ಮಹೀಂದ್ರಾದ ಈ ಕಾರಿಗೆ 1.59 ಲಕ್ಷ ಭರ್ಜರಿ ಡಿಸ್ಕೌಂಟ್: ಸುದ್ದಿ ಕೇಳಿ ಶೋ ರೂಮ್ ಮುಂದೆ ಕ್ಯೂ ನಿಂತ ಗ್ರಾಹಕರು!
ಎಲ್ಲರಿಗೂ ತಿಳಿದಿರುವಂತೆ ಭಾರತದ ಪ್ರಖ್ಯಾತ ವಾಹನ ನಿರ್ಮಾಣ ಕಂಪನಿಯಾದ ಮಹೀಂದ್ರಾ, ತನ್ನ XUV300 ಅನ್ನು ಅಪ್‌ಡೇಟ್ ಮಾಡಿ XUV3XO ಎಂಬ ಹೆಸರಿನಲ್ಲಿ ರೀ ಬ್ಯಾಡ್ಜಿಂಗ್ ಮಾಡಿ ಮಾರುಕಟ್ಟೆಗೆ ತರುವ ಸಿದ್ದತೆಯಲ್ಲಿದೆ. ಹೊಸ ಕಾರನ್ನು ಮಾರುಕಟ್ಟೆಗೆ ತರುವ ಯೋಜನೆಯಲ್ಲಿರುವಾಗಲೇ ಮಹೀಂದ್ರಾ ಕಂಪನಿಯು ಗ್ರಾಹಕರಿಗೆ ಭಾರೀ ಕೊಡುಗೆಯೊಂದನ್ನು ನಿಡುತ್ತಿದೆ.
ಮಹೀಂದ್ರಾ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ XUV300 ಕಾರು ಮಾದರಿಗೆ ಭಾರೀ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಹದು, ಈ ಕಾರು ಮಾದರಿಗೆ ಮಹೀಂದ್ರಾ ಸುಮಾರು 1.59 ರೂಗಳವರೆಗೆ ಭರ್ಜರಿ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಮಹೀಂದ್ರಾ ಕಂಪನಿಯ 2023 ಮಾಡೆಲ್‌ಗಳಿಗೆ ಈ ಆಫರ್ ನೀಡುತ್ತಿದ್ದು, ಹೊಸ ಕಾರು ಬರುವ ಮುನ್ನ ಹಳೆಯ ಸ್ಟಾಕ್‌ಗಳನ್ನು ಖಾಲಿ ಮಾಡು ಯೋಜನೆಯಲ್ಲಿದೆ.

ಮಹೀಂದ್ರಾ ಕಂಪನಿಯು ಕಿಯಾ ಸೋನೆಟ್ ಮತ್ತು ಟಾಟಾ ನೆಕ್ಸಾನ್ ಪ್ರತಿಸ್ಪರ್ಧಿಯಾಗಿ ರಸ್ತೆಗೆ ಇಳಿಸಿರುವ ಈ ಕಾರು (Mahindra XUV300) ಈ ತಿಂಗಳು 1.59 ಲಕ್ಷ ರೂ.ವರೆಗೆ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ಪಡೆಯುತ್ತಿದ್ದು, ಇದು ಆಯ್ಕೆ ಮಾಡಿದ ಟ್ರಿಮ್ ಮತ್ತು ಪವರ್‌ಟ್ರೇನ್ ಅನ್ನು ಅವಲಂಬಿಸಿರುತ್ತದೆ. ಟಾಪ್-ಸ್ಪೆಕ್ W8 ರೂಪದಲ್ಲಿ ಮಾರಾಟವಾಗದ 2023 XUV300 ಪೆಟ್ರೋಲ್ ಗರಿಷ್ಠ ಪ್ರಯೋಜನಗಳನ್ನು ಪಡೆಯುತ್ತದೆ.
ಡೀಸೆಲ್ W8 ರೂಪಾಂತರಗಳು 1.57 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿಯನ್ನು ಪಡೆಯುತ್ತವೆ ಆದರೆ ಶ್ರೇಣಿಯ-ಮೇಲ್ಭಾಗದಲ್ಲಿರುವ MY23 XUV300 TGDi ಮಾದರಿಗಳು 1.50 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಮಹೀಂದ್ರಾ XUV300 ಕಾರನ್ನು ಕೊಳ್ಳುವವರಿಗೆ ಇದು ಸರಿಯಾದ ಸಮಯ ಎಂಬುದು ಕಾರು ಪಂಡಿತರ ಅಭಿಪ್ರಾಯ.

ಇನ್ನು ಈ ಕಾರಿನ ಕುರಿತು ಹೆಚ್ಚು ನೋಡುವುದಾದರೆ, ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ300 (Mahindra XUV300) ಕಾರು ರೂ.7.99 ಲಕ್ಷದಿಂದ ರೂ.14.76 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಡಬ್ಲ್ಯೂ2, ಡಬ್ಲ್ಯೂ4, ಡಬ್ಲ್ಯೂ6 ಒಳಗೊಂಡಂತೆ 5 ರೂಪಾಂತರ ಹಾಗೂ ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
ಈ ಎಕ್ಸ್‌ಯುವಿ300 ಕಾರು, 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನ್ವಯ 6-ಸ್ವೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಪಡೆದಿದ್ದು, 20.1 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗೆ 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‌ಯುವಿ, 7- ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸಿಂಗಲ್ ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಕಾರ್ನರ್ ಬ್ರೇಕಿಂಗ್ ಕಂಟ್ರೋಲ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications