ಮಹೀಂದ್ರಾದ ಈ ಪ್ರಸಿದ್ದ ಕಾರಿಗೆ 2 ಲಕ್ಷಗಳವರೆಗೆ ಆಫರ್‌: ಈಗ ಬಿಟ್ಟರೆ ಇಂತಹ ಕೊಡುಗೆ ಕನಸಲ್ಲಿ ಮಾತ್ರ!

ಮಹೀಂದ್ರಾ ಕಂಪನಿಯ ಫ್ಲ್ಯಾಗ್‌ಶಿಪ್‌ ವಾಹನ ಯಾವುದು ಎಂದು ಯಾರ ಬಳಿಯಾದರೂ ಕೇಳಿದರೆ, ಯಾವಿದೇ ಸಂಶಯವಿಲ್ಲದೆ ಅದು ಮಹೀಂದ್ರಾ XUV700 ಎಂದು ಕಣ್ಣು ಮುಚ್ಚಿಕೊಂಡು ಹೇಳುತ್ತಾರೆ. ಅಷ್ಟರ ಮಟ್ಟಿಗೆ XUV700 ಕಾರು ಭಾರತೀಯರ ನಡುವೆ ಜನಪ್ರಿಯಗೊಂಡಿದೆ. ಒಮ್ಮೆಯಾದರೂ ಈ ಕಾರನ್ನು ಖರೀದಿ ಮಾಡಬೇಕು ಎಂಬುವುದು ಹಲವರ ಕನಸಾಗಿದೆ. ಅದಕ್ಕೆ ಈ ಕಾರಿನ ಪರ್ಫಾಮೆನ್ಸ್‌ ಡಿಸೈನ್ ಮತ್ತು ಅತ್ಯಾಧುನಿಕ ಫೀಚರ್‌ಗಳು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರಿನ ಅಡಾಸ್‌ ಫೀಚರ್‌ ಬಳಸಿರುವ ವಿಡಿಯೋಗಳು ಸಾಕಷ್ಟು ಕಾಣ ಸಿಗುತ್ತವೆ.

ಇದೀಗ ಮಹೀಂದ್ರಾ ಕಂಪನಿ ಹೊಸ XUV700 ಕಾರನ್ನು ಹೊಸದಾಗಿ ಖರೀದಿ ಮಾಡುವವರಿಗೆ ಭರ್ಜರಿ ಆಫರ್‌ ಒಂದನ್ನು ನೀಡುತ್ತಿದೆ. ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನ ಮೂರನೇ ವರ್ಷವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಹೀಂದ್ರಾ XUV700 ಶ್ರೇಣಿಯ AX7 ಟ್ರಿಮ್‌ಗೆ ತಾತ್ಕಾಲಿಕವಾಗಿ ಬೆಲೆಗಳನ್ನು ಕಡಿಮೆ ಮಾಡಿದೆ.

Mahindra XUV700 AX7 prices slashed by more than Rs 2 lakh for a limited time

ಮಹೀಂದ್ರಾ XUV700 AX7 ಬೆಲೆಗಳು ಈಗ ರೂ 19.49 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ 24.99 ಲಕ್ಷ, ಎಕ್ಸ್ ಶೋ ರೂಂ, ದೆಹಲಿ. ಈ ವಿಶೇಷ ಬೆಲೆಗಳು ಕೇವಲ ನಾಲ್ಕು ತಿಂಗಳಿಗೆ ಮಾತ್ರ ಅನ್ವಯಿಸುತ್ತವೆ. ಸದ್ಯಕ್ಕೆ ಈ ಕಾರಿಗೆ ಕಂಪನಿ ಸುಮಾರು ೨ ಲಕ್ಷ ರೂಗಳ ವರೆಗೆ ಕಡಿತಗೊಳಿಸಲಾಗಿದ್ದು ಇದು ಈ ಕಾರಿನ ಮಾರಾಟವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

AX7 ಮತ್ತು AX7 L ಟ್ರಿಮ್‌ಗಳ ದೊಡ್ಡ ಆಕರ್ಷಣೆಯೆಂದರೆ ಅವುಗಳು XUV700 ನೀಡುವ ಎಲ್ಲಾ ಫೀಚರ್‌ಗಳು ಮತ್ತು ವಿಶೇಷತೆಗಳು ಸಂಪೂರ್ಣವಾಗಿ ಲೋಡ್ ಆಗುತ್ತವೆ. ಉದಾಹರಣೆಗೆ, AX7 ಆವೃತ್ತಿಗಳು ಪಾನೋರಾಮಿಕ್ ಸನ್‌ರೂಫ್, ಲೆವೆಲ್ 2 ಅಡಾಸ್‌ , ವೈರ್‌ಲೆಸ್ ಆ್ಯಪಲ್‌ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್‌ ಆಟೋ, 1-ವರ್ಷದ ಉಚಿತ ಅಡ್ರೆನೆಕ್ಸ್‌ ಚಂದಾದಾರಿಕೆ, ಟಿಪಿಎಂಎಸ್‌, ಪೂರ್ಣ-ಎಲ್‌ಇಡಿ ಲೈಟಿಂಗ್, 18-ಇಂಚಿನ ಅಲಾಯ್‌ ವ್ಹೀಲ್‌ಗಳು, ಲೆಥೆರೆಟ್ ಅಪ್ಹೋಲ್ಸ್ಟರಿಗಳು ಸಿಗುತ್ತವೆ.

Mahindra XUV700 AX7 prices slashed by more than Rs 2 lakh for a limited time

ಮಹೀಂದ್ರಾ ಎಕ್ಸ್‌ಯುವಿ 700 ಬಗ್ಗೆ ನೊಡುವುದಾದರೆ ಇತ್ತೀಚೆಗಷ್ಟೇ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಬಹುಬೇಡಿಕೆಯ XUV700 ಎಸ್‍ಯುವಿಯ ಹೊಸ ಸ್ಪೆಷಲ್ ಬಿಡುಗಡೆ ಮಾಡಿತ್ತು. ಇದಕ್ಕೆ ಬ್ಲೇಜ್ ಎಡಿಷನ್ ಎಂಬ ಹೆಸರನ್ನು ನೀಡಿತ್ತು. ಈ ಹೊಸ ಮಹೀಂದ್ರಾ XUV700 ಬ್ಲೇಜ್ ಎಡಿಷನ್ (Mahindra XUV700 Blaze Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.24.24 ಲಕ್ಷವಾಗಿದೆ.

2024ರ ಮಹೀಂದ್ರಾ XUV700 ಬ್ಲೇಜ್ ಎಡಿಷನ್ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾತ್ರ ಬರುತ್ತದೆ ಮತ್ತು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ. ಹೊಸ ಮಹೀಂದ್ರಾ XUV700 ಬ್ಲೇಜ್ ಎಡಿಷನ್ ಮಾದರಿಯು ಫ್ರಂಟ್-ವೀಲ್ ಡ್ರೈವ್ ಪವರ್‌ಟ್ರೇನ್ ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳೊಂದಿಗೆ ಮಾತ್ರ ಲಭ್ಯವಿರುತ್ತದೆ. ಈ ಹೊಸ ಮಾದರಿಯು ಪೆಟ್ರೋಲ್ ಎಟಿ ಮತ್ತು ಡೀಸೆಲ್ ಎಟಿ ಮತ್ತು ಎಂಟಿ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.

Mahindra XUV700 AX7 prices slashed by more than Rs 2 lakh for a limited time

ಮಹೀಂದ್ರಾ XUV700 ಬ್ಲೇಜ್ ಎಡಿಷನ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಗ್ಯಾಸೋಲಿನ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 bhp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 184 bhp ಮತ್ತು 450 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಗಳು 6-ಸ್ಪೀಡ್ ಮ್ಯಾನುವಲ್ ಯುನಿಟ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ನೊಂದಿಗೆ ನೀಡುತ್ತದೆ. ಸ್ಟ್ಯಾಂಡರ್ಡ್ ಮಹೀಂದ್ರಾ XUV700 ಎಸ್‍ಯುವಿಯ ಬೆಲೆಯು ರೂ.13.99 ಲಕ್ಷದಿಂದ ರೂ.26.99 ಲಕ್ಷದವರೆಗೆ ಇದೆ. ಎರಡೂ ಬೆಲೆಗಳು ಎಕ್ಸ್ ಶೋರೂಂ ಆಗಿದೆ. ಸ್ಟ್ಯಾಂಡರ್ಡ್ ಮಾದರಿಯಲ್ಲಿ FWD (ಫ್ರಂಟ್ ವೀಲ್ ಡ್ರೈವ್) ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 10, 2024, 10:31 [IST]
English summary
Mahindra xuv700 ax7 prices slashed by more than rs 2 lakh for a limited time
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+