ಹೋಂಡಾ ಅಮೇಜ್‌ನ ಕಾಪಿ ಮಾಡಿದೆಯೇ ಮಾರುತಿ ಡಿಜೈರ್? ಯಾವುದು ಬೆಸ್ಟ್‌... ವಿಶೇಷತೆಗಳೇನು?

ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಬಹುನಿರೀಕ್ಷಿತ ಡಿಜೈರ್ (Maruti Dzire) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಡಿಜೈರ್ ಈ ಬಾರಿ ಸಂಪೂರ್ಣ ಹೊಸ ಲುಕ್‌ನಲ್ಲಿ ಬಿಡುಗಡೆಯಾಗಿದ್ದು, ಹಳೆಯ ಡಿಜೈರ್‌ಗೆ ಹೋಲಿಸಿದರೆ ಪ್ರೀಮಿಯಂ ಲುಕ್‌ ಪಡೆದುಕೊಂಡಿದೆ. ಆದ್ರೆ ಇದು ಹೋಂಡಾ ಅಮೇಜ್ (Honda Amaze)ಗೆ ತೀರಾ ಹತ್ತಿರವಾದ ವಿನ್ಯಾಸವಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಸೆಡಾನ್ ವಿಭಾಗದಲ್ಲಿ ಎರಡೂ ಕಾರುಗಳು ಸಹ ಪ್ರತಿಸ್ಪರ್ಧಿಗಳಾಗಿದ್ದು, ತಮ್ಮದೇ ಆದ ಫೀಚರ್ಸ್ ಹಾಗೂ ವಿಶೇಷತೆಗಳನ್ನು ಪಡೆದುಕೊಂಡಿವೆ. ಬನ್ನಿ ಹಾಗಾದ್ರೆ ಎರಡೂ ಕಾರುಗಳ ಬೆಲೆ ಹಾಗೂ ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಬೆಲೆ: ಹೊಸ ಮಾರುತಿ ಡಿಜೈರ್ ಎಕ್ಸ್ ಶೋರೂಂ ದರದಂತೆ ಬೇಸ್‌ ವೇರಿಯೆಂಟ್ ರೂ. 6.79 ಲಕ್ಷಗಳಿಂದ ಟಾಪ್‌ ವೇರಿಯೆಂಟ್ 10.14 ಲಕ್ಷ ರೂ. ಗಳವರೆಗೆ ಇದೆ. ಹೋಂಡಾ ಅಮೇಜ್ ಬೆಲೆಯು ಎಕ್ಸ್ ಶೋರೂಂ ದರದಂತೆ ಬೇಸ್‌ ವೇರಿಯೆಂಟ್ ರೂ. 7.20 ಲಕ್ಷದಿಂದ ಟಾಪ್‌ ವೇರಿಯೆಂಟ್‌ಗೆ ರೂ. 9.96 ಲಕ್ಷವಿದೆ. ಶೀಘ್ರದಲ್ಲೇ ಹೋಂಡಾ ತನ್ನ ಅಮೇಜ್ ಫೇಸ್‌ಲಿಫ್ಟ್‌ ಅನ್ನು ಸಹ ಬಿಡುಗಡೆ ಮಾಡಲಿದೆ.

maruti-dzire-vs-honda-amaze-price-features-variants-comparison

ವೇರಿಯೆಂಟ್‌ಗಳು: ಮಾರುತಿ ಸುಜುಕಿಯ ಹೊಸ ಡಿಜೈರ್ ಅನ್ನು ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ ಪ್ಲಸ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ಹೋಂಡಾ ಅಮೇಜ್ ವಿಷ್ಯಕ್ಕೆ ಬಂದರೆ ಇ, ಎಸ್ ಮತ್ತು ವಿಎಕ್ಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಎಲೈಟ್ ಆವೃತ್ತಿಯನ್ನು ಟಾಪ್-ಆಫ್-ಲೈನ್ ವಿಎಕ್ಸ್ ಟ್ರಿಮ್‌ನಿಂದ ಪಡೆಯಲಾಗಿದೆ.

ವೈಶಿಷ್ಟ್ಯಗಳು: ಹೋಂಡಾ ಅಮೇಜ್ ಕಾರಿನಲ್ಲಿ 7 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ನೀಡಲಾಗಿದೆ. ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್ಲಾ ಸೀಟುಗಳಿಗೆ ಸೀಟ್ ಬೆಲ್ಟ್ ರಿಮೈಂಡರ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒ ಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಇವೆ.

maruti-dzire-vs-honda-amaze-price-features-variants-comparison

ಇತ್ತ ಮಾರುತಿ ಡಿಜೈರ್‌ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಬೆಂಬಲದೊಂದಿಗೆ 9 - ಇಂಚಿನ ಟಚ್ ಸ್ಕ್ರೀನ್, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ ಎಸಿ, ಅನಲಾಗ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್, ಸಿಂಗಲ್ ಪ್ಯಾನ್ ಸನ್‌ರೂಫ್ ನೀಡಲಾಗಿದೆ. ಸುರಕ್ಷತೆಗಾಗಿ 6 ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಎಂಜಿನ್: ಹೋಂಡಾ ಅಮೇಜ್ 1.2 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು , ಈ ಎಂಜಿನ್ 90 ಪಿಎಸ್ ಪವರ್ ಮತ್ತು 110 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

maruti-dzire-vs-honda-amaze-price-features-variants-comparison

ಹೊಸ ತಲೆಮಾರಿನ ಡಿಜೈರ್ 1.2 - ಲೀಟರ್ 3 - ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 82 ಬಿಹೆಚ್ ಪವರ್ ಮತ್ತು 112 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿಯೊಂದಿಗೆ ಬರುತ್ತದೆ. ಹಾಗೆಯೇ ಡಿಜೈರ್ ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿದೆ. ಇದನ್ನು 5 - ಸ್ಪೀಡ್ ಮ್ಯಾನುವಲ್‌ನೊಂದಿಗೆ ಮಾತ್ರ ಹೊಂದಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 16, 2024, 15:17 [IST]
English summary
Maruti dzire vs honda amaze price features variants comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+