34 Km ಮೈಲೇಜ್: 3.99 ಲಕ್ಷದ ಹೊಸ ಆಲ್ಟೊ ಕಾರು ಖರೀದಿಸಬೇಕೇ, ಬಿಗ್ ಡಿಸ್ಕೌಂಟ್.. ಆನ್-ರೋಡ್ ಬೆಲೆಯೇನು, EMI ಎಷ್ಟು?

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಅರೆನಾ ಡೀಲರ್‌ಶಿಪ್ ಮೂಲಕ ಮಾರಲ್ಪಡುವ ಜನಪ್ರಿಯ ಕಾರುಗಳ ಪೈಕಿ, ಆಲ್ಟೊ ಕೆ10 (Alto K10) ಪ್ರಮುಖವಾಗಿದೆ. ಇದೊಂದು ಪುಟ್ಟ ಹ್ಯಾಚ್‌ಬ್ಯಾಕ್ ಆಗಿದ್ದು, ಅತಿಕಡಿಮೆ ಬೆಲೆಗೆ ಖರೀದಿಗೆ ದೊರೆಯುತ್ತದೆ. ಅದರಲ್ಲೂ ಸಣ್ಣ ಕುಟುಂಬಗಳಿಗೆ ಹೆಚ್ಚು ಸೂಕ್ತವಾಗಿವೆ. ನೀವು ದಸರಾ & ದೀಪಾವಳಿ ಹಬ್ಬಕ್ಕೆ ಹೊಸ ಕಾರನ್ನು ಖರೀದಿ ಮಾಡಲು ಸಾಧ್ಯವಾಗಲಿಲ್ಲ.. ಈಗ ನೂತನ ಕಾರೊಂದನ್ನು ಮನೆಗೆ ತರಬೇಕು ಅಂದುಕೊಂಡಿದ್ದರೆ, ಆಲ್ಟೋ ಕೆ10 ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಈ ಹೊಸ ಕಾರು ಪಡೆದಿರುವ ರಿಯಾಯಿತಿ, ಮೈಲೇಜ್, ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಮಾರುತಿ ಸುಜುಕಿ ಆಲ್ಟೋ ಕೆ10 (Maruti Suzuki Alto K10) ಹ್ಯಾಚ್‌ಬ್ಯಾಕ್, ಈ ನವೆಂಬರ್‌ನಲ್ಲಿ ಭರ್ಜರಿ ಹಣಕಾಸಿನ ಪ್ರಯೋಜನಗಳನ್ನು ಪಡೆದಿದೆ. ಇದರ ಸಿಎನ್‌ಜಿ ರೂಪಾಂತರಗಳು ರೂ.40,000, ಪೆಟ್ರೋಲ್ ಚಾಲಿತ ಮ್ಯಾನುವಲ್ ಟ್ರಾಸ್ಮಿಷನ್ (ಗೇರ್‌ಬಾಕ್ಸ್) ರೂಪಾಂತರಗಳು ರೂ.45,000 ಮತ್ತು ಆಟೋಮೆಟಿಕ್ ಟ್ರಾಸ್ಮಿಷನ್ (ಗೇರ್‌ಬಾಕ್ಸ್) ರೂಪಾಂತರಗಳು ರೂ.50,000 ವರೆಗೆ ರಿಯಾಯಿತಿ ಹೊಂದಿವೆ.

Maruti Suzuki Alto K10 Car Discount On Road Mileage And Emi Details

ಬೆಂಗಳೂರಿನಲ್ಲಿ ನೂತನ ಆಲ್ಟೋ ಕೆ10 ಕಾರು ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇದರ ಎಲ್ಎಕ್ಸ್ಐ (ಪೆಟ್ರೋಲ್) ರೂಪಾಂತರ, ಸರಿ ಸುಮಾರು ರೂ.5.80 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.2.50 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿ ಮಾಡಿದರೆ, ರೂ.3.30 ವರೆಗೆ ಲಕ್ಷ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.6,500 ವರೆಗೆ ಇಎಂಐ ಕಟ್ಟಬೇಕು.

ಮಾರುತಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ನ ವಿಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.6 ಲಕ್ಷ ಆನ್-ರೋಡ್ ದರವನ್ನು ಒಳಗೊಂಡಿದೆ. ಇದನ್ನು ರೂ.2.50 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.3.50 ವರೆಗೆ ಲಕ್ಷ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಗಳಿಗೆ (60 ತಿಂಗಳು) ಮಾಸಿಕ ರೂ.7,000 ವರೆಗೆ ಇಎಂಐ ಪಾವತಿ ಮಾಡಬೇಕು.

Maruti Suzuki Alto K10 Car Discount On Road Mileage And Emi Details

ಈ ಆಲ್ಟೊ ಕೆ10 ಕಾರಿನ ವಿಎಕ್ಸ್ಐ ಪ್ಲಸ್ (ಪೆಟ್ರೋಲ್) ರೂಪಾಂತರ, ರೂ.6.50 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿದೆ. ಈ ಹ್ಯಾಚ್‌ಬ್ಯಾಕ್‌ನ್ನು ರೂ.2.50 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.4 ವರೆಗೆ ಲಕ್ಷ ಸಾಲವಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.8,000 ವರೆಗೆ ಇಎಂಐ ಕಟ್ಟಬೇಕು.

ನೂತನ ಮಾರುತಿ ಸುಜುಕಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ನ ವಿಎಕ್ಸ್ಐ ಎಟಿ (ಪೆಟ್ರೋಲ್) ರೂಪಾಂತರ, ರೂ.6.60 ಲಕ್ಷ ಆನ್-ರೋಡ್ ದರವನ್ನು ಒಳಗೊಂಡಿದೆ. ಈ ಕಾರನ್ನು ರೂ.2.50 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.4.10 ಲಕ್ಷ ವರೆಗೆ ಸಾಲ ಬಾಕಿ ಉಳಿಯುತ್ತದೆ. 8% ಬಡ್ಡಿ ಹಾಕಿ 5 ವರ್ಷಗಳಿಗೆ ಮಾಸಿಕ ರೂ.8,000ಕ್ಕೂ ಅಧಿಕ ಇಎಂಐ ಪಾವತಿ ಮಾಡಬೇಕು.

Maruti Suzuki Alto K10 Car Discount On Road Mileage And Emi Details

ಹೊಸ ಮಾರುತಿ ಆಲ್ಟೊ ಕೆ10 ಕಾರು, 1-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಚಾಲಿತ ರೂಪಾಂತರಗಳು 24.39 ರಿಂದ 24.90 ಕೆಎಂಪಿಎಲ್ ಮತ್ತು ಸಿಎನ್‌ಜಿ ಚಾಲಿತ ರೂಪಾಂತರಗಳು 33.85 ಕೆಎಂ/ಕೆಜಿ ವರೆಗೆ ಮೈಲೇಜ್ ಕೂಡ ನೀಡುತ್ತವೆ. ಈ ಕಾರಿನಲ್ಲಿ 4 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

ಈ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್ ಮತ್ತು ಮೆಟಾಲಿಕ್ ಗ್ರಾನೈಟ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಂಜಿನ್ ಸ್ಟಾರ್ಟ್ - ಸ್ಟಾಪ್ ಬಟನ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್ ಹಾಗೂ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ನಿಮ್ಮ ಗಮನಕ್ಕೆ.. ಇಲ್ಲಿ ಕೆಲವು ಆಲ್ಟೊ ಕಾರಿನ ರೂಪಾಂತರಗಳ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆ ಬಗ್ಗೆ ಮಾತ್ರ ವಿವರಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Saturday, November 9, 2024, 22:22 [IST]
English summary
Maruti suzuki alto k10 car discount on road mileage and emi details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+