XUV300: ಮಹೀಂದ್ರಾ ಎಕ್ಸ್‌ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಭಾರತದಲ್ಲಿ ಟಾಟಾದಂತೆ ಮಹೀಂದ್ರಾ (Mahindra) ಕೂಡ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದ್ದು, ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯ 'ಎಕ್ಸ್‌ಯುವಿ300' ಕಾರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ವಿವರಿಸಿದ್ದೇವೆ.

ಬೆಂಗಳೂರಿನಲ್ಲಿ 'ಮಹೀಂದ್ರಾ ಎಕ್ಸ್‌ಯುವಿ300' ಬೇಸ್ ಮಾಡೆಲ್ (ಆರಂಭಿಕ ಆವೃತ್ತಿ) ಪೆಟ್ರೋಲ್ ಚಾಲಿತ 'ಡಬ್ಲ್ಯೂ2' ರೂ.9.65 ಲಕ್ಷ, ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಳ್ಳುವ 'ಡಬ್ಲ್ಯೂ4' (ಪೆಟ್ರೋಲ್) ರೂ.10.45 ಲಕ್ಷ, ಬೇಸ್ ವೇರಿಯೆಂಟ್ (ಪ್ರಾರಂಭಿಕ ರೂಪಾಂತರ) ಡೀಸೆಲ್ ಚಾಲಿತ 'ಡಬ್ಲ್ಯೂ4' ರೂ.12.73 ಲಕ್ಷ, ಅತಿಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ತೆಗೆದುಕೊಳ್ಳುವ 'ಡಬ್ಲ್ಯೂ6' (ಡೀಸೆಲ್) ರೂ.13.70 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.

Mahindra XUV300 Car On Road Price And Emi Details

ನೀವು ಈ ಕಾರನ್ನು ರೂ.96,000 ಡೌನ್ ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ಶೇಕಡ 9.8% ಬಡ್ಡಿದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.18,377 ಇಎಂಐ ಕಟ್ಟಬೇಕು. ನೂತನ ಮಹೀಂದ್ರಾ ಎಕ್ಸ್‌ಯುವಿ300 (Mahindra XUV300) ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ರೆಡ್ ರೇಜ್, ಅಕ್ವಾಮರೀನ್ ಸೇರಿದಂತೆ 3-ಡುಯಲ್ ಟೋನ್, 7-ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

ಮಹೀಂದ್ರಾ ಎಕ್ಸ್‌ಯುವಿ300 ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಅನ್ನು ಹೊಂದಿದೆ. ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 200 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಎಂಜಿನ್ 130 ಪಿಎಸ್ ಪವರ್ ಹಾಗೂ 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Mahindra XUV300 Car On Road Price And Emi Details

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 117 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 300 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, 2WD (ಟೂ ವೀಲ್ ಡ್ರೈವ್) ತಂತ್ರಜ್ಞಾವನ್ನು ಒಳಗೊಂಡಿದೆ. 20.1 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ.

ಈ ಕಾರು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸಿಂಗಲ್ ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದಿದೆ.

Mahindra XUV300 Car On Road Price And Emi Details

ಮಹೀಂದ್ರಾ ಎಕ್ಸ್‌ಯುವಿ300ಗೆ ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಮಾರುತಿ ಸುಜುಕಿ ಬ್ರೆಝಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಇಲ್ಲಿ ಕೆಲವೇ ಮಾದರಿಗಳ ಆನ್-ರೋಡ್ ಬೆಲೆ ಮತ್ತು ಸಾಲದ ಆಯ್ಕೆ ಬಗ್ಗೆ ವಿವರಿಸಿದ್ದೇವೆ. ಹೆಚ್ಚಿನ ವಿವರಗಳಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 25, 2024, 10:30 [IST]
English summary
Mahindra xuv300 car on road price and emi details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+