ಭಾರೀ ಬೇಡಿಕೆ ಪಡೆಯುತ್ತಿದೆ ಮಹೀಂದ್ರಾ ಹೊಸ ಎಸ್‌ಯುವಿ: 7.5 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್!

ಮಹೀಂದ್ರಾ (Mahindra) ಕಂಪನಿ ಬಿಡುಗಡೆ ಮಾಡಿರುವ ತನ್ನ XUV 3XO ಎಸ್‍ಯುವಿ ಭಾರೀ ಜನಪ್ರಿಯತೆ ಗಳಿಸುತ್ತಿದ್ದು, ಉತ್ತಮ ಬುಕಿಂಗ್‌ಗಳೊಂದಿಗೆ ಮುನ್ನುಗ್ಗುತ್ತಿದೆ. ಹೊಸ ಮಹೀಂದ್ರಾ XUV 3XO ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷವಾಗಿದೆ. ಹೊಸ ಮಹೀಂದ್ರಾ XUV 3XO (Mahindra XUV 3XO) ಎಸ್‍ಯುವಿ MX, AX, AX5 ಮತ್ತು AX7 ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಹೊಸ ಎಸ್‌ಯುವಿಯ ವಿನ್ಯಾಸ, ವೈಶೀಷ್ಟ್ಯ, ಎಂಜಿನ್ ಹಾಗೂ ಮೈಲೇಜ್ ಕುರಿತ ಎಲ್ಲಾ ಮಾಹಿತಿಯನ್ನು ಇಲ್ಲಿ ನೋಡೋಣ.

ಸುರಕ್ಷತೆ: ಮೊದಲಿಗೆ ಮಹೀಂದ್ರಾ XUV 3XO ಎಸ್‍ಯುವಿಯ ಸುರಕ್ಷತ ಫೀಚರ್ಸ್ ಬಗ್ಗೆ ಹೇಳಬೇಕು, ಇದರಲ್ಲಿ ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದೆ. 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ರೇಕ್ ಡಿಸ್ಕ್ ಜೊತೆಗೆ ಹೆಚ್ಚುವರಿಯಾಗಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.

mahindra-xuv-3xo-suv-price-mileage-features-details

ಹೊಸ ಮಹೀಂದ್ರಾ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ 350mm ವಾಟರ್ ವೇಡಿಂಗ್ ಡೆಪ್ತ್ ಮತ್ತು 2600mm ಲಾಂಗ್ ವ್ಹೀಲ್ ಬೇಸ್ ಅನ್ನು ಹೊಂದಿದೆ. XUV 3XO 23.7 ಡಿಗ್ರಿಗಳಷ್ಟು ಉತ್ತಮ-ವರ್ಗದ ಫಾರ್ವರ್ಡ್ ಗೋಚರತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ರೋಲ್ ಓವರ್ ಮಿಟಿಗೇಶನ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಹೊಂದಿದೆ.

ವಿನ್ಯಾಸ: ಹೊಸ ಮಹೀಂದ್ರಾ XUV 3XO ಎಸ್‍ಯುವಿಯು ವಿನ್ಯಾಸವು ಮಹೀಂದ್ರಾದ ಮುಂಬರುವ BE ಎಲೆಕ್ಟ್ರಿಕ್ ಎಸ್‍ಯುವಿಯಿಂದ ಹೆಚ್ಚು ಸ್ಫೂರ್ತಿ ಪಡೆದಿದೆ. ಈ ಹೊಸ ಎಸ್‍ಯುವಿಯಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ದೊಡ್ಡ ಸೆಂಟ್ರಲ್ ಏರ್ ಇನ್‌ಟೆಕ್ ನೊಂದಿಗೆ ಪರಿಷ್ಕೃತ ಬಂಪರ್ ಮತ್ತು ಮುಂಭಾಗದಲ್ಲಿ, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್‌ಗಳು (DRL ಗಳು), LED ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.

mahindra-xuv-3xo-suv-price-mileage-features-details

ಡಾರ್ಕ್ ಕ್ರೋಮ್ ಫಿನಿಶ್ ಹೊಂದಿರುವ ಹೊಸ ಅಲಾಯ್ ವ್ಹೀಲ್‌ಗಳು, ಅಗಲದ ಎಲ್ಇಡಿ ಲೈಟ್ ಬಾರ್, ಬಂಪರ್-ಸಂಯೋಜಿತ ನಂಬರ್‌ ಪ್ಲೇಟ್ ಮತ್ತು ಸ್ಲೀಕರ್ ಸಿ-ಆಕಾರದ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿರುವ ನವೀಕರಿಸಿದ ಟೈಲ್‌ಗೇಟ್ ವಿನ್ಯಾಸದೊಂದಿಗೆ ಹಿಂಭಾಗದ ವಿಭಾಗವನ್ನು ಸಂಪೂರ್ಣವಾಗಿ ಸ್ಟೈಲಿಷ್ ಲುಕ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಎಂಜಿನ್ ವಿಶೇಷತೆಗಳು: ಈ ಮಹೀಂದ್ರಾ XUV 3XO ಎಸ್‍ಯುವಿ 1.2 ಟರ್ಬೊ GDi ಪೆಟ್ರೋಲ್ ಎಂಜಿನ್, 1.2 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

mahindra-xuv-3xo-suv-price-mileage-features-details

ಇದರೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಸ್‍ಯುವಿಯು 18.89 ಕಿ.ಮೀ ಮತ್ತು 20.1 ಕಿ.ಮೀ ಮೈಲೇಜ್ ನೀಡುತ್ತದೆ.

ಮಹೀಂದ್ರಾ XUV 3XO ಎಸ್‍ಯುವಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಯೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಆಂಬಿಯೆಂಟ್ ಸೌಂಡ್ ಮೋಡ್‌ಗಳು, ನವೀಕರಿಸಿದ 7-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹಿಂದಿನ ಎಸಿ ವೆಂಟ್‌ಗಳು ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇನ್ನಷ್ಟು ಫಿಚರ್‌ಗಳನ್ನು ಹೊಂದಿದೆ.

Article Published On: Friday, June 21, 2024, 8:30 [IST]
English summary
Mahindra xuv 3xo suv price mileage features details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+