ತಿಂಗಳಿಗೆ 9,000 ಕಾರುಗಳ ಮಾರಾಟ... ಬಹುಬೇಡಿಕೆಯ ಮಹೀಂದ್ರಾ ಅಗ್ಗದ ಕಾರಿನ ಬೆಲೆ ಏರಿಕೆ

ಭಾರತದಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ ಮಹೀಂದ್ರಾ XUV 3X0 ಕಾರು ಈಗ ಬೆಲೆ ಏರಿಕೆ ಪಡೆದುಕೊಂಡಿದೆ. ಈ ಕಾರು ಸಬ್‌-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಫೀಚರ್ಸ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ನೀಡುವ ಕಾರಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಇದೀಗ ಹೊಸ ಮಹೀಂದ್ರಾ XUV 3X0 ಕಾರು 30,000 ರೂ.ಗಳವರೆಗೆ ಬೆಲೆ ಏರಿಕೆ ಪಡೆದುಕೊಂಡಿದೆ. ಹಳೆಯ ಬೆಲೆ ಹಾಗೂ ಹೊಸ ಬೆಲೆಗಳ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಮಹೀಂದ್ರಾ XUV 3XO ನ 9,000 ಯುನಿಟ್‌ ಕಾರುಗಳನ್ನು ಮಹೀಂದ್ರಾ ಕಂಪನಿ ಮಾರಾಟ ಮಾಡಿದೆ. ಇದು ಕಂಪನಿಯ SUV ಮಾರಾಟದ ಶೇ15 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ. ಈ ಬೇಡಿಕೆಯು ಈಗ ಕಾರಿನ ಬೆಲೆ ಏರಿಕೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ.

mahindra-xuv-3xo-price-hike-details

ಹೊಸ ಬೆಲೆಗಳು: ಮಹೀಂದ್ರಾ ಕಂಪನಿಯು ತನ್ನ ಎಕ್ಸ್‌ಯುವಿ 3ಎಕ್ಸ್‌ಒ ಬೆಲೆಯನ್ನು 30,000 ರೂ.ಗಳವರೆಗೆ ಹೆಚ್ಚಿಸಿದೆ. ಈ ಮೂಲಕ ಬೇಸ್‌ ವೇರಿಯೆಂಟ್ ಬೆಲೆಯು 7.49 (ಎಕ್ಸ್‌ ಶೋರೂಂ)ಲಕ್ಷದಿಂದ 7.79 ಲಕ್ಷ ರೂ.ಗಳಿಗೆ ಏರಿಕೆಯಾಗಿದ್ದು, ಟಾಪ್ ಎಂಟ್ ವೇರಿಯೆಂಟ್ ಬೆಲೆಯು 14.99 ಲಕ್ಷ (ಎಕ್ಸ್‌ ಶೋರೂಂ) ರೂ.ಗೆ ಏರಿಕೆಯಾಗಿದೆ.

ಎಂಟ್ರಿ ಲೆವೆಲ್ MX1 ವೇರಿಯೆಂಟ್ ಬೆಲೆಯನ್ನು 30,000 ರೂ. ಹಾಗೂ MX2 ಪ್ರೊ ವೇರಿಯೆಂಟ್‌ಗಳ ಬೆಲೆಯನ್ನು 25,000 ರೂ.ಗಳಷ್ಟು ಹೆಚ್ಚಿಸಲಾಗಿದೆ. ಪೆಟ್ರೋಲ್ ಪವರ್ ಟ್ರೇನ್ ಆಯ್ಕೆಗಳೊಂದಿಗೆ MX3 ಟ್ರಿಮ್‌ಗಳು ಈಗ 25,000 ರೂ.ಗಳಷ್ಟು ದುಬಾರಿಯಾಗಿದ್ದರೆ, MX3 ಡೀಸೆಲ್ ಬೆಲೆಗಳು 10,000 ರೂ.ಗಳಷ್ಟು ಹೆಚ್ಚಾಗಿದೆ. MX3 ಪ್ರೊ ಬೆಲೆಗಳು ಬದಲಾಗದೆ ಉಳಿದಿವೆ.

