Maruti Suzuki: ಈಗಲೇ ಮಾರುತಿ ಕಾರುಗಳನ್ನು ಮನೆಗೆ ತಂದು ಬಿಡಿ.. ಮತ್ತೆ ಈ ಅವಕಾಶ ಸಿಗುವುದಿಲ್ಲ!
ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಗೊಂಡಿದೆ. ಕಂಪನಿಯು ನೆಕ್ಸಾ (NEXA) ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಕಾರುಗಳಿಗೆ ಈ ಮೇ ತಿಂಗಳಲ್ಲಿಯೂ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಘೋಷಿಸಿದೆ. ಆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಮೊದಲಿಗೆ ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪಡೆದುಕೊಂಡಿರುವ ರಿಯಾಯಿತಿ ಸೌಲಭ್ಯದ ಬಗ್ಗೆ ಮಾತನಾಡೋಣ. ಈ ಕಾರು ಒಟ್ಟು ರೂ.58,000 ವರೆಗೆ ಡಿಸ್ಕೌಂಟ್ ಆಫರ್ ಹೊಂದಿದೆ. ಅದರಲ್ಲಿ ರೂ.40,000 ನಗದು ರಿಯಾಯಿತಿ (Cash Discount), ರೂ.15,000 ವಿನಿಮಯ ಬೋನಸ್ (Exchange Bonus) ಹಾಗೂ ರೂ.3,000 ಕಾರ್ಪೊರೇಟ್ ರಿಯಾಯಿತಿ (Corporate Discount)ಯನ್ನು ಪಡೆದಿದೆ. ಹೊಸ ಇಗ್ನಿಸ್ ಮಾದರಿಯು ರೂ.5.84 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.

ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಕೂಡ ಉತ್ತಮವಾದ ಡಿಸ್ಕೌಂಟ್ ಆಫರ್ ಹೊಂದಿದ್ದು, ಸರಿ ಸುಮಾರು ರೂ.60,000 ವರೆಗೆ ರಿಯಾಯಿತಿಯನ್ನು ಪಡೆದಿದೆ. ಈ ಕಾರು ರೂ.8.07 ಲಕ್ಷದಿಂದ ರೂ.11.91 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಜೆಯಲ್ಲಿ ಸಿಗಲಿದ್ದು, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz) ಸೆಡಾನ್, ಈ ಮೇನಲ್ಲಿ ಒಟ್ಟು ರೂ.48,000 ವರೆಗೆ ರಿಯಾಯಿತಿಯನ್ನು ಹೊಂದಿದೆ. ಅದರೊಳಗೆ ರೂ.20,000 ನಗದು ರಿಯಾಯಿತಿ, ರೂ.25,000 ವಿನಿಮಯ ಬೋನಸ್ ಮತ್ತು ರೂ.3,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆದಿದೆ. ಸಿಯಾಜ್ ಕಾರು ರೂ.9.40 ಲಕ್ಷದಿಂದ ರೂ.12.29 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

ಮಾರುತಿ ಸುಜುಕಿ ಮಾರಾಟಗೊಳಿಸುವ ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿರುವ ಜಿಮ್ನಿ (Jimny) ರೂ.50,000 ನಗದು ರಿಯಾಯಿತಿಯನ್ನು ಮಾತ್ರ ಹೊಂದಿದೆ. ಈ ಕಾರು, ರೂ.12.74 ಲಕ್ಷದಿಂದ ರೂ.14.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 16.39 ರಿಂದ 16.94 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಸುಮಾರು ರೂ.74,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಆ ಮೊತ್ತದಲ್ಲಿ ರೂ.20,000 ನಗದು ರಿಯಾಯಿತಿ, ರೂ.50,000 ವಿನಿಮಯ ಬೋನಸ್ ಮತ್ತು ರೂ.4,000 ಕಾರ್ಪೊರೇಟ್ ರಿಯಾಯಿತಿಯು ಸೇರಿದೆ. ಈ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ರೂ.10.99 ಲಕ್ಷದಿಂದ ರೂ.20.09 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಒಟ್ಟು ರೂ.13,000 ಡಿಸ್ಕೌಂಟ್ ಆಫರ್ ಹೊಂದಿದೆ. ಈ ಕಾರು ರೂ.7.51 ಲಕ್ಷದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಎಕ್ಸ್ಎಲ್6 ಕಾರು ರೂ.20,000 ರಿಯಾಯಿತಿ ಪ್ರಯೋಜನವನ್ನು ಒಳಗೊಂಡಿದ್ದು, ರೂ.11.61 ಲಕ್ಷ ಪ್ರಾರಂಭಿಕ ದರವನ್ನು ಹೊಂದಿದೆ. ನಿಮ್ಮ ಗಮನಕ್ಕೆ ಈ ರಿಯಾಯಿತಿ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications