Maruti Suzuki: ಕಡಿಮೆ ಬೆಲೆಯ ಮಾರುತಿ ಕಾರುಗಳಿಗೆ ದೊಡ್ಡ ರಿಯಾಯಿತಿ.. ನೀವು ನಿರೀಕ್ಷಿಸಿದ್ದಕ್ಕಿಂತ ಅಧಿಕ!
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ದೇಶಾದ್ಯಂತ ವಿವಿಧ ಅರೆನಾ ಡೀಲರ್‌ಶಿಪ್‌ಗಳು ಈ ಮಾರ್ಚ್‌ನಲ್ಲಿಯೂ ಆಲ್ಟೊ ಕೆ10, ಎಸ್-ಪ್ರೆಸ್ಸೊ, ವ್ಯಾಗನ್ ಆರ್, ಸೆಲೆರಿಯೊ, ಸ್ವಿಫ್ಟ್ ಹಾಗೂ ಇಕೋ ಕಾರುಗಳ ಮೇಲೆ ದೊಡ್ಡಮಟ್ಟದ ರಿಯಾಯಿತಿ ಪ್ರಯೋಜನವನ್ನು ಘೋಷಣೆ ಮಾಡಿವೆ.
ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ (ಆರಂಭಿಕ) ಮಾದರಿಯಾಗಿರುವ ಆಲ್ಟೊ ಕೆ10 (Alto K10) ಭಾರೀ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಇದರ ಆಟೋಮೆಟಿಕ್ ರೂಪಾಂತರ ಒಟ್ಟು ರೂ.62,000, ಮ್ಯಾನುವಲ್ ಆವೃತ್ತಿ ರೂ.57,000 ಮತ್ತು ಸಿಎನ್‌ಜಿ ರೂಪಾಂತರ ರೂ.40,000 ಡಿಸ್ಕೌಂಟ್ ಆಫರ್ ಪಡೆದಿದೆ. ಈ ಕಾರು ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಗರಿಷ್ಠ ಮೈಲೇಜ್ ನೀಡುವುದರೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಕಾರು ಸಹ ಭರ್ಜರಿ ಡಿಸ್ಕೌಂಟ್ ಆಫರ್ ಪಡೆದಿದೆ. ಆಟೊಮೇಟಿಕ್ ರೂಪಾಂತರ ಒಟ್ಟು ರೂ.61,000, ಮ್ಯಾನುವಲ್ ಮಾದರಿ ರೂ.56,000 ಮತ್ತು ಸಿಎನ್‌ಜಿ ರೂಪಾಂತರ ರೂ.39,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರು ರೂ.4.27 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 24.12 ರಿಂದ 32.73 ಕೆಎಂ/ಕೆಜಿ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಸೆಲರಿಯೊ (Maruti Suzuki Celerio) ಕೂಡ ಈ ಮಾರ್ಚ್ ತಿಂಗಳು ಉತ್ತಮ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಆಟೋಮೆಟಿಕ್ ಮಾದರಿ ರೂ.61,000, ಮ್ಯಾನುವಲ್ ರೂಪಾಂತರ ರೂ.56,000 ಮತ್ತು ಸಿಎನ್‌ಜಿ ಆವೃತ್ತಿ ರೂ.39,000 ಡಿಸ್ಕೌಂಟ್ ಆಫರ್ ಒಳಗೊಂಡಿದೆ. ಸೆಲರಿಯೊ ರೂ. 5.37 ಲಕ್ಷದಿಂದ ರೂ.7.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಸಹ ಗರಿಷ್ಠ ಡಿಸ್ಕೌಂಟ್ ಆಫರ್ ಹೊಂದಿದೆ. ಈ ಕಾರಿನ ಆಟೊಮೇಟಿಕ್ ರೂಪಾಂತರ ರೂ.61,000, ಮ್ಯಾನುವಲ್ ಮಾದರಿ ರೂ.56,000 ಮತ್ತು ಸಿಎನ್‌ಜಿ ರೂಪಾಂತರ ರೂ.36,000 ರಿಯಾಯಿತಿ ಸೌಲಭ್ಯವನ್ನು ಒಳಗೊಂಡಿದೆ. ಈ ಕಾರು ರೂ.5.55 ಲಕ್ಷದಿಂದ 6.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 1.0-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ.
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕಾರಿಗೂ ಒಳ್ಳೆಯ ರಿಯಾಯಿತಿ ಪ್ರಯೋಜನ ಲಭ್ಯವಿದೆ. ಇದರ ಆಟೋಮೆಟಿಕ್ ರೂಪಾಂತರ ರೂ.42,000, ಮ್ಯಾನುವಲ್ ಮಾದರಿ ರೂ.37,000 ಮತ್ತು ಸಿಎನ್‌ಜಿ ಆವೃತ್ತಿ ರೂ.22,000 ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಈ ಕಾರು ರೂ. 5.99 ಲಕ್ಷದಿಂದ ರೂ.8.89 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಮುಂಬರುವ ತಿಂಗಳಲ್ಲಿ 4ನೇ ತಲೆಮಾರಿನ ಸ್ವಿಫ್ಟ್ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ.

ಜನಪ್ರಿಯ ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ಕೂಡ ಉತ್ತಮ ರಿಯಾಯಿತಿ ಪ್ರಯೋಜನವನ್ನು ಒಳಗೊಂಡಿದೆ. ಪೆಟ್ರೋಲ್ ರೂಪಾಂತರ ರೂ.29,000 ರಿಯಾಯಿತಿ, ಸಿಎನ್‌ಜಿ ಮಾದರಿ ರೂ.24,000 ಡಿಸ್ಕೌಂಟ್ ಆಫರ್ ಪಡೆದಿದೆ. 7 ಜನ ಕುಳಿತುಕೊಂಡು ಹೋಗಬಹುದಾದ ಈ ಕಾರು, ರೂ.5.32 ಲಕ್ಷದಿಂದ ರೂ.6.58 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ.
ಈ ರಿಯಾಯಿತಿ ಸೌಲಭ್ಯಗಳು ರಾಜ್ಯದಿಂದ ರಾಜ್ಯಕ್ಕೆ ಬಣ್ಣಗಳು, ರೂಪಾಂತರಗಳನ್ನು ಆಧರಿಸಿ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂ ಸಂಪರ್ಕಿಸಿರಿ. ಆಲ್ಟೊ ಕೆ10, ಎಸ್-ಪ್ರೆಸ್ಸೊ, ವ್ಯಾಗನ್ ಆರ್, ಸೆಲೆರಿಯೊ, ಸ್ವಿಫ್ಟ್ ಮತ್ತು ಇಕೋ ಕಾರುಗಳು ಕಡಿಮೆ ಬೆಲೆಯೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ದೊರೆಯುವುದರಿಂದ ಬಹುತೇಕರ ಆಯ್ಕೆಯ ವಾಹನವಾಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications