ಒಂದು ರೂ. ಖರ್ಚಿಲ್ಲದೇ ದಿನಕ್ಕೆ 500 ಕಿ.ಮೀ ಓಡುವ ಮಾರುತಿ ಕಾರು ಬಿಡುಗಡೆಗೆ ಸಜ್ಜು

ಭಾರತೀಯ ವಾಹನ ಉದ್ಯಮದಲ್ಲಿ ಮಾರುತಿ ಸುಜುಕಿ ಕಂಪನಿಯು ಅಗ್ರಸ್ಥಾನದಲ್ಲಿ ಮುನ್ನುಗ್ಗುತ್ತಿದೆ. ಸುರಕ್ಷತೆಯೊಂದನ್ನು ಹೊರತುಪಡಿಸಿ ಅಗ್ಗದ ಬೆಲೆ, ಉತ್ತಮ ಎಂಜಿನ್, ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳನ್ನು ಮಾರುತಿ ಹೊಂದಿದೆ. ಆದ್ರೆ ಎಲೆಕ್ಟ್ರಿಕ್ ಕಾರುಗಳ ವಿಷಯದಲ್ಲಿ ಮಾತ್ರ ಹಿಂದುಳಿದಿದ್ದು, ಈವರೆಗೆ ಒಂದು ಕಾರನ್ನು ಕೂಡ ಬಿಡುಗಡೆ ಮಾಡಿಲ್ಲ. ಈಗಾಗಲೇ ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಹ್ಯುಂಡೈ, ಎಂಜಿನಂತಹ ಬ್ರಾಂಡ್‌ಗಳು ಇವಿ ಕಾರುಗಳನ್ನು ಪರಿಚಯಿಸಿವೆ. ಇನ್ನೂ ತಡವಾದ್ರೆ ಇವಿ ವಿಭಾಗದಲ್ಲಿ ಮುಂದುವರಿಯುವುದು ಕಷ್ಟವೆಂದು ಅರಿತಿರುವ ಮಾರುತಿ ಸುಜುಕಿ ಕೊನೆಗೂ ಮೊದಲ ಇವಿ ಕಾರು ಬಿಡುಗಡೆಗೆ ಸಜ್ಜಾಗಿದೆ.

ಮಾರುತಿ ಸುಜುಕಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೆ ವಿಳಂಭ ಮಾಡಲು ಕಾರಣವಿದೆ. ಈಗಿರುವ ಎಲ್ಲಾ ಬ್ರಾಂಡ್‌ಗಳ ಇವಿ ಕಾರುಗಳೊಂದಿಗೆ ಪೈಪೋಟಿ ನೀಡಲು ಉತ್ತಮ ರೇಂಜ್ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಕಾರನ್ನು ತರಬೇಕಾಗುತ್ತದೆ. ಹಾಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಟು ಸಾಕಷ್ಟು ಸಂಶೋಧನೆ ನಡೆಸಿ ಕಾರನ್ನು ಹೊರತರುತ್ತಿದ್ದಾರೆ. ಮೂಲಗಳ ಪ್ರಕಾರ 2025ರ ಮೊದಲಾರ್ಧದಲ್ಲಿ ಕಾರು ಬಿಡುಗಡೆಯಾಗಲಿದೆ.

maruti-suzuki-all-set-to-launch-ev-with-500-km-range

ಮಾರುತಿ ಸುಜುಕಿ ಭಾರತದಲ್ಲಿ ನಿರ್ಮಿಸುತ್ತಿರುವ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಕೇವಲ ಭಾರತಕ್ಕಾಗಿ ಮಾತ್ರ ನಿರ್ಮಿಸುತ್ತಿಲ್ಲ. ಈ 500 ಕಿ.ಮೀ ರೇಂಜ್ ನೀಡುವ ಇವಿ ಕಾರನ್ನು ಯುರೋಪ್ ಮತ್ತು ಜಪಾನ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಗುರಿಯನ್ನು ಹೊಂದಿದೆ. ಇದು ಇವಿ ಉತ್ಪಾದನೆ ಮತ್ತು ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಸಿಯಾಮ್ ವಾರ್ಷಿಕ ಸಮಾವೇಶದಲ್ಲಿ, ಮಾರುತಿ ಸುಜುಕಿಯ ಎಂಡಿ ಮತ್ತು ಸಿಇಒ ಹಿಸಾಶಿ ಟಕುಚಿ ಕಂಪನಿಯ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ವಾಹನ (ಇವಿ) ಮಾರ್ಗಸೂಚಿಯ ಯೋಜನೆಗಳನ್ನು ಅನಾವರಣಗೊಳಿಸಿದರು. ಅವರ ಭಾಷಣದ ಮುಖ್ಯಾಂಶಗಳಲ್ಲಿ, 60 ಕಿಲೋವ್ಯಾಟ್ ಬ್ಯಾಟರಿಯಿಂದ ಚಾಲಿತವಾದ 500 ಕಿ.ಮೀ ರೇಂಜ್ ನೀಡುವ ಹೈ-ಸ್ಪೆಸಿಫಿಕೇಶನ್ ಇವಿಯನ್ನು ಘೋಷಿಸಿದ್ದಾರೆ.

maruti-suzuki-all-set-to-launch-ev-with-500-km-range

ಇವಿ ಉತ್ಪಾದನೆಗೆ ನಿರ್ಣಾಯಕವಾದ ಎಲೆಕ್ಟ್ರಾನಿಕ್ಸ್ ಮತ್ತು ಅರೆವಾಹಕಗಳ (ಸೆಮಿಕಂಡಕ್ಟರ್) ಕ್ಷೇತ್ರದಲ್ಲಿ ಸ್ಥಳೀಯ ಉತ್ಪಾದನೆಯ ಮಹತ್ವವನ್ನು ಟೇಕುಚಿ ಒತ್ತಿ ಹೇಳಿದ್ದಾರೆ. ಮಾರುತಿ ಸುಜುಕಿ ಕೇವಲ ಭಾರತದತ್ತ ಗಮನ ಹರಿಸುತ್ತಿಲ್ಲ, ಈ 500 ಕಿ.ಮೀ ಶ್ರೇಣಿಯ ಇವಿಯನ್ನು ಯುರೋಪ್ ಮತ್ತು ಜಪಾನ್ ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಗುರಿಯನ್ನು ಹೊಂದಿದೆ.

ಇದು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಅಲ್ಲದೇ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲು, ಮಾರುತಿ ಸುಜುಕಿ ಬ್ರಾಂಡ್‌ ತನ್ನ ವ್ಯಾಪಕವಾದ ಸೇವಾ ಜಾಲವನ್ನು ದೃಢವಾದ ಮಾರಾಟದ ನಂತರದ ಬೆಂಬಲಕ್ಕಾಗಿ ಬಳಸಿಕೊಳ್ಳಲು ಯೋಜಿಸಿದೆ ಎಂದು ಕೂಡ ಹೇಳಿದ್ದಾರೆ.

maruti-suzuki-all-set-to-launch-ev-with-500-km-range

ಇದಲ್ಲದೆ, ಇಂಗಾಲದ ಹೊರಸೂಸುವಿಕೆ ಮತ್ತು ತೈಲ ಬಳಕೆಯನ್ನು ಕಡಿಮೆ ಮಾಡುವ ಕಾರ್ಯತಂತ್ರದ ಭಾಗವಾಗಿ ಕಂಪನಿಯು ಹೈಡ್ರೋಜನ್ ಇಂಧನ ಕೋಶಗಳು, ಸ್ಟ್ರಾಂಗ್ ಹೈಬ್ರಿಡ್‌ ಮತ್ತು ಜೈವಿಕ ಇಂಧನಗಳು ಸೇರಿದಂತೆ ಇತರ ಸುಸ್ಥಿರ ಪರಿಹಾರಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಸಿಇಒ ಹಿಸಾಶಿ ಟಕುಚಿ ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 11, 2024, 10:10 [IST]
English summary
Maruti suzuki all set to launch ev with 500 km range
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+