Maruti Suzuki: ಇತ್ತೀಚೆಗಷ್ಟೆ ಬಿಡುಗಡೆಯಾದ ಹೊಸ ಮಾರುತಿ ರೀಗಲ್ ಎಡಿಷನ್ ವಿಶೇಷತೆಗಳು!
ಮಾರುತಿ ಸುಜುಕಿ, ಇತ್ತೀಚೆಗೆ ತನ್ನ ಜನಪ್ರಿಯ ಕಾರಾದ ಬಲೆನೊಗೆ ರೀಗಲ್ ಆವೃತ್ತಿ (Baleno Regal Edition)ಯನ್ನು ಪರಿಚಯಿಸಿದೆ. ಹೊಸ ಬಲೆನೊ ರೀಗಲ್ ಆವೃತ್ತಿಗೆ ವಿಶಿಷ್ಟವಾದ ಬಾಡಿ ಸೈಡ್ ಮೋಲ್ಡಿಂಗ್ ಮತ್ತು ಡೋರ್ ವೈಸರ್‌ಗಳ ಜೊತೆಗೆ ಹಿಂಭಾಗದ ಅಂಡರ್‌ಬಾಡಿ ಸ್ಪಾಯ್ಲರ್ ಮತ್ತು ಹಿಂಬದಿಯ ಅಲಂಕರಣಕ್ಕೆ ಇದೇ ರೀತಿಯ ಸ್ಟೈಲಿಂಗ್ ನೀಡಲಾಗಿದೆ. ಬಲೆನೊ ರೀಗಲ್ ಆವೃತ್ತಿಯ ಒಳಾಂಗಣವು ಹೊಸ ಸೀಟ್ ಕವರ್, ಇಂಟೀರಿಯರ್ ಸ್ಟೈಲಿಂಗ್ ಕಿಟ್, ವಿಡೋ ಸ್ಕ್ರೀನ್ ಮತ್ತು ಎಲ್ಲಾ ಕ್ಲೈಮೆಟ್ 3D ಮ್ಯಾಟ್‌ಗಳಿಂದ ಅಲಂಕರಿಸಲ್ಪಟ್ಟಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
ಬೆಲೆ: ಹೊಸ ಮಾರುತಿ ಬಲೆನೋ ರೀಗಲ್ ಎಡಿಷನ್ ವಿಶೇಷ ಆವೃತ್ತಿಯು ಆಟೋಮ್ಯಾಟಿಕ್ ಮತ್ತು CNG ರೂಪಾಂತರಗಳನ್ನು ಒಳಗೊಂಡಂತೆ ನ್ಯೂ ಏಜ್ ಬಲೆನೊದ ಎಲ್ಲಾ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಮಾರುತಿ ಬಲೆನೊ ರೀಗಲ್ ಆವೃತ್ತಿಯ ಬೆಲೆಯು ರೂ. 8.93 ಲಕ್ಷ (ಎಕ್ಸ್ ಶೋ ರೂಂ)ವಿದೆ. ಕಾಂಪ್ಲಿಮೆಂಟರಿ ಆಕ್ಸೆಸರಿ ಕಿಟ್ ಜೊತೆಗೆ ಸುಧಾರಿತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಹುಡುಕುತ್ತಿರುವ ಗ್ರಾಹಕರಿಗೆ ಬೆಸ್ಟ್ ಆಯ್ಕೆಯಾಗಿದೆ ಎಂದು ಮಾರುತಿ ಹೇಳಿದೆ.

