XUV 3XO ಕಾರಿನ ವಿತರಣೆ ಆರಂಭಿಸಿದ ಮಹೀಂದ್ರಾ: ಇನ್ನು ಮುಂದೆ ರಸ್ತೆ ತುಂಬಾ ಇದರದ್ದೇ ಹವಾ!

ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿಯು ಭಾರತೀಯ ಮಾರುಕಟ್ಟೆಗೆ XUV 3XO ಎಂಬ ಕಾರನ್ನು ಲಾಂಚ್ ಮಾಡಿ ಭಾರೀ ಸದ್ದು ಮಾಡಿತ್ತು. ಈ ಹಿಂದೆ ಇದ್ದ ಮಹೀಂದ್ರಾ XUV 700 ಕಾರಿನ ಅಪ್‌ಡೇಟೆಡ್‌ ಆವೃತ್ತಿ ಇದಾಗಿದ್ದು, ಹಲವಾರು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದ್ದು ಬಹುಬೇಗ ಎಲ್ಲರ ಗಮನವನ್ನು ಸೆಳೆದಿತ್ತು.

ಎಲ್ಲರು ಕಾದು ಕುಳಿತಿದ್ದಂತೆ, ಇದೀಗ ಮಹೀಂದ್ರಾ ಕಂಪನಿ XUV 3XO ಕಾರಿನ ಡೆಲಿವರಿಯನ್ನು ಆರಂಭಿಸಿದೆ. ಕಂಪನಿಯು ಆಯ್ದ ಕೆಲವೊಂದು ಆವೃತ್ತಿಗಳ ಡೆಲಿವರಿಯನ್ನು ಆರಂಭಿಸಿದ್ದು, ಈ ಕಾರನ್ನು ಬುಕ್ ಮಾಡಿದವರು ಮನೆಗೆ ತರಬಹುದಾಗಿದೆ. ಮಾಹಿತಿಗಳ ಪ್ರಕಾರ ಮಹೀಂದ್ರಾ ಕಂಪನಿಯು XUV 3XO ಕಾರಿನ ವೇರಿಯಂಟ್‌ಗಳಾದ M1, MX2 and MX2 Pro ಡೆಲಿವರಿಯನ್ನು ಆರಂಭಿಸಿದೆ.

Mahindra XUV 3XO Selected Variant Delivery Begins In India

ಇನ್ನು ಈ ಕಾರಿನ ಟಾಪ್‌ ಎಂಡ್‌ ಆವೃತ್ತಿಗಳಾದ AX7 ಮತ್ತು AX7 L ನ ಡೆಲವರಿಯನ್ನು ಕಂಪನಿಯು ಮುಂದಿನ ತಿಂಗಳಿಂದ ಆರಂಭಿಸಲಿದೆ. ಮಹೀಂದ್ರಾ XUV 3XO (Mahindra XUV 3XO) ಕಾರಿನ ಮತ್ತೊಂದು ವಿಶೇಷತೆಯೆಂದರೆ ಈ ಕಾರು ಸುಮಾರು ೨೫ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಇದು ಮಾತ್ರವಲ್ಲದೇ ಈ ಕಾರಿನಲ್ಲಿ ಆರು ಎಂಜಿನ್‌ ಆಯ್ಕೆಗಳನ್ನೂ ಕೊಟ್ಟಿದ್ದಾರೆ. ಗ್ರಾಹಕರು ತಮಗೆ ಬೇಕಾದ ಆಯ್ಕೆಗಳನ್ನು ಬುಕ್‌ ಮಾಡಿ ಪಡೆದುಕೊಳ್ಳಬಹುದಾಗಿದೆ.

ಮಹೀಂದ್ರಾ XUV 3XO ಕಾರಿನ ಕುರಿತಾಗಿ ನೋಡುವುದಾದರೆ, ಕಂಪನಿ ಪ್ರಕಾರ, ಮಹೀಂದ್ರಾ XUV 3XO ಮೊದಲ 10 ನಿಮಿಷಗಳಲ್ಲಿ 27,000 ಕ್ಕೂ ಹೆಚ್ಚು ಬುಕಿಂಗ್‌ಗಳು ದಾಖಲಾಗಿವೆ. ಇದು ಮಹೀಂದ್ರಾದ ಹೊಸ SUV ಗೆ ನಂಬಲಾಗದ ಉತ್ಸಾಹವನ್ನು ಪ್ರದರ್ಶಿಸುತ್ತದೆ. ಈ ಮೈಲಿಗಲ್ಲು XUV 3XO ನ ಅಸಾಧಾರಣ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಸುರಕ್ಷತೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Mahindra XUV 3XO Selected Variant Delivery Begins In India

ಮಹೀಂದ್ರಾ XUV 3XO (Mahindra XUV 3XO) ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷವಾಗಿದೆ. ಈ ಎಸ್‍ಯುವಿ MX, AX, AX5 ಮತ್ತು AX7 ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಮಹೀಂದ್ರಾ XUV 3XO ಎಸ್‍ಯುವಿ 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಪವರ್ ಮತ್ತು 200 Nm ಟಾರ್ಕ್ ಉತ್ಪಾದಿಸುತ್ತದೆ.

ಇದರೊಂದಿಗೆ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಸ್‍ಯುವಿಯು 18.89 ಕಿ.ಮೀ ಮತ್ತು 20.1 ಕಿ.ಮೀ ಮೈಲೇಜ್ ನೀಡುತ್ತದೆ.

ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚುವರಿಯಾಗಿ, ಹೊಸ ಮಹೀಂದ್ರಾ ಸಬ್‌ಕಾಂಪ್ಯಾ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ರೇಕ್ ಡಿಸ್ಕ್, ರೋಲ್ ಓವರ್ ಮಿಟಿಗೇಶನ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 23, 2024, 14:19 [IST]
English summary
Mahindra xuv 3xo selected variant delivery begins in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+