ಸ್ವಿಫ್ಟ್‌ಗಿಂತಲೂ ಕಡಿಮೆ ಬೆಲೆಗೆ ಬಲೆನೋ ಮನೆಗೆ ತನ್ನಿ: ಹೇಗೆಂದು ತಿಳಿಯಲು ಈ ಟ್ರಿಕ್ ಉಪಯೋಗಿಸಿದರೆ ಸಾಕು!
ಮಾರುತಿ ಸುಜುಕಿ ಕಂಪನಿಯ ಪ್ರಮುಖ ಕಾರುಗಳು ಯಾವುದು ಎಂದು ಕೇಳಿದರೆ ಪ್ರತಿಯೊಬ್ಬರೂ ಉತ್ತರಿಸುವ ಕಾರು ಮಾದರಿಗಳಲ್ಲಿ ಬಲೇನೋ ಮತ್ತು ಸ್ವಿಫ್ಟ್ ಸೇರಿರುತ್ತವೆ. ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಒಂದು ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳನ್ನು ಖರೀದಿಸಬೇಕು ಎಂದುಕೊಂಡರೆ ಇರುವ ಕೆಲವೇ ಕೆಲವು ಅತ್ಯುತ್ತಮ ಆಯ್ಕೆಗಳಲ್ಲಿ ಇವುಗಳೂ ಸಹ ಒಂದು. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ 6.49 ಲಕ್ಷ. ಎಕ್ಸ್ ಶೋ ರೂಮ್ ಬೆಲೆಯಿಂದ ಆರಂಭವಾಗುತ್ತದೆ. ಅಂದರೆ ಬಲೆನೋ ಕಾರಿನ ಆರಂಭಿಕ ವೇರಯಂಟ್‌ಗಿಂತ 17000 ರೂ ಕಮ್ಮಿಯಷ್ಟೇ.
ಆದರೆ ಸ್ವಿಫ್ಟ್ ಮತ್ತು ಬಲೆನೋ ಕಾರುಗಳನ್ನು ಪರಸ್ಪರ ಹೋಲಿಕೆ ಮಾಡಿ ನೋಡಿದರೆ ಅವುಗಳಲ್ಲಿ ಸ್ಥಳಾವಕಾಶ, ಗಾತ್ರ ಮತ್ತು ಎಂಜಿನ್ ಆಯ್ಕೆಗಳಲ್ಲಿ ಮುಂದೆ ನಿಲ್ಲುವುದು ಮಾರುತಿ ಸುಜುಕಿ ಬಲೆನೋ. ಇದೀಗ ಬಲೆನೋ ಕಾರಿಗೆ ಈ ತಿಂಗಳಲ್ಲಿ ಮಾರುತಿ ಸುಜುಕಿ ದೊಡ್ಡ ಡಿಸ್ಕೌಂಟ್ ಅನ್ನು ಸಹ ನೀಡುತ್ತಿದ್ದು, ಸ್ವಿಫ್ಟ್‌ಗಿಂತ ಕಡಿಮೆ ಬೆಲೆಗೆ ಬಲೆನೋ ಕಾರನ್ನು ಖರೀದಿಸಬಹುದಾಗಿದೆ ಎಂದರೆ ನೀವು ನಂಬಲೇ ಬೇಕು.

ಹೌದು, ನೀವು ಕೇಳಿದ್ದು ನಿಜ. ಮಾರುತಿ ಸುಜುಕಿ ಕಂಪನಿಯು ಜುಲೈ ತಿಂಗಳಲ್ಲಿ ಬಲೆನೋ ಕಾರಿಗೆ ಸುಮಾರು ೪೦ ಸಾವಿರ ರೂಗಳ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಇದರಿಂದಾಗಿ ಸ್ವಿಫ್ಟ್‌ಗಿಂತಲೂ ಬಲೆನೋ ಕಾರನ್ನು ನೀವು ಕಡಿಮೆ ಬೆಲೆಗೆ ಮನೆಗೆ ತರಬಹುದಾಗಿದೆ. ಈಗ ಬಲೆನೋ ಕಾರಿನ ಆರಂಭಿಕ ಆವೃತ್ತಿಯಾದ ಸಿಗ್ಮಾ ಟ್ರಿಮ್ ನಿಮಗೆ ಕೇವಲ 6.09 ಲಕ್ಷ ರೂಗಳಿಗೆ ಖರೀದಿ ಮಾಡಬಹುದು.
ನೂತನ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕಾರು ರೂ.6.49 ಲಕ್ಷದಿಂದ ರೂ.9.65 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ, ಝಡ್ಎಕ್ಸ್ಐ ಪ್ಲಸ್ ರೂಪಾಂತರ (ವೇರಿಯೆಂಟ್)ಗಳು ಮತ್ತು ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ, ನಾವೆಲ್ ಆರೆಂಜ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ.

ಬಲೆನೋ ಬಗ್ಗೆ ನೋಡುವುದಾದರೆ, ಹೊಸ ಮಾರುತಿ ಸುಜುಕಿ ಬಲೆನೋ (Maruti Suzuki Baleno) ಬೆಲೆಯು ರೂ.6.66 ಲಕ್ಷದಿಂದ ರೂ.9.88 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಇದೆ. ಇದರ ಆನ್‌ರೋಡ್ ಬೆಲಯು ರೂ. 8.45 ಲಕ್ಷದಿಂದ ಆರಂಭವಾಗಿ ರೂ.12.25 ಲಕ್ಷವಿದೆ. ಮಾರುತಿ ಬಲೆನೋ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ನಾಲ್ಕು ಸ್ಪೀಕರ್‌ಗಳು ಮತ್ತು ಎರಡು ಟ್ವೀಟರ್‌ಗಳೊಂದಿಗೆ ಆರ್ಕಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಒಪ್ಯುಲೆಂಟ್ ರೆಡ್, ಲಕ್ಸ್ ಬೀಜ್ ಮತ್ತು ಪರ್ಲ್ ಮಿಡ್ನೈಟ್ ಬ್ಲಾಕ್ ಎಂಬ ಏಳು ಮೊನೊಟೋನ್ ಬಣ್ಣದ ಆಯ್ಕೆಗಳನ್ನು ಬಲೆನೊಗೆ ನೀಡಲಾಗಿದೆ. ಬಲೆನೊ 318 ಲೀಟರ್‌ಗಳ ಬೂಟ್ ಸ್ಪೇಸ್ ಹೊಂದಿದ್ದು, ಇದು CNG ವೇರಿಯೆಂಟ್‌ಗಳಲ್ಲಿ ಮಾತ್ರ 55 ಲೀಟರ್ ಕಡಿಮೆಯಾಗುತ್ತದೆ.
ಎಂಜಿನ್: ಬಲೆನೋ ಪೆಟ್ರೋಲ್ ಹಾಗೂ ಸಿಎನ್‌ಜಿಯಲ್ಲಿ ಲಭ್ಯವಿದೆ, ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 90 PS ಪವರ್ ಮತ್ತು 113 Nm ಟಾರ್ಕ್ ಹೊರಹಾಕುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಯೊಂದಿಗೆ ಲಭ್ಯವಿದೆ. ಅದೇ ಎಂಜಿನ್‌ನ CNG ಆವೃತ್ತಿಯು 77.5 PS ಪವರ್ ಮತ್ತು 98.5 Nm ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್‌ನಲ್ಲಿ ಮಾತ್ರ ಲಭ್ಯವಿದೆ.
1.2 - ಲೀಟರ್ MT ಆವೃತ್ತಿಯು 22.35 ಕಿ.ಮೀ ಮೈಲೇಜ್ ನೀಡಿದರೆ, 1.2 - ಲೀಟರ್ AMT ಆವೃತ್ತಿಯು 22.94 kmpl ಮೈಲೇಜ್ ನೀಡುತ್ತದೆ. ಹಾಗೆಯೇ ಕೊನೆಯ 1.2 - ಲೀಟರ್ MT CNG ಆವೃತ್ತಿಯು ಬರೋಬ್ಬರಿ 30.61 km/kg ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications