ಮಹೀಂದ್ರಾಗೆ ಪೈಪೋಟಿ ನೀಡುತ್ತಿದೆ ಹೊಸ ಚೀನಾ ಕಾರು: ವಿಶೇಷತೆಗಳೇನು?

ಭಾರತದಲ್ಲಿ ZS ಇವಿ ಮತ್ತು ಕಾಮೆಟ್ ಇವಿ ನಂತರ ಎಂಜಿ ಮೋಟಾರ್ಸ್‌ನಿಂದ ಮೂರನೇ ಎಲೆಕ್ಟ್ರಿಕ್ ಕಾರಾಗಿ ವಿಂಡ್ಸರ್ ಇವಿ ಬಿಡುಗಡೆಯಾಗಿದೆ. ಇದು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವುಲಿಂಗ್ ಕ್ಲೌಡ್ ಇವಿ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಭಾರತೀಯ ಗ್ರಾಹಕರಿಗೆ ಅನುಗುಣವಾಗಿ ಹೊಸ ಅಪ್‌ಡೇಟ್‌ಗಳೊಂದಿಗೆ ಇಲ್ಲಿ ಪರಿಚಯಿಸಲಾಗಿದೆ. ಮತ್ತೊಂದೆಡೆ ಈ ಕಾರಿಗೆ ಪೈಪೋಟಿ ನೀಡಲು ಮಹೀಂದ್ರಾ ತನ್ನದೇ ಆದ XUV 400 ಇವಿ ಅನ್ನು ಹೊಂದಿದೆ. ಎಂಜಿ ವಿಂಡ್ಸರ್ ಇವಿ ಮತ್ತು ಮಹೀಂದ್ರಾ XUV 400 ನಡುವಿನ ಹೋಲಿಕೆ ಇಲ್ಲಿದೆ.

ಮಹೀಂದ್ರಾ XUV 400 ಬೆಲೆ & ಬ್ಯಾಟರಿ: ಮಹೀಂದ್ರಾ XUV 400 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 15.49 ಲಕ್ಷದಿಂದ ರೂ. 17.69 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ. ಮಹೀಂದ್ರಾ XUV 400 ಎಲೆಕ್ಟ್ರಿಕ್ ಕಾರು ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಲಭ್ಯವಿದೆ.

mahindra-xuv400-ev-vs-windsor-ev-price-battery-comparison

ಮಹೀಂದ್ರಾ XUV 400 ಇಸಿ ಪ್ರೊ ಮಾದರಿಯು 34.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದರೇ, ಇಎಲ್ ಪ್ರೊ ಟ್ರಿಮ್ 39.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. ಮೊದಲ ಟ್ರಿಮ್ ಒಂದು ಬಾರಿ ಚಾರ್ಜ್ ಮಾಡಿದರೆ 375 ಕಿ.ಮೀ ರೇಂಜ್ ನೀಡುತ್ತದೆ. ಎರಡನೆಯದು ಪೂರ್ಣ ಚಾರ್ಜ್‌ನಲ್ಲಿ 456 ಕಿ.ಮೀ ರೇಂಜ್ ನೀಡುತ್ತದೆ.

ಎಂಜಿ ವಿಂಡ್ಸರ್ ಬೆಲೆ & ಬ್ಯಾಟರಿ: ಎಂಜಿ ವಿಂಡ್ಸರ್ ಇವಿ ಮೂರು ಟ್ರಿಮ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು 9.99 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದ್ದರೆ, ಬ್ಯಾಟರಿ ಚಂದಾದಾರಿಕೆ ಪ್ರತಿ ಕಿ.ಮೀಗೆ 3.5 ರೂ. ಆದಾಗ್ಯೂ, ಈ ಇವಿಗಾಗಿ ಪ್ರತಿ ರೂಪಾಂತರಕ್ಕೆ ಸಂಪೂರ್ಣ ಬೆಲೆ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

mahindra-xuv400-ev-vs-windsor-ev-price-battery-comparison

ಎಂಜಿ ವಿಂಡ್ಸರ್ ಇವಿ 38 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಇದರ ಮೋಟಾರ್ 134 ಬಿಹೆಚ್‌ಪಿ ಪವರ್ ಮತ್ತು 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 331 ಕಿಲೋಮೀಟರ್ ಚಲಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸದ್ಯ ಟಾಟಾ ಮೋಟಾರ್ಸ್ ಸಿಂಹಪಾಲನ್ನು ಹೊಂದಿದ್ದರೆ, ಎಂಜಿ ಮೋಟಾರ್ ಕೂಡ ತನ್ನ ಎಲೆಕ್ಟ್ರಿಕ್ ಕಾರುಗಳೊಂದಿಗೆ ಸಾಕಷ್ಟು ಗಮನ ಸೆಳೆಯುತ್ತಿದೆ. ಅದೇ ಸಮಯದಲ್ಲಿ, ಹ್ಯುಂಡೈ ಮತ್ತು ಮಹೀಂದ್ರಾದಂತಹ ವಾಹನ ತಯಾರಕರು ಸಹ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ನೀಡುತ್ತಿದ್ದಾರೆ.

ಒಟ್ಟಾರೆ ಎಲೆಕ್ಟ್ರಿಕ್ ಕಾರು ವಿಭಾಗವು ಇನ್ನೂ ಬೆಳೆಯಬೇಕಿದೆ. ರೇಂಜ್ ಆತಂಕ ಹಾಗೂ ಹೆಚ್ಚಿನ ಬೆಲೆಗಳಿಂದಾಗಿ ಗ್ರಾಹಕರು ಇವಿಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಬ್ಯಾಟರಿ ತಯಾರಿಕೆ ನಡೆದರೆ, ಎಲೆಕ್ಟ್ರಿಕ್ ಕಾರುಗಳ ಬೆಲೆಗಳು ಗಣನೀಯವಾಗಿ ಇಳಿಕೆಯಾಗಲಿವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 17, 2024, 12:11 [IST]
English summary
Mahindra xuv400 ev vs windsor ev price battery comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+