8 ಲಕ್ಷಕ್ಕೆ ಪ್ರೀಮಿಯಂ ಕಾರು: ಸನ್‌ರೂಫ್, 6 ಏರ್‌ಬ್ಯಾಗ್‌: ಆಗಲೇ 10 ಸಾವಿರ ಕಾರುಗಳು ಮಾರಾಟ!

ಭಾರತೀಯ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟಿನಲ್ಲಿ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸಾನೆಟ್ ಕಾರುಗಳು ಪ್ರಾಬಲ್ಯ ಹೊಂದಿವೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ಕಾರೊಂದು ಈ ಎಲ್ಲಾ ಕಾರುಗಳಿಗೆ ನಡುಕ ಹುಟ್ಟಿಸಿದೆ. ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿದ ಎಕ್ಸ್‌ಯುವಿ 3 ಎಕ್ಸ್‌ಒ (XUV 3XO) ಅನ್ನು ಏಪ್ರಿಲ್ 29 ರಂದು ಬಿಡುಗಡೆ ಮಾಡಲಾಯಿತು. ಈ ಹೊಸ ಕಾರು ತಕ್ಷಣದ ಪರಿಣಾಮವನ್ನು ಬೀರಿದೆ, ಅದರ ಮಾರಾಟವು ಮೊದಲ ತಿಂಗಳಲ್ಲೇ ಉತ್ತುಂಗಕ್ಕೇರಿದೆ. Mahindra XUV 3XO ಮೇ ತಿಂಗಳಲ್ಲಿ ಬರೋಬ್ಬರಿ 10,510 ಯುನಿಟ್ ಕಾರುಗಳು ಮಾರಾಟವಾಗಿವೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಮಾರಾಟ ಅಂಕಿ ಅಂಶಗಳನ್ನು ನೋಡಿದ್ರೆ, ಈ ಕಾರು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುವುದು ಪಕ್ಕಾ ಎನ್ನಿಸುತ್ತಿದೆ. ಇದರ ಬುಕ್ಕಿಂಗ್‌ಗಳನ್ನು ನೋಡಿದರೆ, ಇದಕ್ಕೆ ಉಜ್ವಲ ಭವಿಷ್ಯವಿರುವಂತಿದೆ. ಹೊಸ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಬೇಸ್‌ ವೇರಿಯೆಂಟ್ ರೂ.7.49 ಲಕ್ಷದಿಂದ ಪ್ರಾರಂಭವಾಗಿ ಟಾಪ್‌ ಎಂಡ್‌ ವೇರಿಯಿಂಟ್‌ಗೆ ರೂ.15.49 ಲಕ್ಷಗಳಾಗಿದೆ.

mahindra-xuv-3xo-may-month-sales-report

ಹಿಂದುಳಿದ ವೆನ್ಯೂ & ಸಾನೆಟ್: Mahindra XUV 3XO ಮೇ ತಿಂಗಳಲ್ಲಿ ಬರೋಬ್ಬರಿ 10,510 ಯುನಿಟ್ ಕಾರುಗಳು ಮಾರಾಟವಾಗಿವೆ. ಇದೇ ತಿಂಗಳಲ್ಲಿ 9,327 ಯುನಿಟ್ ಹ್ಯುಂಡೈ ವೆನ್ಯೂ ಕಾರುಗಳು ಮಾರಾಟವಾಗಿವೆ. ಮತ್ತೊಂದೆಡೆ 7,433 ಯುನಿಟ್ ಕಿಯಾ ಸೊನೆಟ್ ಕಾರುಗಳು ಮಾರಾಟವಾಗಿದ್ದು, ಬಿಡುಗಡೆಯಾದ ಮೊದಲ ತಿಂಗಳಲ್ಲೇ Mahindra XUV 3XO ಹೊಸ ದಾಖಲೆ ನಿರ್ಮಿಸಿದೆ.

ಟಾಪ್‌ನಲ್ಲಿವೆ ಬ್ರೆಝಾ & ನೆಕ್ಸಾನ್: ಮೇ ತಿಂಗಳಲ್ಲಿ ಮಾರುತಿ ಸುಜುಕಿ ಬ್ರೆಝಾ 14,186 ಯುನಿಟ್‌ಗಳ ಮಾರಾಟದೊಂದಿಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಟಾಟಾ ನೆಕ್ಸಾನ್ 11,457 ಯುನಿಟ್‌ಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಈ ಎರಡೂ ಕಾರುಗಳಿಗೂ ಗಟ್ಟಿ ಪೈಪೋಟಿ ನೀಡುವ ಸಾಧ್ಯತೆಯೂ ಇದೆ.

mahindra-xuv-3xo-may-month-sales-report

XUV 3XO ವಿಶೇಷತೆಗಳು: ಮಹೀಂದ್ರಾ XUV 3XO ಎಸ್‍ಯುವಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಯೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನವೀಕರಿಸಿದ 7-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಆಂಬಿಯೆಂಟ್ ಸೌಂಡ್ ಮೋಡ್‌ಗಳು, ಹಿಂದಿನ ಎಸಿ ವೆಂಟ್‌ಗಳು ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇನ್ನಷ್ಟು ಫಿಚರ್ಸ್ ಗಳನ್ನು ಹೊಂದಿವೆ.

ಮಹೀಂದ್ರಾ XUV 3XO ಎಸ್‍ಯುವಿಯ ಸುರಕ್ಷತ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚುವರಿಯಾಗಿ, ಹೊಸ ಮಹೀಂದ್ರಾ ಸಬ್‌ಕಾಂಪ್ಯಾ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ರೇಕ್ ಡಿಸ್ಕ್ ವೈಪಿಂಗ್ ಹೊಂದಿದೆ.

mahindra-xuv-3xo-may-month-sales-report

ಎಂಜಿನ್: ಈ ಮಹೀಂದ್ರಾ XUV 3XO ಎಸ್‍ಯುವಿ 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದರೊಂದಿಗೆ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.ಈ ಎಸ್‍ಯುವಿಯು 18.89 ಕಿ.ಮೀ ಮತ್ತು 20.1 ಕಿ.ಮೀ ಮೈಲೇಜ್ ನೀಡುತ್ತದೆ.

Article Published On: Friday, June 7, 2024, 12:14 [IST]
English summary
Mahindra xuv 3xo may month sales report
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+