ಆಫ್ರಿಕಾದಲ್ಲಿ ಅಗ್ಗದ ಮಹೀಂದ್ರಾ ಕಾರಿಗಾಗಿ ಮುಗಿಬಿದ್ದ ಜನ: ಕೊನೆಗೂ ಬಿಡುಗಡೆಯಾಗಿ ಧೂಳೆಬ್ಬಿಸಿದೆ!

ಭಾರತದಲ್ಲಿ ನಿರ್ಮಾಣವಾದ ಕಾರುಗಳಿಗೆ ವಿಶ್ವ ದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಮಹೀಂದ್ರಾ ಹಾಗೂ ಟಾಟಾ ಕಾರುಗಳಿಗೆ ದ.ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಭರ್ಜರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕೈಗೆಟುಕುವ ಬೆಲೆ, ಉತ್ತಮ ಮೈಲೇಜ್, ಅತ್ಯುತ್ತಮ ಗುಣಮಟ್ಟದ ಕಾರುಗಳನ್ನು ನೀಡುತ್ತಿರುವುದು ಅಲ್ಲಿನ ಗ್ರಾಹಕರಲ್ಲಿ ಭಾರತೀಯ ಉತ್ಪನ್ನಗಳಿಗೆ ಡಿಮ್ಯಾಂಡ್ ಹೆಚ್ಚಿಸಿದೆ. ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ್ದ ಹೊಸ ಮಹೀಂದ್ರಾ XUV 3X0 ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಇತ್ತೀಚಗೆ ಆಫ್ರಿಕಾದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ.

ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮಹೀಂದ್ರಾ ಸ್ಕಾರ್ಪಿಯೋ - ಎನ್ ಮತ್ತು XUV 700 ಮಾರಾಟದಲ್ಲಿದ್ದು, ಇವುಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿರುವ ಮಹೀಂದ್ರಾದ ಮೂರನೇ ಎಸ್‌ಯುವಿಯಾಗಿದೆ. ಮಹೀಂದ್ರಾ XUV 3X0 ದಕ್ಷಿಣ ಆಫ್ರಿಕಾಗೆ ಮಹೀಂದ್ರಾದಿಂದ ನೀಡಲಾದ ಅತ್ಯಂತ ಚಿಕ್ಕ ಎಸ್‌ಯುವಿಯಾಗಿದೆ.

mahindra-xuv-3xo-south-africa-model-price-features-details

ಭಾರತದಲ್ಲಿ ಮಹೀಂದ್ರಾ ತನ್ನ ಹೊಸ XUV 3X0 ಎಸ್‌ಯುವಿಯನ್ನು ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಿ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಭಾರತದ ನಂತರ ಮಹೀಂದ್ರಾ XUV 3X0 ಸಬ್ ಕಾಂಪ್ಯಾಕ್ಟ್ ಮಾದರಿಯನ್ನು ಪಡೆದ ಮೊದಲ ಜಾಗತಿಕ ಮಾರುಕಟ್ಟೆಯಾಗಿ ಈಗ ದಕ್ಷಿಣ ಆಫ್ರಿಕಾ ಗುರ್ತಿಸಿಕೊಂಡಿದೆ.

ಭಾರತದಲ್ಲಿ ಹೊಸ XUV 3X0 ಎಸ್‌ಯುವಿ (ಬೇಸ್‌ ವೇರಿಯೆಂಟ್) ಆರಂಭಿಕ ಬೆಲೆಯು ರೂ.7.49 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹೊಸ XUV 3X0 ಎಸ್‌ಯುವಿ 12.16 ಲಕ್ಷಕ್ಕೆ (ಭಾರತೀಯ ರೂ.) ಬಿಡುಗಡೆಯಾಗಿದೆ. ಕಾರು ಭಾರತದಿಂದ ರಫ್ತು ಆಗುವುದರಿಂದ ಇಲ್ಲಿನ ಬೆಲೆಗಿಂತ ಆಫ್ರಿಕಾದಲ್ಲಿ ದುಬಾರಿಯಾಗುತ್ತದೆ.

mahindra-xuv-3xo-south-africa-model-price-features-details

ಭಾರತೀಯ ಕಾರಿಗಿಂತ ಹೇಗೆ ಭಿನ್ನವಾಗಿದೆ?: ದಕ್ಷಿಣ ಆಫ್ರಿಕಾದ ಮಹೀಂದ್ರಾ XUV 3X0 ಇಂಡಿಯಾ-ಸ್ಪೆಕ್ ಮಾದರಿಯ ಡ್ಯುಯಲ್-ಟೋನ್ ಥೀಮ್‌ಗಿಂತ ಭಿನ್ನವಾಗಿ ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ. ಎಡಿಎಎಸ್ ಮತ್ತು 360-ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾದ ಮಹೀಂದ್ರಾದ ಹೊಸ XUV 3X0 ಎಸ್‌ಯುವಿಯನ್ನು MX2 ನಿಂದ ಟಾಪ್ ಎಂಡ್ AX7L ವರೆಗೆ ಎಂಟು ರೂಪಾಂತರಗಳಲ್ಲಿ ನೀಡಲಾಗಿದೆ. ಡಿಸೈನ್ ವಿಷಯದಲ್ಲಿ ಭಾರತೀಯ ಕಾರಿನಂತೆಯೇ ಇರುತ್ತದೆ. ಆಫ್ರಿಕಾದಲ್ಲಿ ಇದರ ಟಾಪ್ ಎಂಡ್ ವೇರಿಯೆಂಟ್ ಬೆಲೆಯು 19.31 ಲಕ್ಷ ರೂ. ವರೆಗೆ ಇದೆ.

mahindra-xuv-3xo-south-africa-model-price-features-details

ಎಂಜಿನ್ ವಿಷಯಕ್ಕೆ ಬಂದರೆ ಆಫ್ರಿಕಾಗೆ ರಫ್ತು ಮಾಡಲಾಗುವ ಕಾರು ಕೇವಲ 1.2 ಲೀಟರ್‌ನ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ಪಡೆದಿದೆ. ಈ ಎಂಜಿನ್ 109 ಬಿಹೆಚ್‌ಪಿ ಪವರ್ ಹಾಗೂ 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಭಾರತದಲ್ಲಿ ಇದೇ ಕಾರು 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುವ ಇತರ ಭಾರತೀಯ ಎಸ್‌ಯುವಿಗಳಾದ ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಫ್ರಾಂಕ್ಸ್, ಹ್ಯುಂಡೈ ವೆನ್ಯೂ ಕಾರುಗಳಿಗೆ ಹೊಸ ಮಹೀಂದ್ರಾ XUV 3X0 ಪೈಪೋಟಿ ನೀಡಲಿದೆ. ಭಾರತದಲ್ಲಿ ನೋಡಿಕೊಂಡರೆ XUV 3X0 ಕಾರು ಮಾರುತಿ ಕಿಯಾ ಸೊನೆಟ್, ಬ್ರೆಝಾ, ಟಾಟಾ ನೆಕ್ಸಾನ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

Article Published On: Thursday, October 3, 2024, 20:09 [IST]
English summary
Mahindra xuv 3xo south africa model price features details
Read more on mahindra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+