ಮಹೀಂದ್ರಾದ ಹೊಸ ಕಾರಿಗೆ ಸಖತ್ ಡಿಮ್ಯಾಂಡ್, ಮನೆಗೆ ತರಲು ಇಷ್ಟು ತಿಂಗಳು ಕಾಯಬೇಕು, 7 ಲಕ್ಷ ಬೆಲೆ.. 20 Km ಮೈಲೇಜ್!

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಮಹೀಂದ್ರಾ (Mahindra) ಮನೆ ಮಾತಾಗಿದೆ. ಏಪ್ರಿಲ್‌ನಲ್ಲಿ ನೂತನ ಎಕ್ಸ್‌ಯುವಿ 3ಎಕ್ಸ್ಒ (XUV 3XO) ಕಾರನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಮೇ 15ರಂದು ಬುಕ್ಕಿಂಗ್ ಶುರು ಮಾಡಿದ 1 ಗಂಟೆಯೊಳಗೆ ಈ ಎಸ್‌ಯುವಿಯನ್ನು ಸರಿ ಸುಮಾರು 50,000 ಗ್ರಾಹಕರು ಆರ್ಡರ್ ಮಾಡಿದ್ದರು. ಮೇ 26ರಿಂದ ಹೊಸ ಕಾರಿನ ವಿತರಣೆ ಆರಂಭಗೊಂಡಿತ್ತು. ಕಂಪನಿಯು ಒಂದೇ ದಿನ 1,500 ಯುನಿಟ್ ಎಸ್‌ಯುವಿಗಳನ್ನು ಖರೀದಿದಾರರಿಗೆ ತಲುಪಿಸಿತ್ತು. ವಿಶೇಷವಾಗಿ ಎಕ್ಸ್‌ಯುವಿ 3ಎಕ್ಸ್ಒ ಕಾರು ಪಡೆಯುತ್ತಿರುವ ಬುಕ್ಕಿಂಗ್‌ನಲ್ಲಿ ಶೇಕಡ 70% ಪಾಲನ್ನು ಪೆಟ್ರೋಲ್ ರೂಪಾಂತರ (ವೇರಿಯೆಂಟ್)ಗಳೇ ಹೊಂದಿವೆ.

ಮಹೀಂದ್ರಾ ಕಂಪನಿಯು ಡೆಲಿವರಿ ಪ್ರಾರಂಭಿಸಿದ ಮೊದಲ ತಿಂಗಳಲ್ಲಿ (ಮೇ, 2024) 10,000 ಯುನಿಟ್ 'ಎಕ್ಸ್‌ಯುವಿ 3ಎಕ್ಸ್ಒ' ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಹೊಸದೊಂದು ದಾಖಲೆಯನ್ನು ನಿರ್ಮಿಸಿತ್ತು. ಸದ್ಯ ಈ ಎಸ್‌ಯುವಿಯು ಜೂನ್ ತಿಂಗಳಲ್ಲಿ ಹೊಂದಿರುವ ಕಾಯುವಿಕೆ ಅವಧಿ ಕುರಿತ ವಿವರಗಳು ಬಹಿರಂಗಗೊಂಡಿವೆ. ನೂತನ ಎಕ್ಸ್‌ಯುವಿ 3ಎಕ್ಸ್ಒ ಕಾರು ವಿತರಣೆಯಾಗಲು 4 ರಿಂದ 6 ತಿಂಗಳು ಬೇಕಾಗುತ್ತದೆ ಎಂದು ತಿಳಿದುಬಂದಿದೆ.

Mahindra XUV 3XO Car June 2024 Waiting Period Revealed Rs 7 Lakh Price 20 Km Mileage

ದೇಶೀಯವಾಗಿ ಖರೀದಿಗೆ ದೊರೆಯುವ ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಕಾರು ರೂ.7.49 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಂಎಕ್ಸ್1, ಎಂಎಕ್ಸ್2, ಎಂಎಕ್ಸ್3, ಎಎಕ್ಸ್5 ಹಾಗೂ ಎಎಕ್ಸ್7 ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. ಆಕರ್ಷಕ ವಿನ್ಯಾಸವನ್ನು ಪಡೆದಿರುವ ಈ ಕಾರು, ಎಲ್ಇಡಿ ಹೆಡ್‌ಲೈಟ್‌ಗಳು, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್‌ಗಳು (ಡಿಆರ್‌ಎಲ್ಎಸ್), ನವೀನ ಬಂಪರ್ ಮತ್ತು ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ನೂತನ 'ಎಕ್ಸ್‌ಯುವಿ 3ಎಕ್ಸ್ಒ' ಎಸ್‌ಯುವಿಯು ವಿವಿಧ ಪವರ್‌ಟ್ರೇನ್‌ನೊಂದಿಗೆ ಸಿಗುತ್ತದೆ. ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 200 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ 130 ಪಿಎಸ್ ಪವರ್ ಹಾಗೂ 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Mahindra XUV 3XO Car June 2024 Waiting Period Revealed Rs 7 Lakh Price 20 Km Mileage

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 117 ಪಿಎಸ್ ಶಕ್ತಿ (ಪವರ್) ಮತ್ತು 300 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪೆಟ್ರೋಲ್ ಆವೃತ್ತಿಗಳು 17.96 - 20.1 ಕೆಎಂಪಿಎಲ್, ಡೀಸೆಲ್ ಮಾದರಿಗಳು 20.6 - 21.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತವೆ.

ಈ ಕಾರು ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್ ಸೇರಿದಂತೆ ಹಲವು ಬಣ್ಣಗಳೊಂದಿಗೆ ದೊರೆಯಲಿದ್ದು, ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟವನ್ನು ನಡೆಸಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇಗಳು, ಕ್ರೂಸ್ ಕಂಟ್ರೋಲ್, ಡುಯಲ್-ಝೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Mahindra XUV 3XO Car June 2024 Waiting Period Revealed Rs 7 Lakh Price 20 Km Mileage

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿಯು ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. 6 ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ನಿಮ್ಮ ಗಮನಕ್ಕೆ.. ಈ ಕಾರಿನ ಕಾಯುವಿಕೆ ಅವಧಿಯು ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 24, 2024, 10:14 [IST]
English summary
Mahindra xuv 3xo car june 2024 waiting period revealed rs 7 lakh price 20 km mileage
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+