ಗ್ರಿಲ್ ಮೇಲಿನ ಅಲಂಕಾರ, ಮುಂಭಾಗದ ಅಂಡರ್‌ಬಾಡಿ ಸ್ಪಾಯ್ಲರ್ ಮತ್ತು ಫಾಗ್ ಲ್ಯಾಂಪ್ ಅಲಂಕರಣವು ಹೊರಭಾಗಗಳಿಗೆ ಗಮನಾರ್ಹ ನೋಟವನ್ನು ನೀಡುತ್ತದೆ. ನ್ಯೂ ಏಜ್ ಬಲೆನೊದ ರೀಗಲ್ ಆವೃತ್ತಿಯು ಕ್ಯಾಬಿನ್ ಸೌಕರ್ಯವನ್ನು ಹೆಚ್ಚಿಸಲು ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸೊಗಸಾದ ಆಕರ್ಷಣೆಯನ್ನು ಹೆಚ್ಚಿಸಲು ಎಚ್ಚರಿಕೆಯಿಂದ ಸಂಗ್ರಹಿಸಲಾದ ಈ ಪರಿಕರಗಳ ಶ್ರೇಣಿಯನ್ನು ನೀಡುತ್ತಿದೆ.
ವೈಶಿಷ್ಟ್ಯಗಳು: ಬಲೆನೊ ಝೀಟಾ ರೀಗಲ್ ಎಡಿಷನ್ ಕಾರಿನಲ್ಲಿ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟ್ ಮಾಡಬಹುದಾದ ರಿಯರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಅಲಾಯ್ ವ್ಹೀಲ್ಸ್, ಮುಂಭಾಗ ಹಾಗೂ ಹಿಂಭಾಗದ ಪವರ್ ವಿಂಡೋಸ್ ಅನ್ನು ಹೊಂದಿದೆ.

NEXA ಸುರಕ್ಷತಾ ಶೀಲ್ಡ್‌ನಿಂದ ಸುರಕ್ಷಿತವಾಗಿರುವ ಹೊಸ ಬಲೆನೊ ರೀಗಲ್ ಆವೃತ್ತಿಯು 6 ಏರ್‌ಬ್ಯಾಗ್‌ಗಳು, ESP, 40ಕ್ಕೂ ಹೆಚ್ಚು ಸ್ಮಾರ್ಟ್ ವೈಶಿಷ್ಟ್ಯಗಳು, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS ಅನ್ನು ಹೊಂದಿದೆ. ನಿಯಂತ್ರಣ ಮತ್ತು ಉನ್ನತ ಮಟ್ಟದ ಅನುಭವಕ್ಕಾಗಿ 22.86 cm ಡಿಸ್ಪ್ಲೇಯೊಂದಿಗೆ SmartPlay Pro+ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ. ಮುಂದಿನ ಪೀಳಿಗೆಯ ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ಸ್ ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿದೆ.
ಇವಿಷ್ಟೇ ಅಲ್ಲದೇ ನ್ಯೂ ಏಜ್ ಬಲೆನೊ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಆಟೋ ಡಿಮ್ಮಿಂಗ್ ಇಂಟೀರಿಯರ್ ರಿಯರ್ ವ್ಯೂ ಮಿರರ್, 360 ವ್ಯೂ ಕ್ಯಾಮೆರಾ, ಡ್ರೈವರ್‌ಗಾಗಿ ಬಣ್ಣದ ಹೆಡ್ ಅಪ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಸೇರಿದಂತೆ ಉನ್ನತ-ಮಟ್ಟದ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ.
ಮಾರುತಿ ಬಲೆನೊ ರೀಗಲ್ ಎಡಿಷನ್ ಬಣ್ಣಗಳು 8 ಬಣ್ಣಗಳಲ್ಲಿ ಲಭ್ಯವಿದೆ: ಆರ್ಕ್ಟಿಕ್ ವೈಟ್, ಪ್ಯೂಲೆಂಟ್ ರೆಡ್, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಮಿಡ್ನೈಟ್ ಬ್ಲ್ಯಾಕ್ ಪರ್ಲ್, ಗ್ರಾಂಡ್ಯೂರ್ ಗ್ರೇ, ಲಕ್ಸ್ ಬೀಜ್, ನೆಕ್ಸಾ ಬ್ಲೂ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಬಣ್ಣಗಳು ಖರೀದಿದಾದರರಿಗೆ ಆಕರ್ಷಕ ಆಯ್ಕೆಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications