ಬೆಸ್ಟ್ ಕಾರುಗಳಿಗೆ ಬೆವರಿಳಿಸಿದ ಮಾನ್‌ಸ್ಟರ್ ಕಾರು: 7.51 ಲಕ್ಷ ಆರಂಭಿಕ ಬೆಲೆ, ಪ್ರೀಮಿಯಂ ಇಂಟೀರಿಯರ್!
ಭಾರತದಲ್ಲಿ ಎಸ್‌ಯುವಿಗಳ ಪ್ರಾಶಸ್ತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾರುತಿ ಸುಜುಕಿ ಫ್ರಾಂಕ್ಸ್ ಗಾತ್ರದ ದೃಷ್ಟಿಯಿಂದ ಹಾಗೂ ತನ್ನ ಹೈಯರ್ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಹೆಚ್ಚಿನ ಎತ್ತರದಿಂದಾಗಿ ತನ್ನ ಒಡಹುಟ್ಟಿದ ಬಲೆನೊಗೆ ಸಖತ್ ಪೈಪೋಟಿ ನೀಡುತ್ತಿದೆ. ಮಾರುತಿ ಕಂಪನಿಯು 2023 ರ ಏಪ್ರಿಲ್‌ನಲ್ಲಿ ಫ್ರಾಂಕ್ಸ್ ಅನ್ನು ಬಿಡುಗಡೆ ಮಾಡಿತ್ತು, ಇದು ಬಲೆನೊದೊಂದಿಗೆ ಹಲವು ವಿಷಯಗಳಲ್ಲಿ ಪ್ರೇರಿತವಾಗಿದ್ದರೂ, ತಾಂತ್ರಿಕವಾಗಿ ಇದನ್ನು ಕಾಂಪ್ಯಾಕ್ಟ್ ಎಸ್‌ಯುವಿಯಂತೆ ಪರಿಗಣಿಸಲಾಗಿದೆ. ಈ ಕಾರು ಸದ್ಯ ಬಲೋನೊವನ್ನು ಹಿಂದಿಕ್ಕುವ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸುತ್ತಿದೆ.
ಮಾರುತಿ ಸುಜುಕಿ ಬಲೆನೊ ಬೆಲೆವು ಭಾರತದ ಎಕ್ಸ್ ಶೋರೂಂ ದರದಂತೆ ರೂ. 6.66 ಲಕ್ಷದಿಂದ ರೂ. 9.83 ಲಕ್ಷಗಳವರೆಗೆ ಇದೆ. ಇನ್ನು ಫ್ರಾಂಕ್ಸ್ ವಿಷಯಕ್ಕೆ ಬಂದರೆ ರೂ. 7.51 ಲಕ್ಷದಿಂದ ರೂ. 13.03 ಲಕ್ಷವರೆಗೆ ಇದೆ. ಎರಡೂ ಕಾರುಗಳ ವಿನ್ಯಾಸ ಬಾಹ್ಯವಾಗಿ ವಿಭಿನ್ನವಾಗಿದ್ದರೂ, ಅವುಗಳ ಒಳಭಾಗದಲ್ಲಿ ಒಂದೇ ರೀತಿಯ ವಿನ್ಯಾಸವನ್ನು ನೀಡಲಾಗಿದೆ.

ಎರಡೂ ಕಾರುಗಳು ಉತ್ತಮವಾಗಿ ವಿನ್ಯಾಸಗೊಂಡಿರುವುದರಿಂದ, ಈ ಎರಡೂ ಮಾರುತಿ ಕಾರುಗಳಿಗೆ ವಿಶೇಷ ಮಾರಾಟ ಮತ್ತು ಗ್ರಾಹಕ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿವೆ. ಆದ್ರೆ ನಗರ ಖರೀದಿದಾರರಲ್ಲಿ ಫ್ರಾಂಕ್ಸ್ ಮೇಲೆ ಒಲವು ಹೆಚ್ಚಾಗಿದೆ. ಫ್ರಾಂಕ್ಸ್‌ನಲ್ಲಿ ದೊಡ್ಡ ಗ್ರಿಲ್, ಬಾಡಿ ಕ್ಲಾಡಿಂಗ್, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಬಲೆನೊಕ್ಕಿಂತ ಹೆಚ್ಚು ಎತ್ತರವು ಹೆಚ್ಚಾಗಿ ನಗರ ಪ್ರಯಾಣಕ್ಕೆ ಎಸ್‌ಯುವಿ ಆಯ್ಕೆಯನ್ನು ಹುಡುಕುತ್ತಿರುವ ಗ್ರಾಹಕರನ್ನು ಆಕರ್ಷಿಸಲು ಸಹಾಯ ಮಾಡಿದೆ.
2024 ರ ಮೊದಲ ತ್ರೈಮಾಸಿಕ, ಎರಡನೇ ತ್ರೈಮಾಸಿಕ ಮತ್ತು ನಾಲ್ಕನೇ ತ್ರೈಮಾಸಿಕ ಮಾರಾಟದಲ್ಲಿ ಫ್ರಾಂಕ್ಸ್ ಬಹುತೇಕ ಬಲೆನೋ ಆಸುಪಾಸಿನಲ್ಲಿ ಇದ್ದು, ಮೂರನೇ ತ್ರೈಮಾಸಿಕದಲ್ಲಿ ಮಾತ್ರ ಬಲೆನೋವನ್ನು ಹಿಂದಿಕ್ಕಿ ಫ್ರಾಂಕ್ಸ್ ಹೆಚ್ಚಿನ ಮಾರಾಟವನ್ನು ಕಂಡಿದೆ. ಯಾವ ತ್ರೈಮಾಸಿಕದಲ್ಲಿ ಯಾವ ಕಾರು ಎಷ್ಟು ಮಾರಾಟವನ್ನು ಕಂಡಿದೆ ಎಂಬುದನ್ನು ಕೆಳಗೆ ನೋಡೋಣ.

ಮಾರುತಿ ಸುಜುಕಿ ಬಲೆನೊ 2024 ರ ಮೊದಲ ತ್ರೈಮಾಸಿಕದಲ್ಲಿ 52,735 ಯುನಿಟ್ ಕಾರುಗಳು ಮಾರಾಟವಾಗಿದ್ದರೇ, ಮಾರುತಿ ಸುಜುಕಿ ಫ್ರಾಂಕ್ಸ್ 40,342 ಯುನಿಟ್ ಕಾರುಗಳು ಮಾರಾಟವಾಗಿವೆ. ಎರಡನೇ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಬಲೆನೊ 41,786 ಯುನಿಟ್ ಕಾರುಗಳು ಮಾರಾಟವಾಗಿದ್ದರೇ, ಮಾರುತಿ ಸುಜುಕಿ ಫ್ರಾಂಕ್ಸ್ 36,655 ಯುನಿಟ್ ಕಾರುಗಳು ಮಾರಾಟವಾಗಿವೆ.
ಮೂರನೇ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಬಲೆನೊ 36,086 ಯುನಿಟ್ ಕಾರುಗಳು ಮಾರಾಟವಾದರೇ, ಮಾರುತಿ ಸುಜುಕಿ ಫ್ರಾಂಕ್ಸ್ ಬರೋಬ್ಬರಿ 37,186 ಯುನಿಟ್ ಕಾರುಗಳು ಮಾರಾಟವಾಗಿವೆ. ನಾಲ್ಕನೇ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಬಲೆನೊ 32,375 ಯುನಿಟ್ ಕಾರುಗಳು ಮಾರಾಟವಾದರೆ, ಮಾರುತಿ ಸುಜುಕಿ ಫ್ರಾಂಕ್ಸ್ 31,301 ಯುನಿಟ್ ಕಾರುಗಳು ಮಾರಾಟವಾಗಿವೆ.

ಎರಡೂ ಕಾರುಗಳಲ್ಲಿ 1.2 ಲೀಟರ್ ಡ್ಯುಯಲ್ - ಜೆಟ್ ಡ್ಯುಯಲ್ - ವಿವಿಟಿ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, 89.73 ಪಿಎಸ್ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. 5-ಸ್ಪೀಡ್ ಎಂಟಿ ಹಾಗೂ 5-ಸ್ಪೀಡ್ ಎಎಂಟಿ ಆಯ್ಕೆಗಳೊಂದಿಗೆ ನೀಡಲಾಗಿದೆ. ಈ ಎಂಜಿನ್ ಸಿಎನ್‌ಜಿ ಆಯ್ಕೆಯೊಂದಿಗೆ 77.5 ಪಿಎಸ್ ಪವರ್ 98.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಪವರ್ ಮತ್ತು ಪರ್ಫಾಮೆನ್ಸ್ ಬಯಸುವವರಿಗಾಗಿ ಮಾರುತಿ ಫ್ರಾಂಕ್ಸ್‌ನಲ್ಲಿ 1.0 ಲೀಟರ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಕೂಡ ನೀಡಲಾಗುತ್ತಿದ್ದು, ಈ ಎಂಜಿನ್ 100.06 ಪಿಎಸ್ ಪವರ್ ಹಾಗೂ 147.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿ ಆಯ್ಕೆಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications