ಬೇಸ್ ವೇರಿಯಂಟ್ ಕ್ರೇಟಾವನ್ನು ಟಾಪ್ ಮಾಡೆಲ್ ಮಾಡಿದ ಭೂಪ: ಇನ್ನೂ ಏನೇನ್ ನೋಡ್ಬೇಕು ಶಿವಾ?
ವಾಹನಗಳನ್ನು ಬೇಸ್ ವೇರಿಯಂಟ್ ಅನ್ನು ಟಾಪ್ ಮಾಡಲ್ ಆಗಿ ಬದಲಾಯಿಸುವುದರಲ್ಲಿ ಭಾರತೀಯರಿಗೆ ಅದೇನೋ ಒಂದು ರೀತಿಯ ಖುಷಿ. ಬಹುತೇಕ ಎಲ್ಲಾ ರೀತಿಯ ವಾಹನಗಳನ್ನು ಸಹ ಅವರವರ ಟೇಸ್ಟ್ ಅಥವಾ ಅಭಿರುಚಿಗೆ ಅನುಗುಣವಾಗಿ ವಾಹನಗಳನ್ನು ಮಾಡಿಫೈ ಮಾಡಿಕೊಂಡಿದ್ದಾರೆ. ಇಂದು ಅದೇ ರೀತಿಯ ವಾಹನದ ಬಗ್ಗೆ ನಾವಿಂದು ನೋಡಲಿದ್ದೇವೆ.
ಇಲ್ಲೊಂದು ಕಡೆ ಹ್ಯುಂಡೈನ ಪ್ರಸಿದ್ದ ಕಾರು ಮಾದರಿಯಾದ ಕ್ರೇಟಾ ಕಾಂಪಾಕ್ಟ್ ಎಸ್‌ಯುವಿಯನ್ನು ಮಾಡಿಫೈ ಮಾಡಿ ಅದ್ಬುತವಾದ ರೀತಿಯಲ್ಲಿ ಮಾಡಿಫೈ ಮಾಡಿದ್ದಾರೆ. ಹೌದು, ಬೇಸ್ ಇ ವೇರಿಯಂಟ್ ಅನ್ನು ಟಾಪ್ ವೇರಿಯಂಟ್ ಆದ ಅಡ್ವೆಂಚರ್ ಎಡಿಷನ್ ರೀತಿಯಲ್ಲಿ ಮಾಡಿಫೈ ಮಾಡಿದ್ದಾರೆ. ಬೇಸ್ ವೇರಿಯಂಟ್ ಇಂದ ಟಾಪ್ ಮಾಡೆಲ್ ಮಾಡುವುದಕ್ಕಾಗಿ ಹಲವಾರು ಬದಲಾವಣೆಗಳನ್ನು ಈ ಕಾರಿನಲ್ಲಿ ಮಾಡಲಾಗಿದೆ.

ಯ್ಯೂಟ್ಯೂಬ್‌ನ ಆಟೋ ಮೋಟಿವ್ ಚಾನಲ್ ಒಂದರಲ್ಲಿ ಈ ಕ್ರೇಟಾದ ಬೇಸ್ ಇ ವೇರಿಯಂಟ್ ಅನ್ನು ಟಾಪ್ ವೇರಿಯಂಟ್ ಆದ ಅಡ್ವೆಂಚರ್ ಎಡಿಷನ್ ಮಾಡಿರುವುದರ ಬಗ್ಗೆ ವಿವರವಾಗಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದಕ್ಕಾಗಿ ಯಾವೆಲ್ಲಾ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಮುಂಬೈ ಮೂಲದ ಅಂಗಡಿಯೊಂದರಿಂದ ಇದಕ್ಕೆ ಬೇಕಾದ ಆಕ್ಸಸರೀಸ್ ಅನ್ನು ತರಿಸಲಾಗಿದೆ.
ಬೇಸ್ ಇ ವೇರಿಯಂಟ್ ಅನ್ನು ಟಾಪ್ ವೇರಿಯಂಟ್ ಆದ ಅಡ್ವೆಂಚರ್ ಎಡಿಷನ್ ರೀತಿಯಲ್ಲಿ ಬದಲಾಯಿಸಲು ಕಾರಿನ ಒಳಭಾಗ ಮತ್ತು ಹೊರಭಾಗದಲ್ಲಿ ಹಲವಾರು ಆಕ್ಸಸರೀಸ್‌ಗಳನ್ನು ಜೋಡಿಸಲಾಗಿದೆ. ಅದರಲ್ಲಿ ಪ್ರಮುಖವಾದವು ಇದರ ವ್ಹೀಲ್‌ಗಳು. ಇದರ ಬೇಸ್ ವೇರಿಯಂಟ್‌ನಲ್ಲಿದ್ದ ಹದಿನಾರು ಇಂಚ್‌ನ ಸ್ಟೀಲ್ ವ್ಹೀಲ್‌ಗಳನ್ನು ಬದಲಾಯಿಸಿ ಅದರ ಬದಲಾಗಿ ಹದಿನೇಳು ಇಂಚ್‌ನ ವ್ಹೀಲ್‌ಗಳನ್ನು ಜೋಡಿಸಲಾಗಿದೆ. ಮಾತ್ರವಲ್ಲದೇ ಹೊರಭಾಗದಲ್ಲಿ ಬಾಡಿ ಕ್ಲಾಡಿಂಗ್ ಅನ್ನು ಸಹ ಸೇರಿಸಲಾಗಿದೆ.

ಇನ್ನು ಹ್ಯುಂಡೈ ಹೊಸ ಕ್ರೇಟಾ ಫೇಸ್‌ಲಿಫ್ಟ್ ಅನ್ನು ಕೆಲ ದಿನಗಳ ಹಿಂದೆಯಷ್ಟೇ ಲಾಂಚ್ ಮಾಡಲಾಗಿತ್ತು. ಹೊಸ ಕ್ರೆಟಾ ಎಸ್‍ಯುವಿ ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಟ್ರಿಟ್ ಮೆಂಟ್ ನೊಂದಿಗೆ ಬಂದಿದೆ. ಈ ಎಸ್‍ಯುವಿಯು ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಅಂಶಗಳೊಂದಿಗೆ ಪೂರಕವಾದ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಎಲ್ಇಡಿ ಲೈಟಿಂಗ್ ಸಿಸ್ಟಮ್ನೊಂದಿಗೆ ಬರುತ್ತದೆ. ಈ ಎಸ್‍ಯುವಿ ಹಿಂಭಾಗದಲ್ಲಿ ಒಂದೇ ರೀತಿಯ ವಿನ್ಯಾಸದ ಟೈಲ್ ಲೈಟ್‌ಗಳನ್ನು ಹೊಂದಿದೆ.
ಇನ್ನು ಈ ಎಸ್‍ಯುವಿಯಲ್ಲಿ LED ಲೈಟ್ ಬಾರ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ನು ಈ ಎಸ್‍ಯುವಿಯಲ್ಲಿ 17-ಅಥವಾ 18-ಇಂಚಿನ ಚಕ್ರ ಆಯ್ಕೆಗಳೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳನ್ನು ಹೊರತುಪಡಿಸಿ, ಸೈಡ್ ಪ್ರೊಫೈಲ್ ಹಿಂದಿನ ಮಾದರಿಯನ್ನು ಹೋಲುತ್ತದೆ.

ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಇದರಲ್ಲಿ ಮೊದಲಿಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 160PS ಪವರ್ ಅನ್ನು ಉತ್ಪಾದಿಸಿದರೆ, 1.5 ಲೀಟರ್ ಪೆಟ್ರೋಲ್ ಎಂಜಿನ್ 115PS ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದು 116PS ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಕಾರಿನ ಗೇರ್ ಬಾಕ್ಸ್ ಬಗ್ಗೆ ಹೇಳುವುದಾದರೆ ಇದರಲ್ಲಿ 6-ಸ್ಪೀಡ್ ಮ್ಯಾನುವಲ್, iVT (ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್), 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್), ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಸೇರಿವೆ. ಹ್ಯುಂಡೈ ಕ್ರೆಟಾ (Hyundai Creta) ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆಹುಂಡೈ ಕಂಪನಿಯು ತನ್ನ ಜನಪ್ರಿಯ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications