Mahindra: ಮಹೀಂದ್ರಾ ಎಕ್ಸ್‌ಯುವಿ700 ಹೊಸ ರೂಪಾಂತರ ಶೀಘ್ರ ಬಿಡುಗಡೆ.. 5 ಆಸನ ಆಯ್ಕೆ, ಕಡಿಮೆ ಬೆಲೆ?

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಮಹೀಂದ್ರಾ (Mahindra) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದ್ದು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ ಜನಪ್ರಿಯ ಎಕ್ಸ್‌ಯುವಿ700 (XUV700) ಕಾರಿನ ಹೊಸ ರೂಪಾಂತರ (ವೇರಿಯೆಂಟ್)ವನ್ನು ಬಿಡುಗಡೆಗೊಳಿಸಲು ಕಂಪನಿಯು ಸಾಕಷ್ಟು ತಯಾರಿ ನಡೆಸುತ್ತಿದ್ದು, ಆ ಸಂಬಂಧ ದೆಹಲಿಯ ಸಾರಿಗೆ ಇಲಾಖೆಗೂ ದಾಖಲೆಯನ್ನು ಸಲ್ಲಿಸಿದೆ. ನೂತನ ಎಸ್‌ಯುವಿಯ ಕಾರ್ಯಕ್ಷಮತೆ ಹೇಗಿರಲಿದೆ ಮತ್ತು ವೈಶಿಷ್ಟ್ಯಗಳೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಮುಂಬರಲಿರುವ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಂಎಕ್ಸ್ ಎಟಿ (ಆಟೋಮೆಟಿಕ್) ಮಾದರಿಯು 5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಎಂಎಕ್ಸ್ ಎಂಟಿ (ಮ್ಯಾನುವಲ್) ರೂಪಾಂತರವು 5 ಆಸನದೊಂದಿಗೆ ಲಭ್ಯವಿದ್ದು, ರೂ.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ನೂತನ ಆವೃತ್ತಿಯು ರೂ.1.80 ಲಕ್ಷ ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Mahindra XUV700 MX AT Variant Soon Launch In India Expected Price And Features Details

ಮಹೀಂದ್ರಾ ಎಕ್ಸ್‌ಯುವಿ700 ಎಂಎಕ್ಸ್ ಎಂಟಿ ರೂಪಾಂತರವು 2.0-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 195 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 380 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಹೊಸ ಎಂಎಕ್ಸ್ ಎಟಿ (ಆಟೋಮೆಟಿಕ್) ಮಾದರಿಯು ಇದೇ ಪವರ್‌ಟ್ರೇನ್‌ನೊಂದಿಗೆ ಬರುವ ಸಾಧ್ಯತೆಯಿದೆ.

ಈ ನೂತನ ಕಾರು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಯುಎಸ್‌ಬಿ ಪೋರ್ಟ್‌, 4-ಸ್ಪೀಕರ್ ಸೌಂಡ್ ಸಿಸ್ಟಮ್, ಟಿಲ್ಟ್-ಅಡ್ಜಸ್ಟಬಲ್ ಸ್ಟೀರಿಂಗ್ ವೀಲ್, ರೇರ್ ಎಸಿ ವೆಂಟ್‌ಗಳು, ಫಾಲೋ ಮಿ ಹೋಮ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟೈಲ್-ಲ್ಯಾಂಪ್‌ಗಳು ಹಾಗೂ ಸ್ಮಾರ್ಟ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

Mahindra XUV700 MX AT Variant Soon Launch In India Expected Price And Features Details

ಸುರಕ್ಷತೆಯ ವಿಚಾರದಲ್ಲಿಯೂ ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಂಎಕ್ಸ್ ಎಟಿ ರೂಪಾಂತರವು ಅತ್ಯಾಧುನಿಕವಾಗಿರಲಿದ್ದು, ಡುಯಲ್ ಏರ್‌ಬ್ಯಾಗ್‌, ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಈಗಿರುವ ಎಕ್ಸ್‌ಯುವಿ700 ಮಾದರಿಗಳು ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಅನ್ನು ಪಡೆದಿವೆ.

ದೇಶೀಯವಾಗಿ ಲಭ್ಯವಿರುವ 'ಎಕ್ಸ್‌ಯುವಿ700' ಕಾರಿನ ಇತರೆ ರೂಪಾಂತರಗಳು ರೂ.13.99 ಲಕ್ಷದಿಂದ ರೂ.26.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. 2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 5, 6 ಅಥವಾ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಸಿಗುತ್ತದೆ. ಜೊತೆಗೆ 17 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತವೆ.

Mahindra XUV700 MX AT Variant Soon Launch In India Expected Price And Features Details

ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿಯ ಹಲವು ಮಾದರಿಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ವೇ ಪವರ್ ಡ್ರೈವರ್ ಸೀಟ್, ಸನ್‌ರೂಫ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಬಿಲ್ಟ್-ಇನ್ ಅಲೆಕ್ಸಾ ಕನೆಕ್ಟಿವಿಟಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 10, 2024, 10:40 [IST]
English summary
Mahindra xuv700 mx at variant soon launch india expected price and features details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+