Variant New Price (Lakh) Old Price (Lakh) Difference
MX1 111hp petrol MT ₹7.79 ₹7.49 ₹30,000
MX2 117hp diesel MT ₹9.99 ₹9.99 -
MX2 Pro 111hp petrol MT ₹9.24 ₹8.99 ₹25,000
MX2 Pro 111hp petrol AT ₹10.24 ₹9.99 ₹25,000
MX2 Pro 117hp diesel MT ₹10.49 ₹10.39 ₹10,000
MX3 111hp petrol MT ₹9.74 ₹9.49 ₹25,000
MX3 111hp petrol AT ₹11.24 ₹10.99 ₹25,000
MX3 117hp diesel MT ₹10.99 ₹10.89 ₹10,000
MX3 117hp diesel AT ₹11.79 ₹11.69 ₹10,000
MX3 Pro 111hp petrol MT ₹9.99 ₹9.99 -
MX3 Pro 111hp petrol AT ₹11.49 ₹11.49 -
MX3 Pro 117hp diesel MT ₹11.39 ₹11.39 -
AX5 111hp petrol MT ₹10.99 ₹10.69 ₹30,000
AX5 111hp petrol AT ₹12.49 ₹12.19 ₹30,000
AX5 117hp diesel MT ₹12.19 ₹12.09 ₹10,000
AX5 117hp diesel AT ₹12.99 ₹12.89 ₹10,000
AX5 L 131hp petrol MT ₹12.24 ₹11.99 ₹25,000
AX5 L 131hp petrol AT ₹13.74 ₹13.49 ₹25,000
AX7 131hp petrol MT ₹12.49 ₹12.49 -
AX7 131hp petrol AT ₹13.99 ₹13.99 -
AX7 117hp diesel MT ₹13.69 ₹13.69 -
AX7 117hp diesel AT ₹14.49 ₹14.49 -
AX7 L 131hp petrol MT ₹13.99 ₹ 13.99 -
AX7 L 131hp petrol AT ₹15.49 ₹ 15.49 -
AX7 L 117hp diesel MT ₹14.99 ₹14.99 -

AX5 ಪೆಟ್ರೋಲ್ ವೇರಿಯೆಂಟ್‌ಗಳು 30,000 ರೂ.ಗಳ ಬೆಲೆ ಏರಿಕೆಯನ್ನು ಪಡೆದಿದ್ದರೆ, ಡೀಸೆಲ್ ಆವೃತ್ತಿಯ ಬೆಲೆ ಈಗ 10,000 ರೂ. ಏರಿಕೆ ಕಂಡಿದೆ. ಇನ್ನು AX5L ವೆರಿಯೆಂಟ್ ಈಗ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳಿಗೆ 25,000 ರೂ. ಹಾಗೂ ಟಾಪ್ ಎಂಡ್ AX7 ಮತ್ತು AX7L ಟ್ರಿಮ್‌ಗಳ ಬೆಲೆಗಳು ಮೊದಲಿನಂತೆಯೇ ಇವೆ.

XUV 3XO ವಿಶೇಷತೆಗಳು: ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಯೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನವೀಕರಿಸಿದ 7-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಆಂಬಿಯೆಂಟ್ ಸೌಂಡ್ ಮೋಡ್‌ಗಳು, ಹಿಂದಿನ ಎಸಿ ವೆಂಟ್‌ಗಳು ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇನ್ನಷ್ಟು ಫಿಚರ್ಸ್ ಗಳನ್ನು ಹೊಂದಿವೆ.

mahindra-xuv-3xo-price-hike-details

ಮಹೀಂದ್ರಾ XUV 3XO ಎಸ್‍ಯುವಿಯ ಸುರಕ್ಷತ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚುವರಿಯಾಗಿ, ಹೊಸ ಮಹೀಂದ್ರಾ ಸಬ್‌ಕಾಂಪ್ಯಾ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ರೇಕ್ ಡಿಸ್ಕ್ ವೈಪಿಂಗ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 10, 2024, 17:45 [IST]
English summary
Mahindra xuv 3xo price hike details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+