Maruti Suzuki: ಮಧ್ಯಮ ವರ್ಗದ ಜನರಿಗೆ ಮಾರುತಿ ಸುಜುಕಿಯಿಂದ ದೊಡ್ಡ ಸಿಹಿಸುದ್ದಿ.. ಏನದು?

ದೇಶದ ಅತಿದೊಡ್ಡ ವಾಹನ ತಯಾರಕ ಮಾರುತಿ ಸುಜುಕಿ (Maruti Suzuki), ವರ್ಷವಿಡೀ ರಿಯಾಯಿತಿಯನ್ನು ನೀಡುವುದಕ್ಕೆ ಹೆಸರುವಾಸಿಯಾಗಿದೆ. ಈ ಮೇ ತಿಂಗಳು ಕೂಡ ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಆಯ್ದ ಕಾರುಗಳ ಮೇಲೆ ದೊಡ್ಡ ಮಟ್ಟದಲ್ಲಿ ಡಿಸ್ಕೌಂಟ್‌ನ್ನು ಮುಂದಿವರಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮೊದಲಿಗೆ ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಮಾಡೆಲ್ (ಆರಂಭಿಕ ಮಾದರಿ) ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಪಡೆದುಕೊಂಡಿರುವ ರಿಯಾಯಿತಿ ಪ್ರಯೋಜನದ ಬಗ್ಗೆ ಮಾತನಾಡೋಣ. ಈ ಕಾರು, ಒಟ್ಟು ರೂ.63,100 ವರೆಗೆ ಡಿಸ್ಕೌಂಟ್ ಆಫರ್ ಪಡೆದಿದೆ. ಅದರಲ್ಲಿ ರೂ.45,000 ನಗದು ರಿಯಾಯಿತಿ (Cash Discount), ರೂ.15,000 ವಿನಿಮಯ ಬೋನಸ್ (Exchange Bonus) ಮತ್ತು ರೂ.3,100 ಕಾರ್ಪೊರೇಟ್ ಡಿಸ್ಕೌಂಟ್ (Corporate Discount) ಅನ್ನು ಹೊಂದಿದೆ.

Maruti Suzuki Alto k10 Wagon R Celerio Swift Dzire Cars Have Upto Rs 63 000 Discount In May 2024

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto k10) ಕಾರು, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೂ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 24.39 ರಿಂದ 33.85 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೌಂಟೆಡ್ ಕಂಟ್ರೋಲ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಕೂಡ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರು ಸರಿ ಸುಮಾರು ರೂ.58,100 ವರೆಗೆ ಡಿಸ್ಕೌಂಟ್ ಆಫರ್ ಒಳಗೊಂಡಿದ್ದು, ರೂ.40,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ಮತ್ತು ರೂ.3,100 ಕಾರ್ಪೊರೇಟ್ ರಿಯಾಯಿತಿಗಳು ಕೂಡ ಸೇರಿದೆ. ಈ ಕಾರು ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

Maruti Suzuki Alto k10 Wagon R Celerio Swift Dzire Cars Have Upto Rs 63 000 Discount In May 2024

ಮಾರುತಿ ಸುಜುಕಿ ವ್ಯಾಗನ್ ಆರ್ ಹಾಗೂ ಸೆಲರಿಯೂ (WagonR & Celerio) ಹ್ಯಾಚ್‌ಬ್ಯಾಕ್‌ಗಳು ಕೂಡ ಉತ್ತಮ ರಿಯಾಯಿತಿಯನ್ನು ಹೊಂದಿದ್ದು, ಎಸ್-ಪ್ರೆಸ್ಸೊನಂತೆ ರೂ.58,100 ವರೆಗೆ ಡಿಸ್ಕೌಂಟ್‌ನ್ನು ಪಡೆದಿವೆ. ಅದರಲ್ಲಿ ರೂ.40,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್, ರೂ.3,100 ಕಾರ್ಪೊರೇಟ್ ರಿಯಾಯಿತಿಗಳು ಸಹ ಇವೆ. ವ್ಯಾಗನ್ ಆರ್ ರೂ.5.54 ದಿಂದ ರೂ.7.38 ಲಕ್ಷ ಮತ್ತು ಸೆಲರಿಯೂ ರೂ.5.37 ರಿಂದ ರೂ.7.09 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜನಪ್ರಿಯ ಕಾರಾಗಿದ್ದು, ಒಟ್ಟು ರೂ.38,100 ವರೆಗೆ ಡಿಸ್ಕೌಂಟ್ ಆಫರ್ ಪಡೆದಿದ್ದು, ರೂ.20,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ಹಾಗೂ ರೂ.3,100 ಕಾರ್ಪೊರೇಟ್ ರಿಯಾಯಿತಿಯೂ ಸೇರಿದೆ. ಈ ಕಾರು, ರೂ.6.24 ಲಕ್ಷದಿಂದ ರೂ.9.28 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Maruti Suzuki Alto k10 Wagon R Celerio Swift Dzire Cars Have Upto Rs 63 000 Discount In May 2024

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಕಾರು ರೂ.33,100 ವರೆಗೆ ಮತ್ತು ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ರೂ.38,100 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಡಿಜೈರ್ ರೂ.6.57 ಲಕ್ಷದಿಂದ ರೂ.9.39 ಲಕ್ಷ ಹಾಗೂ ಇಕೋ ವ್ಯಾನ್ ರೂ.5.32 ಲಕ್ಷದಿಂದ ರೂ.6.58 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ನಿಮ್ಮ ಗಮನಕ್ಕೆ.. ಈ ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, May 5, 2024, 10:00 [IST]
English summary
Maruti suzuki alto k10 wagon r celerio swift dzire cars have upto rs 63000 discount in may 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+