ಊಹಿಸದ ರೀತಿಯಲ್ಲಿ ಮಹೀಂದ್ರಾ ಕಾರಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್ ಕೊಟ್ಟ ಭಾರತ್-ಎನ್‌ಸಿಎಪಿ!

ಇತ್ತೀಚೆಗಷ್ಟೇ ಮಾರುತಿ ಸುಜುಕಿ ಕಂಪನಿಯು ತನ್ನ ಡಿಜೈರ್ ಅನ್ನು ಅತ್ಯಂತ ಸುರಕ್ಷಿತ ಕಾರಾಗಿ ನಿರ್ಮಿಸಿ ಗ್ಲೋಬಲ್ ಎನ್‌ಸಿಎಪಿ ಮೂಲಕ 5-ಸ್ಟಾರ್ ರೇಟಿಂಗ್ ಗಳಿಸಿ ಭಾರೀ ಸದ್ದು ಮಾಡಿದೆ. ಈ ಹಿಂದೆ ಮಾರುತಿಯ ಇನ್ಯಾವುದೇ ಕಾರುಗಳು ಈ ಮಟ್ಟದ ಸುರಕ್ಷತಾ ರೇಟಿಂಗ್ ಪಡೆದಿರಲಿಲ್ಲ. ಈ ಬೆಳವಣಿಗೆಯು ಭಾರತದಲ್ಲಿ ಕಾರುಗಳ ಸುರಕ್ಷತೆ ಕೂಡ ಪ್ರಮುಖ ಪಾತ್ರ ವಹಿಸಲಿದೆ ಎಂಬುದನ್ನು ಸಾಭೀತುಪಡಿಸಿದೆ. ಮತ್ತೊಮ್ಮೆ ಇದಕ್ಕೆ ಉದಾಹರಣೆ ಎಂಬಂತೆ ಮಹೀಂದ್ರಾದ ಮೂರು ಕಾರುಗಳು ಇಂದು 5-ಸ್ಟಾರ್ ರೇಟಿಂಗ್ ಪಡೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿವೆ.

ಮಹೀಂದ್ರಾ ಕಂಪನಿಯ ಲೈನ್‌ಅಪ್‌ನಲ್ಲಿ ಬರುವ ಪ್ರಮುಖ ಕಾರುಗಳಾದ XUV700 ಮತ್ತು Scorpio-N ಕಾರುಗಳು ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿದ್ದು, ಇವು ಕೂಡ 5-ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಅತ್ಯಂತ ಸುರಕ್ಷಿತ ಕಾರಗಳಾಗಿ ಗುರ್ತಿಸಿಕೊಂಡಿವೆ. ಇವುಗಳ ನಂತರ ಇಂದು ಮೂರು ಹೊಸ ಮಹೀಂದ್ರಾ ಕಾರುಗಳ ನಿರ್ಮಾಣ ಗುಣಮಟ್ಟವನ್ನು ಹೊರತರಲಾಗಿದೆ.

mahindra-xuv400-secured-5-star-safety-rating-in-bharat-ncap

ಕಾರುಗಳಲ್ಲಿನ ಸುರಕ್ಷತೆ ಹಾಗೂ ಅವುಗಳ ನಿರ್ಮಾಣ ಗುಣಮಟ್ಟವನ್ನು ನಿರ್ಧರಿಸುವ ಭಾರತ್-ಎನ್‌ಸಿಎಪಿ ಮೂಲಕ ಎಲ್ಲಾ ಮೂರು ಕಾರುಗಳು 5-ಸ್ಟಾರ್ ರೇಟಿಂಗ್ ಪಡೆದಿವೆ. ಈ ಮೂಲಕ ಮಹೀಂದ್ರಾ ಕಂಪನಿಯು ತನ್ನ ಪ್ರತಿ ಕಾರುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮುಂದಾಗಿದೆ ಎಂಬುದು ಖಚಿತವಾಗಿದೆ. ಕಂಪನಿಯ ಈ ಪ್ರಯತ್ನವು SUV ವಿನ್ಯಾಸದ ಪ್ರಮುಖ ಆಧಾರವಾಗಿ ಸುರಕ್ಷತೆಗೆ ಮಹೀಂದ್ರಾದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಮಹೀಂದ್ರಾ XUV400 ಇವಿಗೆ 5-ಸ್ಟಾರ್ ರೇಟಿಂಗ್: ಮಹೀಂದ್ರಾದ XUV400 ಇವಿ ಕಾರು 5-ಸ್ಟಾರ್ ರೇಟಿಂಗ್ ಪಡೆದಿದ್ದು, ಕಾರು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 30.37 ಅಂಕಗಳನ್ನು ಪಡೆದುಕೊಂಡರೆ, ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಸಾಧಿಸಿದೆ. ಈ ಮೂಲಕ ಮಹೀಂದ್ರಾ XUV400 ಭಾರತದಲ್ಲಿ ಸುರಕ್ಷಿತ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದೆನಿಸಿಕೊಂಡಿದೆ.

mahindra-xuv400-secured-5-star-safety-rating-in-bharat-ncap

ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‌ಯುವಿನಲ್ಲಿ ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಎಲ್ಲಾ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಂತೆ ಅಗತ್ಯ ಸುರಕ್ಷತಾ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿದೆ. ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಕಾರಿನ ವಿಶೇಷತೆಗಳು: ಮಹೀಂದ್ರಾ XUV400 ಇವಿಯ ಎಕ್ಸ್ ಶೋರೂಂ ಬೆಲೆ 15.49 ಲಕ್ಷ ರೂ.ನಿಂದ 17.49 ಲಕ್ಷ ರೂ. ನಡುವೆ ಇದೆ. ಈ ಎಲೆಕ್ಟ್ರಿಕ್ SUV ಪ್ರೋ ಇಸಿ ಮತ್ತು ಪ್ರೋ ಇಎಲ್ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದ್ದು, ಕ್ರಮವಾಗಿ 34.5kWh ಮತ್ತು 39.4kWh ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಗಳೊಂದಿಗೆ ಬರುತ್ತದೆ. MIDC ಪ್ರಕಾರ 34.5kWh ಬ್ಯಾಟರಿಯು 375 ಕಿ.ಮೀ ಹಾಗೂ ದೊಡ್ಡ 39.4kWh ಬ್ಯಾಟರಿಯು 456 ಕಿ.ಮೀ ರೇಂಜ್ ನೀಡಬಲ್ಲವು.

ವೈಶಿಷ್ಟ್ಯಗಳು: ಮಹೀಂದ್ರಾದ ಈ ಎಲೆಕ್ಟ್ರಿಕ್ SUV ನಲ್ಲಿರುವ ವೈಶಿಷ್ಟ್ಯಗಳು 60 ಕ್ಕೂ ಹೆಚ್ಚು ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಬಟ್ಟನ್ ಮೂಲಕ ಅಡ್ಜಸ್ಟ್ ಮತ್ತು ಫೋಲ್ಡ್ ಮಾಡಬಹುದಾದ ORVM ಗಳು, ಸಿಂಗಲ್ ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್ ಮತ್ತು ಪುಶ್ ಬಟನ್ ಸ್ಟಾರ್ಟ್-ಸ್ಟಾಪ್ ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 14, 2024, 16:32 [IST]
English summary
Mahindra xuv400 secured 5 star safety rating in bharat ncap
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+