ಒಂದೇ ಚಾರ್ಜ್‌ನಲ್ಲಿ 456 ಕಿಮೀ ರೇಂಜ್‌: ಈ ಕಾರು ಕೊಳ್ಳುವವರಿಗೆ ಮಹೀಂದ್ರಾ ನೀಡುತ್ತಿದೆ ಲಕ್ಷ ಲಕ್ಷ ಆಫರ್‌!

ಭಾರತದ ಹೆಮ್ಮೆಯ ವಾಹನ ನಿರ್ಮಾಣ ಕಂಪನಿ ಮಹೀಂದ್ರಾ ಸದ್ಯಕ್ಕೆ ಭಾರತೀಯ ಆಟೋಮೊಬೈಲ್‌ ಕ್ಷೇತ್ರದಲ್ಲಿ ಟ್ರೆಂಡಿಂಗ್‌ನಲ್ಲಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿ ಸಾಕಷ್ಟು ಕಾರು ಮಾದರಿಗಳನ್ನು ತಂದಿದ್ದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿಯು ಕಡಿಮೆ ಬೆಲೆಗೆ ಮಹೀಂದ್ರಾ XUV 3XO ಕಾರನ್ನು ಮಾರುಕಟ್ಟೆಗೆ ತಂದಿತ್ತು. ಈ ಕಾರು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಪಂಡಿತರ ಅಭಿಪ್ರಾಯ. ಎಲೆಕ್ಟ್ರಿಕ್‌ನಲ್ಲೂ ಮಹೀಂದ್ರಾ ತನ್ನ ಛಾಪನ್ನು ಮೂಡಿಸಿದ್ದು XUV 400 ಇದರ ಪ್ರಮುಖ ಎಲೆಕ್ಟ್ರಿಕ್‌ ಕಾರು ಮಾದರಿ.

ಇದೀಗ ಈ ಕಾರು ಮಾದರಿಗೆ, ಅಂದರೆ ಹೊಸ ಮಹೀಂದ್ರಾ XUV 400 (Mahindra XUV 400) ಎಲೆಕ್ಟ್ರಿಕ್‌ ಕಾರಿಗೆ ಕಂಪನಿ ಭರ್ಜರಿ ಆಫರ್‌ ಅನ್ನು ನೀಡುತ್ತಿದೆ. ಈ ಕಾರನ್ನು ಕೊಳ್ಳುವವರಿಗೆ ಸುಮಾರು 1.4 ಲಕ್ಷದವರೆಗೆ ಆಫರ್‌ ಸಿಗಲಿದ್ದು ಹೊಸ ಕಾರು ಕೊಳ್ಳುವವರಿಗೆ ಇದು ಸಾಕಷ್ಟು ಸಹಾಯವಾಗಬಲ್ಲದು.

Mahindra XUV 400 Gets Big Discounts Up to Rs 1 4 Lakhs In India

ಈ ಕಾರಿನ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರಿನ ಮೇಲಿ ಆಫರ್‌ ಹೆಚ್ಚು ಮತ್ತು ಕಡಿಮೆಯಾಗುತ್ತದೆ. ಆದರೂ ಕಡಿಮೆ ಎಂದೂ ಸಹ ನಿಮಗೆ ಈ ಕಾರನ್ನು ಕೊಳ್ಳುವಾಗ ಕಡಿಮೆ ಎಂದರೂ 1.4 ಲಕ್ಷದವರೆಗೆ ಆಫರ್‌ ಸಿಗುತ್ತದೆ. ಸಾಕಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡ ಈ ಕಾರು ಆನ್‌ ರೋಡ್‌ನಲ್ಲಿಯೂ ಉತ್ತಮ ಪರ್ಫಾಮೆನ್ಸ್‌ ನೀಡುತ್ತದೆ.

XUV400 ಎಲೆಕ್ಟ್ರಿಕ್ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ಮಹೀಂದ್ರಾ ಬಹಿರಂಗಪಡಿಸಿದೆ. 0 ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ 24 ಗಂಟೆಗಳಲ್ಲಿ 751 ಕಿ.ಮೀ ದೂರವನ್ನು ಕ್ರಮಿಸಿದ ಮೊದಲ ಎಲೆಕ್ಟ್ರಿಕ್ ವಾಹನವಾಗಿ ಗುರ್ತಿಸಿಕೊಂಡಿದೆ. ಹಿಮಾಚಲ ಪ್ರದೇಶದ ಕೈಲಾಂಗ್, ಲಾಹೌಲ್ ಸ್ಪಿಟಿಯಿಂದ ಪ್ರಾರಂಭವಾದ ಡ್ರೈವ್ 24 ಗಂಟೆಗಳಲ್ಲಿ 751 ಕಿ.ಮೀ ದೂರವನ್ನು ಕ್ರಮಿಸಿತು.

Mahindra XUV 400 Gets Big Discounts Up to Rs 1 4 Lakhs In India

ಕಡಿದಾದ ಇಳಿಜಾರುಗಳಲ್ಲಿ XUV400 ಎಲೆಕ್ಟ್ರಿಕ್ SUV ಸಲೀಸಾಗಿ ಜಿಗ್ ಜಾಗ್ ಮಾಡುವುದನ್ನು ಹಲವರು ಕಂಡಿದ್ದಾರೆ. ಇದು ಸಾಕಷ್ಟು ಗಮನಾರ್ಹವಾಗಿದೆ, ಏಕೆಂದರೆ ಹೆಚ್ಚಿನ ಎತ್ತರ-ಇಳಿಜಾರುಗಳಲ್ಲಿ ವಾಹನವನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿರುತ್ತದೆ. XUV400 ಯಾವುದೇ ತೊಂದರೆ ನೀಡದೆ ಸರಾಗವಾಗಿ ವೇಗವನ್ನು ಮತ್ತು ಇತರ ಕಾರುಗಳನ್ನು ಹಿಂದಿಕ್ಕಿರುವುದಾಗಿ ಕಂಪನಿ ಹೇಳಿದೆ.

XUV400 112 Ah ಸಾಮರ್ಥ್ಯದ ರೇಟಿಂಗ್ ಹೊಂದಿರುವ 39.4 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವುದು ವಾಹನ ಸಾಮರ್ಥ್ಯವನ್ನು ಸಾಭೀತುಪಡಿಸಿದೆ. ಬ್ಯಾಟರಿ ಪ್ಯಾಕ್ ನಿಕಲ್, ಮ್ಯಾಂಗನೀಸ್ ಮತ್ತು ಕೋಬಾಲ್ಟ್ ಎಲೆಕ್ಟ್ರೋ-ಕೆಮಿಕಲ್ ಸಂಯೋಜನೆಯನ್ನು ಹೊಂದಿದೆ. ಒಟ್ಟು ವಾಹನದ ತೂಕವು 1,960 ಕೆ.ಜಿ ಇದ್ದು, ಅದರಲ್ಲಿ ಬ್ಯಾಟರಿ ಪ್ಯಾಕ್ ಸ್ವತಃ 309 ಕೆ.ಜಿ ತೂಗುತ್ತದೆ.

Mahindra XUV 400 Gets Big Discounts Up to Rs 1 4 Lakhs In India

ಅಧಿಕೃತವಾಗಿ, XUV400 ನಲ್ಲಿ 8.3 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಸಾಧಿಸಬಹುದು. ಇದು ಐಷಾರಾಮಿ ಅಲ್ಲದ ವಿಭಾಗವನ್ನು ಹೊರತುಪಡಿಸಿ, ಭಾರತದಲ್ಲಿ ಉತ್ಪಾದಿಸಲಾಗುವ ಅತ್ಯಂತ ವೇಗದ ಎಲೆಕ್ಟ್ರಿಕ್ ಪ್ರಯಾಣಿಕ ವಾಹನವಾಗಿದೆ. XUV400 ಇವಿ 150 kmph ಗರಿಷ್ಠ ವೇಗವನ್ನು ಹೊಂದಿದೆ. ಈ ವೇಗವು ಪ್ರಯಾಣಿಕರು ಹಾಗೂ ಲಗ್ಗೇಜ್ ಅನ್ನು ಒಳಗೊಂಡಿರುವ ವೇಗವಾಗಿದೆ.

AIS 040 (Rev. 1) ಮಾನದಂಡದ ಪ್ರಕಾರ XUV400 456 ಕಿ.ಮೀ ಪ್ರಮಾಣೀಕೃತ ಶ್ರೇಣಿಯನ್ನು ಹೊಂದಿದೆ. ಮಹೀಂದ್ರಾ XUV400 ಅನ್ನು ಪವರ್ ಮಾಡುವುದು AC - ಸಿಂಕ್ರೊನಸ್ ಮೋಟಾರ್ ಆಗಿದ್ದು, ಇದು 5,500 rpm ನಲ್ಲಿ 110 kW ಗರಿಷ್ಠ ಶಕ್ತಿಯನ್ನು ಮತ್ತು 310 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 5, 2024, 13:08 [IST]
English summary
Mahindra xuv 400 gets big discounts up to rs 1 4 lakhs in india
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+