ಮಾರುತಿಯ ಈ ಕಾರಿನಲ್ಲಿ ಇದೀಗ ಫುಲ್ ಸೇಪ್ಟಿ: ಬೆಲೆಯೂ ಕಮ್ಮಿ, ಬೈಕ್‌ನಂತೆ ಮೈಲೇಜ್!
ಮಾರುತಿ ಸುಜುಕಿ ಬ್ರೆಝಾ ಕಾರು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಎಸ್‌ಯುವಿ. ಸಾಕಷ್ಟು ಸಂಖ್ಯೆಯಲ್ಲಿ ಈ ಎಸ್‌ಯುವಿ ಮಾರಾಟವಾಗುತ್ತಿದ್ದು, ಮಾರುತಿ ಕಾರುಗಳಲ್ಲಿ ಇದು ಬಲಿಷ್ಟವಾದ ಕಾರೆಂದು ಹೆಸರುವಾಸಿಯಾಗಿದೆ. ಇದೀಗ ಈ ಕಾರಿನ ಸಿಎನ್‌ಜಿ ಮಾದರಿಯಲ್ಲಿ ಹೊಸ ಸೇಫ್ಟಿ ಫೀಚರ್‌ಗಳು ಸೇರಿಕೊಂಡಿದೆ ಎಂದು ವರದಿಯಾಗಿದೆ.
ಹೌದು, ಇದೀಗ ಮಾರುತಿ ಸುಜುಕಿ ಸಿಎನ್‌ಜಿ ಮಾದರಿಯಲ್ಲಿ ಇಎಸ್‌ಪಿ ಅಥವಾ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಎಂಬ ಫೀಚರ್ ಸಿಗುತ್ತಿದ್ದು, ಇದು ಈ ಕಾರಿಗೆ ಇನ್ನೂ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲಿದೆ. ಈ ಫೀಚರ್ ಅನ್ನು ಸೇರಿಸಿರುವುದರಿಂದಾಗಿ ಈ ಕಾರು ಸ್ಕಿಡ್ ಆಗುವುದು ಮತ್ತು ಇನ್ನಿತರ ಅಪಾಯಕಾರಿ ವಿಷಯಗಳನ್ನು ಕಂಟ್ರೋಲ್ ಮಾಡುತ್ತದೆ.

ಮಾರತಿ ಸುಜುಕಿ ಬ್ರೆಝಾದಲ್ಲಿ ಇಎಸ್‌ಪಿ ಮಾತ್ರವಲ್ಲದೇ, ಇದೀಗ ಮಾರುತಿ ಬ್ರೆಝಾ ಕಾರಿನ ಎಲ್ಲಾ ಮಾದರಿಯಲ್ಲೂ ಹಿಲ್ ಹೋಲ್ಡ್ ಅಸಿಸ್ಟ್ ಫೀಚರ್ ಅನ್ನು ಸಹ ಸೇರಿಸಲಾಗಿದೆ. ಈ ಫೀಚರ್ ಮಾರುತಿ ಸುಜುಕಿ ಬ್ರೆಝಾ ಕಾರಿನ ಎಲ್ಲಾ ವೇರಿಯಂಟ್‌ಗಳಲ್ಲಿ ಸ್ಟಾಂಡರ್ಡ್ ಆಗಿ ಲಭ್ಯವಾಗಲಿದೆ. ಈ ಮೂಲಕ ವಾಹನ ಚಲಾಯಿಸುವವರಿಗೆ ಮತ್ತಷ್ಟು ಹೆಚ್ಚಿನ ಅನುಭವವನ್ನು ನೀಡಲಿದೆ.
ಮಾರುತಿ ಸುಜುಕಿ ಬ್ರೆಝಾ ಬಗ್ಗೆ ನೋಡುವುದಾದರೆ, ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್‌ಯುವಿಗಳಲ್ಲಿ ಮಾರುತಿ ಸುಜುಕಿ ಬ್ರೆಝಾ (Maruti Brezza) ಸಹ ಒಂದು. ಈ ಕಾರು ಭಾರತದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ 6 ಮೊನೊಟೋನ್, 3 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 5- ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಎಸ್‌ಯುವಿ, 1.5 - ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಹೊಂದಿದೆ.
ಈ ಕಾರಿನ ಕುರಿತಾದ ಇತರ (Maruti Suzuki Brezza) ಮಾಹಿತಿಗಳನ್ನು ಹೇಳುವುದಾದರೆ, ಮಾರುತಿ ಸುಜುಕಿ ಭಾರತದ ಮಾರುಕಟ್ಟೆಯಲ್ಲಿ 2016ರಲ್ಲಿ ಈ ಕಾರನ್ನು ವಿಟಾರಾ ಬ್ರೆಝಾ (Vitara Brezza) ಹೆಸರಿನಲ್ಲಿ ಲಾಂಚ್ ಮಾಡಿತ್ತು. ಕಾಲಾಂತರದಲ್ಲಿ ಹೆಸರನ್ನು ಬದಲಾಯಿಸಿ, 'ಬ್ರೆಝಾ' ಎಂಬುದನ್ನು ಉಳಿಸಿಕೊಂಡಿತು. ಬಿಡುಗಡೆಗೊಂಡ ದಿನದಿಂದಲೂ ಇದಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಈವರೆಗೆ 10 ಲಕ್ಷ ಯುನಿಟ್ ಕಾರನ್ನು ಮಾರಾಟಗೊಳಿಸಿದ ಮೈಲಿಗಲ್ಲನ್ನು ಸಾಧಿಸಿದೆ.

ಈ ಕಾರು 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಸಿಎನ್‌ಜಿ ಪವರ್ ಟ್ರೈನ್ ಪಡೆದಿರುವ ಕಾರು, ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲು ಶಕ್ತವಾಗಿದೆ.
ಈ ಮಾರುತಿ ಸುಜುಕಿ ಬ್ರೆಝಾ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4 - ಸ್ಪೀಕರ್ ಸೌಂಡ್ ಸಿಸ್ಟಮ್, ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications