32.12 ಕಿ.ಮೀ ಮೈಲೇಜ್ ಕಾರು ಸ್ಥಗಿತವಾಗಲ್ಲ: ಮಾರುತಿ ಸುಜುಕಿ ಮಾಸ್ಟರ್ ಪ್ಲಾನ್ ಏನು ಗೊತ್ತಾ?
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಹೆಚ್ಚು ಮೈಲೇಜ್ ಕಾರುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲ್ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಮಾರುತಿ ಕಾರುಗಳು ಹೆಚ್ಚಿನ ಮೈಲೇಜ್ ಮತ್ತು ಕಡಿಮೆ ನಿರ್ವಹಣ ವೆಚ್ಚಗಳಿಂದಾಗಿ ಹೆಚ್ಚು ಜನಪ್ರಿಯವಾಗಿವೆ. ಈ ಎರಡೂ ಗುಣಗಳಿರುವ ಮಾರುತಿ ಡಿಜೈರ್ (Maruti Dzire) ಹೆಚ್ಚು ಫ್ಯಾಮಿಲ್ ಕಾರ್ ಮತ್ತು ಟ್ಯಾಕ್ಸ್ ಡ್ರೈವರ್ ಗಳ ಮೆಚ್ಚಿನ ಆಯ್ಕೆಯಾಗಿ ಹೆಚ್ಚು ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ಸೆಡಾನ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಎಸ್‍ಯುವಿಗಳಿಗೆ ಹೆಚ್ಚು ಬೇಡಿಕೆಯನ್ನು ಹೊಂದಿದೆ.
ಆದರೆ ಸೆಡಾನ್‌ಗಳು ಉತ್ತಮ ಪ್ರಯಾಣ ಅನುಭವ ಮತ್ತು ಹೆಚ್ಚು ಬೂಟ್ ಸ್ಪೇಸ್ ಅನ್ನು ಹೊಂದಿರುತ್ತದೆ. ಇದಕ್ಕಾಗಿಯೇ ಟ್ಯಾಕ್ಸಿ ಆಪರೇಟರ್‌ಗಳು ಸೆಡಾನ್‌ಗಳನ್ನು ತುಂಬಾ ಪ್ರೀತಿಸುತ್ತಾರೆ. ಇದೀಗ ಮಾರುತಿ ಸುಜುಕಿಯು ನಾಲ್ಕನೇ ತಲೆಮಾರಿನ ಡಿಜೈರ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ವೇಳೆ ಮಾರುತಿ ಸುಜುಕಿ ಹೊಸ ಜನರೇಷನ್ ಜೊತೆ ಮೂರನೇ ಜನರೇಷನ್ ಮಾರಾಟವನ್ನು ಮುಂದುವರಿಸಲಿದೆ.

ಫ್ಲೀಟ್ ಮತ್ತು ಟ್ಯಾಕ್ಸಿ ಆವೃತ್ತಿಯಾದ ಡಿಜೈರ್ ಟೂರ್ ಎಸ್ ಪ್ರಸ್ತುತ ಜನರೇಷನ್ ಆಧರಿಸಿ ಮುಂದುವರಿಸುತ್ತಾರೆ. ಟೂರ್ ಎಸ್ ಎಂದು ಫ್ಲೀಟ್ ಖರೀದಿದಾರರಿಗೆ ಹಳೆಯದನ್ನು ನೀಡುವಾಗ ಹೊಸ ಮಾದರಿಯನ್ನು ಖಾಸಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಮಾರುತಿಯು ಸ್ಟ್ಯಾಂಡರ್ಡ್ ಡಿಜೈರ್ ಮತ್ತು ಡಿಜೈರ್ ಟೂರ್ ಎಸ್ (Maruti Dzire Tour S) ಮಾರಾಟ ವರದಿಯಲ್ಲಿ ಪ್ರತ್ಯೇಕವಾಗಿ ಪ್ರಕಟಿಸುವುದಿಲ್ಲ.
ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷ ಮಾರಾಟವಾದ 1.60 ಲಕ್ಷ ಡಿಜೈರ್‌ನಲ್ಲಿ 60,000 ಯುನಿಟ್‌ಗಳನ್ನು ಟೂರ್ ರೂಪಾಂತರ ಹೊಂದಿದೆ ಎಂದು ಕಂಪನಿ ಹೇಳಿದೆ. ಇದರರ್ಥ ಕಂಪನಿಯು ತಿಂಗಳಿಗೆ ಟೂರ್ ಎಸ್‌ನ ಸರಾಸರಿ 5,000 ಯುನಿಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಿಜಕ್ಕೂ ದೊಡ್ಡ ಸಂಖ್ಯೆಯಾಗಿದೆ ಎಂದು ಹೇಳಬಹುದು.
ಮಾರುತಿ ಸುಜುಕಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಪ್ರತಿಸ್ಪರ್ಧಿಗಳು ಟಾಟಾ ಟಿಗೋರ್, ಸರಾಸರಿ 1,300 ಯುನಿಟ್‌ಗಳನ್ನು, ಹೋಂಡಾ ಅಮೇಜ್ 2,300 ಯುನಿಟ್‌ಗಳನ್ನು ಮತ್ತು ಹುಂಡೈ ಔರಾ 4,500 ಯುನಿಟ್‌ಗಳನ್ನು ತಿಂಗಳಿಗೆ ಮಾರಾಟ ಮಾಡುತ್ತವೆ. ಇದರ ಮಾರಾಟ ವರದಿಯನ್ನು ನೋಡಿದರೆ ಮಾರುತಿ ಸುಜುಕಿ ಡಿಜೈರ್ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಲ್ಲಿ ಹೆಚ್ಚಾಗಿ ಉಬರ್ ಮತ್ತು ಓಲಾ ಟ್ಯಾಕ್ಸಿಗಳಾಗಿ ಮಾರುತಿ ಡಿಜೈರ್ ಟೂರ್ ಎಸ್ ಮಾದರಿಯನ್ನು ಬಳಸುತ್ತಾರೆ.
ಸಿಎನ್‌ಜಿ ಮತ್ತು ಪೆಟ್ರೋಲ್ ವಾಹನಗಳ ಲಭ್ಯತೆಯು ಟ್ಯಾಕ್ಸಿ ನಿರ್ವಾಹಕರಿಗೆ ವರದಾನವಾಗಿದೆ ಎಂದು ಹೇಳಬಹುದು. ದೇಶದಲ್ಲಿ ಅತ್ಯಂತ ಇಂಧನ-ಸಮರ್ಥ ಎಂಟ್ರಿ ಲೆವೆಲ್ ಟ್ಯಾಕ್ಸಿ ಎಂದು ಹೇಳಿಕೊಳ್ಳಲಾಗಿದ್ದು, ಟೂರ್ ಎಸ್ ಪ್ರಸ್ತುತ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಪೆಟ್ರೋಲ್ ಅಥವಾ ಸಿಎನ್‌ಜಿ ಎಂಜಿನ್ ಆಯ್ಕೆಗಳೊಂದಿಗೆ ಹೊಸ ಡಿಜೈರ್ ಟೂರ್ ಎಸ್ ಟ್ಯಾಕ್ಸಿ ಮಾದರಿಯನ್ನು ಖರೀದಿಸಬಹುದು.
ಟೂರ್ ಎಸ್ ಬ್ಯಾಡ್ಜ್ ಸೇರ್ಪಡೆಯ ಹೊರತಾಗಿ, ಕಾರು ಹೊರಭಾಗದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಪಡೆಯುವುದಿಲ್ಲ. ಆದರೆ, ಮಾರುತಿಯ ಟ್ಯಾಕ್ಸಿ ಸೆಡಾನ್ ಎಲ್ಲಾ ಆಕರ್ಷಕ ಫೀಚರ್ಸ್ ಗಳೊಮ್ದಿಗೆ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಭ್ಯವಿರುತ್ತದೆ. ಆದ್ದರಿಂದ ನೀವು ಕೈಗೆಟುಕುವ ಬೆಲೆಯಲ್ಲಿ ವಾಹನವನ್ನು ಖರೀದಿಸಬಹುದು. ಪ್ರಸ್ತುತ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಡಿಸೈರ್ ಟೂರ್ ಎಸ್ ಭಾರತದಲ್ಲಿ 6.51 ಲಕ್ಷದಿಂದ 7.46 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ.
ಇನ್ನು ಹೊಸ ನಾಲ್ಕನೇ ಮಾರುತಿ ಸುಜುಕಿ ಡಿಜೈರ್ ಕಾರು ಜೈರ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಆಟೋಮ್ಯಾಟಿಜ್ ಹೆಡ್ ಲ್ಯಾಂಪ್‌ಗಳು ಮತ್ತು ಹಿಂಭಾಗದ ಎಸಿ ವೆಂಟ್ ಗಳಂತಹ ಫೀಚರ್ಸ್ ಗಳೊಂದಿಗೆ ಬರುತ್ತಿದೆ.


Click it and Unblock the Notifications