ಹೊಸ ಕಾರು ಖರೀದಿಸಬೇಕೇ? ಸ್ವಲ್ಪ ಕಾಯಿರಿ.. ಬರುತ್ತಿವೆ ಬಹುನಿರೀಕ್ಷಿತ ಮಾರುತಿ ಕಾರುಗಳು
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಮಾರುತಿ ಸುಜುಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಮತ್ತು ಟಾಟಾ ಕಾರುಗಳು ಭರ್ಜರಿಯಾಗಿ ಪೈಪೋಟಿಯನ್ನು ನೀಡುತ್ತಿದೆ. ಇದರಿಂದ ಮಾರುತಿ ಸುಜುಕಿಯು ಹೊಸ ಮಾದರಿಗಳ ಜೊತೆ ತನ್ನ ಜನಪ್ರಿಯ ಕಾರುಗಳನ್ನು ನವೀಕರಿಸುತ್ತಿರುತ್ತಾರೆ. ಬ್ರ್ಯಾಂಡ್ ನವೀನತೆ ಮತ್ತು ವಿಸ್ತರಣೆಯನ್ನು ಮುಂದುವರೆಸುತ್ತಿರುವುದರಿಂದ ಅವರ ಹೊಸ ಮಾದರಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿರುವ ಬಹಿನಿರೀಕ್ಶಿತ ಮಾರುತಿ ಸುಜುಕಿ ಕಾರುಗಳ ಬಗ್ಗೆ ಮಾಹಿತಿ ಇಲ್ಲಿವೆ.
ಮಾರುತಿ ಡಿಜೈರ್: ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿಸುವ ನಿಟ್ಟಿನಲ್ಲಿ ನವೀಕರಿಸಿದ ಡಿಜೈರ್ (Dzire) ಸೆಡಾನ್‌ನ್ನು ಬಿಡುಗಡೆಗೊಳಿಸಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಈ ನೂತನ ಕಾರು, ಜನವರಿಯಲ್ಲಿ ಆಯೋಜಿಸಿರುವ 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ (Bharat Mobility Global Expo) ಅನಾವರಣಗೊಳ್ಳುವ ನಿರೀಕ್ಷೆಯಿದೆ. ಇದರ ಒಳ ಹಾಗೂ ಹೊರಭಾಗದ ವಿನ್ಯಾಸ (ಡಿಸೈನ್) ಬಹುತೇಕ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗೆ ಹೋಲಿಕೆಯಾಗುವ ಸಾಧ್ಯತೆಯಿದೆ.

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದುಕೊಂಡಿರಲಿದೆ. ಬಹುತೇಕ ಸನ್‌ರೂಫ್ ಆಯ್ಕೆಯಲ್ಲಿ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ. ಈಚೆಗೆ, ಈ ಕಾರು ರಸ್ತೆಯಲ್ಲಿಯೂ ಪರೀಕ್ಷಾರ್ಥ ಸಂಚಾರ ನಡೆಸುವಾಗಲೂ ಕಂಡುಬಂದಿತ್ತು. ಆಗಿನ ಸ್ಪೈ ಸ್ಪೈ ಫೋಟೋಗಳಲ್ಲಿ ವಿನ್ಯಾಸ ಕುರಿತಂತೆ ಹಲವು ಅಂಶಗಳು ಬಹಿರಂಗಗೊಂಡಿದ್ದವು. ನೂತನ ಡಿಜೈರ್ ಸೆಡಾನ್‌ನ ಗ್ರಿಲ್ ಮಧ್ಯೆ ಸುಜುಕಿ ಲೋಗೋ ಹೊಂದಿರುವುದನ್ನು ಗುರುತಿಸಬಹುದಾಗಿತ್ತು.
ಹೊಸ ಡಿಜೈರ್ ಕಾರು ಸ್ವಿಫ್ಟ್‌ನಲ್ಲಿರುವಂತೆ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಇದರೊಟ್ಟಿಗೆ ಡುಯಲ್-ಟೋನ್ ಅಲಾಯ್ ವೀಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ವಿನೂತನವಾಗಿ ಮರುವಿನ್ಯಾಸಗೊಳಿಸಲಾದ ಬಂಪರ್‌ನ್ನು ಹೊಂದಿರಬಹುದು ಎನ್ನಲಾಗಿದೆ. ಒಳಭಾಗದ ಕ್ಯಾಬಿನ್ ಕೂಡ ಹೆಚ್ಚು ಅತ್ಯಾಧುನಿಕವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಹೊಸ ಮಾರುತಿ ಸುಜುಕಿ ಡಿಜೈರ್ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ.

ಹೊಸ ಮಾರುತಿ ಡಿಜೈರ್ ಸೆಡಾನ್ 1.2-ಲೀಟರ್ ಝಡ್-ಸೀರೀಸ್ ನ್ಯಾಚುರಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿರಲಿದ್ದು, 82 ಬಿಹೆಚ್‍ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 108 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ ಎಂದು ಹೇಳಲಾಗಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿಯೂ ದೊರೆಯುವ ನಿರೀಕ್ಷೆಯಿದೆ.
ಮಾರುತಿ eVX: ಮಾರುತಿ ಸುಜುಕಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೆ ವಿಳಂಭ ಮಾಡಲು ಕಾರಣವಿದೆ. ಈಗಿರುವ ಎಲ್ಲಾ ಬ್ರಾಂಡ್‌ಗಳ ಇವಿ ಕಾರುಗಳೊಂದಿಗೆ ಪೈಪೋಟಿ ನೀಡಲು ಉತ್ತಮ ರೇಂಜ್ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಕಾರನ್ನು ತರಬೇಕಾಗುತ್ತದೆ. ಹಾಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಟು ಸಾಕಷ್ಟು ಸಂಶೋಧನೆ ನಡೆಸಿ ಕಾರನ್ನು ಹೊರತರುತ್ತಿದ್ದಾರೆ. ಮೂಲಗಳ ಪ್ರಕಾರ 2025ರ ಮೊದಲಾರ್ಧದಲ್ಲಿ ಕಾರು ಬಿಡುಗಡೆಯಾಗಲಿದೆ.

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ನಿರ್ಮಿಸುತ್ತಿರುವ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಕೇವಲ ಭಾರತಕ್ಕಾಗಿ ಮಾತ್ರ ನಿರ್ಮಿಸುತ್ತಿಲ್ಲ. ಈ 500 ಕಿ.ಮೀ ರೇಂಜ್ ನೀಡುವ ಇವಿ ಕಾರನ್ನು ಯುರೋಪ್ ಮತ್ತು ಜಪಾನ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಗುರಿಯನ್ನು ಹೊಂದಿದೆ. ಇದು ಇವಿ ಉತ್ಪಾದನೆ ಮತ್ತು ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
ಮಾರುತಿ ಸುಜುಕಿ ಕೇವಲ ಭಾರತದತ್ತ ಗಮನ ಹರಿಸುತ್ತಿಲ್ಲ, ಈ 500 ಕಿ.ಮೀ ಶ್ರೇಣಿಯ ಇವಿಯನ್ನು ಯುರೋಪ್ ಮತ್ತು ಜಪಾನ್ ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಗುರಿಯನ್ನು ಹೊಂದಿದೆ. ಈಗಾಗಲೇ ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಹ್ಯುಂಡೈ, ಎಂಜಿನಂತಹ ಬ್ರಾಂಡ್‌ಗಳು ಇವಿ ಕಾರುಗಳನ್ನು ಪರಿಚಯಿಸಿವೆ. ಇನ್ನೂ ತಡವಾದ್ರೆ ಇವಿ ವಿಭಾಗದಲ್ಲಿ ಮುಂದುವರಿಯುವುದು ಕಷ್ಟವೆಂದು ಅರಿತಿರುವ ಮಾರುತಿ ಸುಜುಕಿ ಕೊನೆಗೂ ಮೊದಲ ಇವಿ ಕಾರು ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications