Maruti Suzuki: ಈ ಪ್ರಮುಖ ಕಾರಿಗೆ ರೂ.55,000 ಡಿಸ್ಕೌಂಟ್, 5-ಸೀಟರ್.. ರೂ.6.66 ಲಕ್ಷ, 30 Km ಮೈಲೇಜ್!

ಭಾರತದ ನಂಬರ್ 1 ಕಾರು ಮಾರಾಟ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki), ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ನೆಕ್ಸಾ ಹಾಗೂ ಅರೆನಾ ಡೀಲರ್‌ಶಿಪ್ ಮೂಲಕ ಹತ್ತಕ್ಕೂ ಹೆಚ್ಚು ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಈ ಅಕ್ಟೋಬರ್ ತಿಂಗಳು ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ (Discount) ಘೋಷಣೆ ಮಾಡಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿರುವ ಬಲೆನೊ (Baleno) ಸಹ ದೊಡ್ಡಮಟ್ಟದ ಹಣಕಾಸಿನ ಪ್ರಯೋಜನ ಹೊಂದಿದೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಬಲೆನೊ (Maruti Suzuki Baleno) ಹ್ಯಾಚ್‌ಬ್ಯಾಕ್‌ನ ಎಂಟಿ (ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರಗಳು (Variants), ಒಟ್ಟು ರೂ.50,100 ವರೆಗೆ ರಿಯಾಯಿತಿ ಒಳಗೊಂಡಿವೆ. ಅದರಲ್ಲಿ ರೂ.30,000 ಗ್ರಾಹಕ ಕೊಡುಗೆ (Consumer Offer) ಹಾಗೂ ರೂ.15,000 ವಿನಿಮಯ ಬೋನಸ್ (Exchange Bonus) ಸೇರಿದಂತೆ ಇತರೆ ಹಣಕಾಸಿನ ಪ್ರಯೋಜನಗಳನ್ನು ಹೊಂದಿವೆ.

Maruti Suzuki Baleno Get Upto 55 000 Discount In October 2024 Details

ಈ ಬಲೆನೊ ಕಾರಿನ ಎಎಂಟಿ (ಆಟೋಮೇಟೆಡ್ ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರಗಳು ಬರೋಬ್ಬರಿ ರೂ.55,100 ವರೆಗೆ ರಿಯಾಯಿತಿ ಹೊಂದಿವೆ. ಇದರೊಳಗೆ ರೂ.35,000 ಗ್ರಾಹಕ ಕೊಡುಗೆ ಅಥವಾ ನಗದು ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್ ಒಳಗೊಂಡನಂತೆ ಹಲವು ರಿಯಾಯಿತಿ ಕೊಡುಗೆಗಳು ಕೂಡ ಸೇರಿವೆ. ವಿಶೇಷವಾಗಿ ಸಿಎನ್‌ಜಿ ಚಾಲಿತ ರೂಪಾಂತರಗಳು ರೂ.40,100 ವರೆಗೆ ಹಣಕಾಸು ಪ್ರಯೋಜನಗಳನ್ನು ಪಡೆದಿವೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್‌ನ ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ರೂ.6.66 ಲಕ್ಷ ಹಾಗೂ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಲೆವೆಲ್ ವೇರಿಯೆಂಟ್) ರೂ.9.83 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Maruti Suzuki Baleno Get Upto 55 000 Discount In October 2024 Details

ನೂತನ ಮಾರುತಿ ಸುಜುಕಿ ಬಲೆನೊ ಕಾರು ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಈ ಕಾರಿನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿರುವ ಈ ಕಾರು, 22.35 ರಿಂದ 30.61 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಹೊಸ ಬಲೆನೊ ಹ್ಯಾಚ್‌ಬ್ಯಾಕ್‌ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

Maruti Suzuki Baleno Get Upto 55 000 Discount In October 2024 Details

ಒಟ್ಟಾರೆಯಾಗಿ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ನೂತನ ಬಲೆನೊ ಕಾರು ಖರೀದಿಸಬೇಕು ಎಂದುಕೊಳ್ಳುವ ಗ್ರಾಹಕರಿಗೆ ಈ ರಿಯಾಯಿತಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಬೆಂಗಳೂರಿನ ಆಯ್ದ ನೆಕ್ಸಾ ಡೀಲರ್‌ಶಿಪ್‌ಗಳು ಎಲ್ಲ ಕಾರುಗಳ ಖರೀದಿಗೆ ಮೇಲೆ ಘೋಷಿಸಿರುವ ವಿವಿಧ ಹಣಕಾಸು ಪ್ರಯೋಜನಗಳು ಅಕ್ಟೋಬರ್ 31 ರವರೆಗೆ ಮಾತ್ರ ಮಾನ್ಯವಾಗಿರಲಿವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 9, 2024, 10:42 [IST]
English summary
Maruti suzuki baleno get upto 55000 discount in october 2024 details
Read more on maruti suzuki india diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+