಹ್ಲಾದಕರವಾಗಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 27, 2024, 17:00 [IST]
English summary
Mahindra xuv 3x0 expected top features leaked ahead of launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+